fbpx
ಸಿನಿಮಾ

ಫಿಲಂ ಇಂಡಸ್ಟ್ರಿ ಗೆ ಬರ್ಬೇಕು ಅನ್ಕೊಂಡಿದ್ರೆ ಈ ಒಂದು ವಿಷ್ಯ ಚೆನ್ನಾಗಿ ತಲೆಲಿಟ್ಟ್ಕೊಳ್ಳಿ – ಸೋಹಾ ಅಲಿ ಖಾನ್

ಬಾಲಿವುಡ್ ನಟಿ ಹಾಗು ‘ ಪೆರಲ್ಸ್ ಆಫ್ ಬೀಯಿಂಗ್ ಮಾಡರೇಟ್ಲಿ ಫೇಮಸ್‌‌‌’ ಎಂಬ ಬುಕ್ ಬರೆದಿರುವ ಲೇಖಕಿ ಸೋಹಾ ಅಲಿ ಖಾನ್ ರವರು ಹೇಳಿಕೆ ನೀಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಸೂಕ್ಷ್ಮ ಮನಸ್ಸುಳ್ಳ ವ್ಯಕ್ತಿಗಳು ಬಾಲಿವುಡ್ ಚಿತ್ರರಂಗಕ್ಕೆ ಬರಬಾರದು ಎಂದು ಹೇಳಿದ್ದಾರೆ.

 

 

ಮುಂಬೈ ನಗರದಲ್ಲಿ ಹಮ್ಮಿಕೊಂಡಿದ್ದ ‘ಮಿಸ್ ಫ್ಯಾಸಿನಾ 2018’ ಎಂಬ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸೋಹಾ ಅಲಿ ಖಾನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ರೂಪದರ್ಶಿಯರು ಮಾಡಬೇಕಾದ ಮತ್ತು ಮಾಡಬಾರದ ವಿಷಯದ ಬಗ್ಗೆ ಕೂಡ ಅಭಿಪ್ರಾಯ ಹಂಚಿಕೊಂಡರು. ಸೂಕ್ಷ್ಮ ಮನಸ್ಸುಳ್ಳ ವ್ಯಕ್ತಿಗಳು ಬಾಲಿವುಡ್ ಚಿತ್ರರಂಗಕ್ಕೆ ಬರಬಾರದು. ಏಕೆಂದರೆ ಇಲ್ಲಿ ಅನೇಕ ರೀತಿಯ ಟಿಕೆ ಟಿಪ್ಪಣಿ ಎದುರಿಸಬೇಕಾಗಿ ಬರುತ್ತದೆ. ಟಿಕೆ ಟಿಪ್ಪಣಿಯನ್ನು ಗಟ್ಟಿಯಿಂದ ಎದುರಿಸುವ ಮನಸ್ಸು ನಮಗಿರಬೇಕು ಎಂದು ಅವರು ತಿಳಿಸಿದರು.

 

‘ಮಿಸ್ ಫ್ಯಾಸಿನಾ 2018’ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು ನಾವು ರೂಪದರ್ಶಿಯರಿಗೆ ಪ್ರೋತ್ಸಾಹ ನೋಡಲು ಬಯಸುತ್ತೇನೆ ಎಂದು ಹೇಳಿದರು. ‘ಮಿಸ್ ಫ್ಯಾಸಿನಾ 2018’ ರೂಪದರ್ಶಿಯರಿಗೆ ಉತ್ತಮವಾದ ವೇದಿಕೆ ಆಗಿದೆ ಎಂದು ಹೇಳಿದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬರುವ ಕಾಮೆಂಟ್ ಓದುವಾಗ ನೀವು ಸೆನ್ಸಿಟಿವ್ ಆಗಿದ್ದರೆ ನಿಮ್ಮ ಮನಸ್ಸಿಗೆ ನೋವಾಗುತ್ತೆ ಎಂದು ಹೇಳಿದರು.

 

 

ಈಗ ಸೋಹಾ ಅಲಿ ಖಾನ್ ರವರು ರಾಮ್‌‌ ಜೇಠ್ಮಲಾನಿ ಜೀವನಾಧಾರಿತ ಚಿತ್ರದಲ್ಲಿ ಪತಿ ಜೊತೆ ಕೆಲಸ ಮಾಡುತ್ತಿದ್ದು ಚಿತ್ರಕ್ಕಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top