fbpx
ದೇವರು

ಹಳ್ಳಿಗಳಲ್ಲಿ ಜಾತ್ರೆ ,ರಥೋತ್ಸವಗಳನ್ನ ಅಷ್ಟೊಂದು ವಿಜೃಂಭಣೆಯಿಂದ ಮಾಡ್ತಾರೆ ಗೊತ್ತಾ , ಇದ್ರಿಂದ ಯಾವೆಲ್ಲಾ ದೋಷಗಳು ಬಗೆಹರಿಯುತ್ತೆ. ಏನೆಲ್ಲ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ತಿಳ್ಕೊಳ್ಳಿ

ಜಾತ್ರಾ, ರಥೋತ್ಸವ ಎಂದರೇನು ? ಇದರಲ್ಲಿ ಪಾಲ್ಗೊಂಡರೆ ಯಾವೆಲ್ಲಾ ದೋಷಗಳು ಬಗೆಹರಿಯುತ್ತವೆ. ಏನೆಲ್ಲ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ನಿಮಗೆ ಗೊತ್ತೆ ?

 

 

ಚೈತ್ರಮಾಸದ ವಸಂತ ಋತುವಿನಲ್ಲಿ ಎಲ್ಲ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿಯೂ ಸಾಮಾನ್ಯವಾಗಿ ಜಾತ್ರೆ ರಥೋತ್ಸವಗಳು ಜರುಗುತ್ತಿರುತ್ತವೆ. ಉತ್ತರಾಯಣ ಪುಣ್ಯ ಕಾಲದಲ್ಲಿ ಹೆಚ್ಚು ರಥಗಳ ಉತ್ಸವ ,ರಥೋತ್ಸವ (ತೇರು ಎಳೆಯುವುದು)  ಹಾಗೂ ಜಾತ್ರೆಗಳು ಜರುಗುತ್ತದೆ.

ಭಕ್ತರು ತಮ್ಮ ಮನೆಯ ಯಜಮಾನನನ್ನು ಹೋಗಿ ಹೇಗೆ ದರ್ಶನ ಮಾಡಬೇಕು ಎಂದು ಕಾಯುತ್ತಾರೋ, ಹಾಗೆ ಭಗವಂತ ಕೂಡ ತನ್ನ ಭಕ್ತರನ್ನೆಲ್ಲರನ್ನೂ ನೋಡಬೇಕೆಂದು ಆ ಜಾತ್ರೆ ಮತ್ತು ರಥೋತ್ಸವದ ಸಮಯದಲ್ಲಿ ದೇವಸ್ಥಾನದಿಂದ ಹೊರಗೆ ಬರುತ್ತಾನೆ . ಆ ದೇವಾಲಯದಿಂದ ಹೊರಗೆ ಬಂದ ಭಗವಂತ ಭಕ್ತರ ಸಂಕಟಗಳು ಏನೇನು ಇವೆಯೋ ಎಂದು ಅವೆಲ್ಲವನ್ನೂ ನಿವಾರಣೆ ಮಾಡುತ್ತಾನೆ ಎನ್ನುವುದಕ್ಕೆ ಪ್ರತೀಕವೇ ಈ ಮಹೋತ್ಸವ, ಬ್ರಹ್ಮೋತ್ಸವ ಇವೆಲ್ಲವೂ ನಡೆಯುವುದು.

 

 ಜಾತ್ರೆ ,ರಥೋತ್ಸವದಲ್ಲಿ ಭಾಗಿಯಾದರೆ ಏನೆಲ್ಲ ಫಲಗಳು ಸಿಗುತ್ತವೆ ?

 

 

1.ಬಹಳಷ್ಟು ಜನ ಹೆಣ್ಣು ಮಕ್ಕಳು ತುಂಬಾ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ನನ್ನ ಗಂಡನಾಗಿ ಸಿಗುವವರು ಹಾಗಿರಬೇಕು. ಹೀಗಿರಬೇಕು ? ಎಂದು ಇಂತಹ ಆಸೆ ಈಡೇರಬೇಕಾದರೆ ಅಂತಹ ವರ ಪ್ರಾಪ್ತಿಯಾಗಬೇಕಾದರೆ, ಮಾಂಗಲ್ಯ ಭಾಗ್ಯ ಸಿಗಬೇಕಾದರೆ, ಈ ರಥೋತ್ಸವಗಳಲ್ಲಿ ಬಂದು ಭಾಗಿಯಾಗಬೇಕು. ಇದು ತುಂಬಾ ವಿಶೇಷವಾಗಿರುವ ರಥೋತ್ಸವವಾಗಿದೆ.

