fbpx
ಮನೋರಂಜನೆ

ನಮ್ಮ ‘ರಾಜರಥ’ ಚಿತ್ರವನ್ನ ನೋಡದವರು ‘ಕಚಡಾ ಲೋಫರ್ ನನ್ಮಕ್ಳು’ ಎಂದು ನಿಂದಿಸಿದ್ದ ಭಂಡಾರಿ ಸಹೋದರರಿಂದ ಕ್ಷಮೆ ಯಾಚನೆ.

ತಮ್ಮ ರಾಜರಥ ಸಿನಿಮಾ ನೋಡದವರು ‘ಕಚಾಡಾ ಲೋಪರ್ ನನ್ಮಕ್ಳು’ ಎಂದು ಕನ್ನಡ ಚಿತ್ರ ಪ್ರೇಕ್ಷಕರ ಬಗ್ಗೆ ಅವಹೇಳನವಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ರಾಜರಥ ಸಿನಿಮಾದ ನಿರ್ದೇಶಕ ಅನೂಪ್​ ಭಂಡಾರಿ ಹಾಗೂ ನಟ ನಿರೂಪ್​ ಭಂಡಾರಿ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಪ್ರೇಕ್ಷಕರಲ್ಲಿ ಕ್ಷಮೆ ಕೋರಿದ್ದಾರೆ.

 

 

ಆರ್​ಜೆ ರಾಪಿಡ್ ರಶ್ಮಿ ಅವರ ಟಾಕ್ ಶೋನಲ್ಲಿ ಭಾಗವಹಿಸಿದ ರಾಜರಥ ಚಿತ್ರ ತಂಡದವರು ಚಿತ್ರದ ಕುರಿತು ಅನೇಕ ವಿಷಯಗಳನ್ನು ಚರ್ಚಿಸುತ್ತಿದ್ದರು. ಈ ಮಧ್ಯೆ ಪ್ರೇಕ್ಷಕರ ಕುರಿತು ಮಾತನಾಡುವಾಗ ತಮ್ಮ ರಾಜರಥ ಚಿತ್ರವನ್ನು ನೋಡದ ಪ್ರೇಕ್ಷಕರು ‘ಕಚಡಾ ನನ್ಮಕ್ಳು’ ಎಂದು ಚಿತ್ರದ ನಿರ್ದೇಶಕ ಅನೂಪ್​ ಭಂಡಾರಿ, ನಟಿ ಅವಂತಿಕಾ ಶೆಟ್ಟಿ ಹೇಳಿದ್ದರು. ನಂತರ ನಟ ನಿರೂಪ್​ ಭಂಡಾರಿ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಚಿತ್ರವನ್ನು ನೋಡದವರು ಕಚಡಾ ಲೋಫರ್ ನನ್ಮಕ್ಳು ಎಂದು ಅವಹೇಳನಕಾರಿ ಮಾತುಗಳನ್ನು ತಮ್ಮ ಎಲುಬಿಲ್ಲದ ನಾಲಿಗೆಯಿಂದ ಉದುರಿಸಿದ್ದರು.. ಈ ಹೇಳಿಕೆಗಳ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತಂದೆ ಕೋಪಗೊಂಡ ಕನ್ನಡ ಪ್ರೇಕ್ಷಕರು ಈಗ ತಾನೇ ಒಂದು ಚಿತ್ರ ಹಿಟ್ ಕೊಟ್ಟು ಎರಡನೇ ಚಿತ್ರಕ್ಕೆ ಮಕಾಡೆ ಮಲಗಿಕೊಂಡಿರುವ ಈ ಫಾರಿನ್ ರಿಟರ್ನ್ಸ್ ಸಹೋದರರ ವಿರುದ್ಧ ವ್ಯಾಪಕ ಟೀಕೆಯ ಸುರಿಮಳೆ ಗೈದಿದ್ದರು. ಪ್ರೇಕ್ಷಕರ ಖಂಡನೆಗಳನ್ನು ಕಂಡು ಬೆಚ್ಚಿ ಬಿದ್ದಿರುವ ಭಂಡಾರಿ ಸಹೋದರು ತಮ್ಮ ಟ್ವಿಟರ್ ಖಾತೆಗಳಲ್ಲಿ ‘ಕಚಡಾ ಲೋಫರ್ ನನ್ಮಕ್ಳು’ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.

 

 

ಈ ಬಗ್ಗೆ ಟ್ವೀಟ್ ಮಾಡಿರುವ ಭಂಡಾರಿ ಸಹೋದರರು “ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗೂ ನೋವುಂಟು ಮಾಡಿರುವುದಕ್ಕೆ ನಾನು ಕ್ಷಮೆ ಯಾಚಿಸುತ್ತೇವೆ. ಈ ಸಂದರ್ಶನಕ್ಕೂ ಮುಂಚೆ ಹಲವಾರು ಒಳ್ಳೆಯ ಕನ್ನಡ ಸಿನಿಮಾ ಬಂದರು ಕೆಲವರು ಕನ್ನಡ ಸಿನಿಮಾ ನೋಡುವುದಿಲ್ಲ ಎಂಬ ಚರ್ಚೆಗಳಾಗಿತ್ತು. ಈ ಹಿನ್ನೆಲೆಯಲ್ಲಿ ಬಂದ ಆ ಪ್ರಶ್ನೆಗೆ ನಾವು ತಪ್ಪು ಉತ್ತರ ಕೊಟ್ಟಿದ್ದೇವೆ ಇದು ಖಂಡಿತವಾಗಿಯೂ ಕನ್ನಡ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ” ಎಂದು ಕ್ಷಮೆ ಕೋರಿದ್ದಾರೆ.

 

 

ಭಂಡಾರಿ ಸಹೋದರರ ಕಚಡಾ ಹೇಳಿಕೆಯ ವಿಡಿಯೋವನ್ನು ಇಲ್ಲಿ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments
Shree says:

Modlu anta kachada prashne kelida aa kachada rashmige yekkada thagond haakbeku.

Shree says:

Modlu anta kachada prashne kelida aa kachada rashmige yekkada thagond haakbeku.

To Top