fbpx
ಸಮಾಚಾರ

ತಮ್ಮ ಇಡೀ ವೇತನ, ಭತ್ಯೆಯನ್ನು ದಾನ ಮಾಡಿದ ಕ್ರಿಕೆಟ್ ದೇವರು!

ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಇತ್ತೀಚಿಗೆ ಮುಗಿದಿದ್ದು, ಅವರು ಸಂಸದರ ವೇತನ ಹಾಗೂ ಭತ್ಯೆಯನ್ನೆಲ್ಲಾ ಪ್ರಧಾನಿ ಪರಿಹಾರ ನಿಧಿಗೆ ದಾನವಾಗಿ ನೀಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದ ಕಳೆದ ಆರು ವರ್ಷಗಳಲ್ಲಿ ಸಚಿನ್‌ ತೆಂಡೂಲ್ಕರ್‌ ಅವರಿಗೆ ಸುಮಾರು 90 ಲಕ್ಷ ರೂಪಾಯಿಗೂ ಅಧಿಕ ವೇತನ, ಭತ್ಯೆ ಬಂದಿತ್ತು.

 

 

ಸಚಿನ್ ಅವರಿಂದ ದೇಣಿಗೆ ಪಡೆದಿದ್ದಕ್ಕೆ ದೃಢೀಕರಣ ಪತ್ರ ಹೊರಡಿಸಿರುವ ಪ್ರಧಾನಿಮಂತ್ರಿಗಳ ಕಾರ್ಯಾಲಯವು “ಪ್ರಧಾನಿಯವರು ಸಚಿನ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರು ಈ ದೇಣಿಗೆಯನ್ನು ತೊಂದರೆಯಲ್ಲಿರುವವರಿಗೆ ಸಹಾಯ ಮಾಡಲು ಬಳಸಲಾಗುವುದು” ಎಂದು ಬಿಡುಗಡೆ ಮಾಡಿರುವ ಪತ್ರದಲ್ಲಿ ತಿಳಿಸಿದೆ.

 

 

ಸಚಿನ್ ತೆಂಡೂಲ್ಕರ್ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಕೂಡ ಒಳ್ಳೆ ರೀತಿಯಾಗಿ ಬಳಸಿಕೊಂಡಿದ್ದು ದೇಶಾದ್ಯಂತ 7.4 ಕೋಟಿ ರೂಪಾಯಿ ವೆಚ್ಚದಲ್ಲಿ 185 ಯೋಜನೆಗಳಿಗೆ ಅನುಮೋದನೆ ನೀಡಿರುವುದಾಗಿ ಸಚಿನ್ ಅವರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಪ್ರಾಸ್ತಾಪಿಸಲಾಗಿದೆ. ವಿಶೇಷ ಅಂದರೆ ಸಚಿನ್ ಅನುಮೋದನೆ ನೀಡಿರುವ ಯೋಜನೆಗಳ ಪೈಕಿ 30 ಕೋಟಿ ರೂಪಾಯಿಗಳನ್ನು ಶಿಕ್ಷಣಕ್ಕೆ ಸಂಭಂದಪಟ್ಟವಾಗಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top