2.ಬಹಳಷ್ಟು ಹೆಣ್ಣು ಮಕ್ಕಳಿಗೆ  ಮದುವೆಯಾದ ನಂತರ ಸಂತಾನ ಪ್ರಾಪ್ತಿಯಾಗಿಲ್ಲ ಎಂದು ಹೇಳುತ್ತಿರುತ್ತಾರೆ. ಮದುವೆಯಾಗಿ ಹದಿನೈದು ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲ ಎಂದು ಜೀವನದಲ್ಲಿ ಬೇಸರ ಪಟ್ಟುಕೊಳ್ಳುತ್ತಾರೆ. ಅಂತಹ ಸಂತಾನ ಭಾಗ್ಯ ಈ ರಥೋತ್ಸವದ ಸಮಯದಲ್ಲಿ ಭಾಗಿಯಾದರೆ ಲಭಿಸುತ್ತದೆ. ನಿಮ್ಮ ಮನೆ ದೇವರ ಜಾತ್ರಾ ಮಹೋತ್ಸವ ಅಥವಾ ನಂಜುಂಡೇಶ್ವರ, ಶ್ರೀಕಂಠೇಶ್ವರ ಜಾತ್ರಾ ರಥೋತ್ಸವ, ಬ್ರಹ್ಮ ಮಹೋತ್ಸವದಲ್ಲಿ ಭಾಗಿಯಾದರೆ ಈ ಫಲ ಪ್ರಾಪ್ತಿಯಾಗುತ್ತದೆ.

 

 

3.ಮನುಷ್ಯನಾದವನು ಹೊಟ್ಟೆ ಪಾಡಿಗಾಗಿ ಏನೋ ಒಂದು ಕೆಲಸ ಮಾಡಲೇಬೇಕು. ಅವರು ಮಾಡುವ ಕೆಲಸದಲ್ಲಿ ಅಭಿವೃದ್ಧಿ ಎನ್ನುವುದು ಇರುವುದಿಲ್ಲ . ಅನೇಕ ತೊಂದರೆ, ತಾಪತ್ರಯಗಳನ್ನು ಅನುಭವಿಸುತ್ತಿರುತ್ತಾರೆ. ಅವರು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ವಿಘ್ನಗಳನ್ನು ಸಮಸ್ಯೆಗಳನ್ನು ಆಗಾಗ ಎದುರಿಸುತ್ತಿರುತ್ತಾರೆ.ಯಾವುದೇ ವಿಘ್ನಗಳು ಇಲ್ಲದೇ ನಿರ್ವಿಘ್ನವಾಗಿ ಕೆಲಸಗಳು ನೆರವೇರಬೇಕು ಎಂದರೆ ಈ ರಥೋತ್ಸವಗಳಲ್ಲಿ ಪಾಲ್ಗೊಳ್ಳಬೇಕು.

ಇನ್ನೂ ಬಹಳಷ್ಟು ಜನರು ಕೇಳುತ್ತಾರೆ ಸರಿ ನಾವು ಪಾಲ್ಗೊಳ್ಳುತ್ತೇವೆ , ರಥೋತ್ಸವಕ್ಕೆ ಹೋಗುತ್ತೇವೆ, ಆದರೆ ನಾವು ಅಲ್ಲಿಗೆ ಹೋಗಿ ಏನು ಮಾಡಬೇಕು ? ಎಂದು ಕೇಳುತ್ತಾರೆ .

ನೀವು ರಥೋತ್ಸವಕ್ಕೆ ಹೋಗಿ. ಭಕ್ತಿ ಮತ್ತು ಶ್ರದ್ಧೆಯಿಂದ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. “ಓಂ ನಮಃ ಶಿವಾಯ” ಎಂಬ  ಈ ಪಂಚಾಕ್ಷರಿ ಮಂತ್ರವನ್ನು ಹೇಳಿಕೊಂಡು ದವನ ಮತ್ತು ಬಾಳೆಹಣ್ಣನ್ನು ಆ ರಥಾರೋಹಣ ಮಾಡಿರುವ ಕಲಶಕ್ಕೆ ಅರ್ಪಣೆಯನ್ನು ಮಾಡಿ, ದೀರ್ಘದಂಡ ನಮಸ್ಕಾರವನ್ನು ಮಾಡಿ ಬನ್ನಿ. ಆಗ ಖಂಡಿತವಾಗಿಯೂ ನಿಮಗೆ ನಿಮ್ಮ ಮನಸ್ಸಿನಲ್ಲಿರುವ ಆಸೆಗಳು ಈಡೇರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top