fbpx
ಸಿನಿಮಾ

ಕಥೆ ಬರೆಯೋಕೆ ಮುಂಚೆನೇ ಸ್ಯಾಂಡಲ್ ವುಡ್ ಟಾಪ್ ಹೀರೋ ಕಾಲ್ ಶೀಟ್ ಪಡ್ಕೊಂಡ್ರು ರಂಗಿತರಂಗ ಅನೂಪ್ ಭಂಡಾರಿ

ರಂಗಿತರಂಗ ಚಿತ್ರ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ ನಿರ್ದೇಶಕ ಅನೂಪ್ ಭಂಡಾರಿ ಅವರು ಚಿತ್ರರಂಗವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಈಗ ಇತ್ತೀಚೆಗೆ ನಿರೂಪ ಭಂಡಾರಿ ನಿರ್ದೇಶನದ ರಾಜರಥ ಬಿಡುಗಡೆಗೊಂಡು ಪ್ರದರ್ಶನ ಕಾಣುತ್ತಿದೆ.

 

 

ಅನೇಕ ವಿಭಿನ್ನ ಅಂಶಗಳಿಂದ ಕೂಡಿರುವ ರಾಜರಥ ಚಿತ್ರಕ್ಕೆ ಒಳ್ಳೆಯ ರೆಸ್ಪೋನ್ಸ್ ಕೂಡ ಸಿಗುತ್ತಿದೆ. ಈ ಬಗ್ಗೆ ಮಾತನಾಡಲು ಅನೂಪ್ ಭಂಡಾರಿ ಅವರು ಶಿವರಾಜ್ ಕುಮಾರ್ ಅವರು ನಡೆಸಿಕೊಡುವ ‘ಯಾರೀ ವಿಥ್ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಣ್ಣ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.

 

 

ಶಿವಣ್ಣ ಅವರು ಅನೂಪ್ ಭಂಡಾರಿ ಅವರಿಗೆ ನಾವು ನಿಮಗೆ ಕಾಣಿಸೋದಿಲ್ವ ಎಂದು ಪ್ರಶ್ನೆಗೆ ಹಾಕಿದರೂ ಇದಕ್ಕೆ ಒಂದು ಕೂತಹಲಕಾರಿಯಾದ ಉತ್ತರ ನೀಡಿದರು ನಿರ್ದೇಶಕ ಅನೂಪ್ ಭಂಡಾರಿ ಅವರು. ಅದನ್ನು ಕೇಳಿದ ಶಿವಣ್ಣ ಕೂಡ ಸಂತೋಷಪಟ್ಟರು ಎಂದು ಎಂದು ತಿಳಿದು ಬಂದಿದೆ.

 

 

ಅನೂಪ್ ಭಂಡಾರಿ, ಶಿವಣ್ಣ ಅವರಿಗಾಗಿಯೇ ಒಂದು ಕಥೆ ಬರೆಯುತ್ತಿರುವುದಾಗಿ ಹೇಳಿದರು. ನಾನು ನಿಮ್ಮ ಜೊತೆಗೆ ಮುಂದಿನ ಚಿತ್ರವನ್ನು ಮಾಡುವುದಾಗಿ ತಿಳಿಸಿದರು. ಇದರಿಂದ ಸಂತಸ ಗೊಂಡ ಶಿವಣ್ಣ ನಿಮ್ಮ ಕಥೆ ಮುಗಿದ ತಕ್ಷಣ ಬನ್ನಿ ನಿಮಗೆ ಡೇಟ್ ಕೊಡುತೇನೆ ಎಂದು ಹೇಳಿದರು. ಕನ್ನಡ ಚಿತ್ರರಂಗದ ಟಾಪ್ ನಟ ಶಿವಣ್ಣ ಅವರ ಜೊತೆ ನಿರ್ದೇಶಕ ಅನೂಪ್ ಭಂಡಾರಿ ಅವರು ಮುಂದಿನ ಚಿತ್ರ ಮಾಡುತ್ತಿರುವುದು ಕುತೂಹಲ ಅಪಾರ ಅಭಿಮಾನಿಗಳಲ್ಲಿ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top