fbpx
ಭವಿಷ್ಯ

ಈ ರಾಶಿಯವರು ಬೇರೆಯವರ ಒಳಿತಿಗಾಗಿ ಎಷ್ಟು ಕಷ್ಟವಾದರೂ ಪಡುತ್ತಾರೆ ಹಾಗೂ ತ್ಯಾಗ ಮನೋಭಾವ ಉಳ್ಳ ತ್ಯಾಗಮಯಿಗಳಾಗಿರುತ್ತಾರೆ.

ಈ ರಾಶಿಯವರು ತ್ಯಾಗ ಮನೋಭಾವ ಉಳ್ಳ ತ್ಯಾಗಮಯಿಗಳಾಗಿರುತ್ತಾರೆ.

 

 

ಕುಂಭ ಅಂದರೆ ಅದರ ಅರ್ಥ ಚೊಂಬು ಅಥವಾ ಕೊಡ ಎಂದರ್ಥ.ಕುಂಭ ರಾಶಿಯವರಲ್ಲಿ ಎಲ್ಲಾ ಒಳ್ಳೆಯ ಗುಣಗಳು, ಬುದ್ಧಿವಂತಿಕೆ ಮತ್ತು ಜ್ಞಾನ ಬಂಡಾರವೇ ಅವರಲ್ಲಿ ಇರುತ್ತದೆ.ಆದರೂ ಸಹ ಅವರು “ ತುಂಬಿದ ಕೊಡ ತುಳುಕುವುದಿಲ್ಲ” ಎಂಬ ಗಾದೆ ಮಾತಿನಂತೆ ಇವರ ಗುಣವಿರುತ್ತದೆ.

ಕುಂಭ ರಾಶಿಯಲ್ಲಿ ಎರಡು ಪ್ರಕಾರದ ಅಥವಾ ಎರಡು ಗುಂಪಿನ ಜನರನ್ನು ಕಾಣಬಹುದಾಗಿದೆ.

1.ಮೊದಲನೆಯ ಗುಂಪಿನವರು ತಮಗೋಸ್ಕರ ಏನನ್ನು ಮಾಡಿಕೊಳ್ಳದೇ ಸಮಾಜದ ಒಳಿತಿಗಾಗಿ ದುಡಿಯುತ್ತಾರೆ ಮತ್ತು ಸಮಾಜವನ್ನು ಹೊಂದಿ ಬಾಳುತ್ತಾರೆ.
ಬೇರೆಯವರಿಗೆ ಮತ್ತು ಈ ಸಮಾಜಕ್ಕೆ ಒಳ್ಳೆಯದನ್ನೇ ಮಾಡಿ ತಾವು ಯಾವ ಸುಖ ಭೋಗಗಳನ್ನು ಹೊಂದದೆ, ಅವರಿಂದ ಏನನ್ನು ಆಶಿಸದೆ,ತ್ಯಾಗ ಮನೋಭಾವದೊಂದಿಗೆ ತಾವೇ ಕಷ್ಟವನ್ನು ಅನುಭವಿಸುತ್ತಾರೆ.

2. ಎರಡನೆಯ ಗುಂಪಿನವರು ಅಷ್ಟೇ ತಮಗೋಸ್ಕರ ಏನು ಮಾಡಿಕೊಳ್ಳದೇ ತಮ್ಮ ಮನೆಯವರಿಗೋಸ್ಕರ ಮತ್ತು ಬಂಧು ಬಳಗದವರಿಗೋಸ್ಕರ ದುಡಿಯುತ್ತಾರೆ ಅವರ ಒಳಿತಿಗೆ ಮತ್ತು ಏಳಿಗೆಗೆ ಏನು ಬೇಕಾದರೂ ಮಾಡುತ್ತಾರೆ.

 

 

ಕುಟುಂಬದವರಿಗೋಸ್ಕರ ತಮ್ಮ ಜೀವನವನ್ನೇ ತ್ಯಾಗ ಮಾಡಿ ಕೊನೆಗೆ ಅವರೆಲ್ಲರೊಂದಿಗೆ ಜೀವನ ನೆಡೆಸದೇ ದೂರವಾಗಿ ಉಳಿದುಕೊಂಡು ತುಂಬಾ ಕಷ್ಟಕರವಾದ ಜೀವನವನ್ನು ನೆಡೆಸುತ್ತಾರೆ.ಎಂತಹ ಕಷ್ಟ ಕಾಲದಲ್ಲಿಯೂ ಸಹ ತ್ಯಾಗ ಮನೋಭಾವನೆಯನ್ನು ಇವರು ತೋರ್ಪಡಿಸುತ್ತಾರೆ. ತಮಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟು ತ್ಯಾಗವನ್ನು ಮಾಡುತ್ತಾರೆ.

ಈ ಎರಡು ಗುಂಪಿನಲ್ಲಿ ಬಹಳಷ್ಟು ಅಂತರಗಳ ವ್ಯತ್ಯಾಸವಿದೆ.ಸಮಾಜ ಸೇವೆಯಂತಹ ಮೊದಲಾದ ಕೆಲಸವನ್ನು ಈ ರಾಶಿಯವರೇ ಮಾಡುವುದು.ಬೇರೆಯವರ ಪಾಲನೆ ,ಪೋಷಣೆ ಮತ್ತು ಒಳಿತನ್ನು ಮಾಡುವುದು ಕುಂಭ ರಾಶಿಯವರೇ.

ಬೇರೆ ಬೇರೆ ಕ್ಷೆತ್ರಗಳಲ್ಲಿ ಸೇವೆ ಸಲ್ಲಿಸುತ್ತಾರೆ ,ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ತಾವು ಕಷ್ಟ ಪಟ್ಟು ದುಡಿದ ಹಣ,ಆಸ್ತಿ,ಸಂಪತ್ತು ಎಲ್ಲವನ್ನು ಸಮಾಜಕ್ಕೆ ಅಥವಾ ತಮ್ಮ ಕುಟುಂಬದವರಿಗೆ ಸಹೋದರ,ಸಹೋದರಿಯರಿಗೆ ದಾನ ಮಾಡುತ್ತಾರೆ.ಯಾವುದನ್ನು ಅವರಿಗೆಂದು ಇಟ್ಟು ಕೊಳ್ಳುವುದಿಲ್ಲ.

ಕುಂಭ ರಾಶಿಯವರಿಗೆ ರಾಜ ಯೋಗವನ್ನು ಅನುಭವಿಸುವ ಯೋಗವೂ ಕೂಡ ಇದೆ.ಆದ್ದರಿಂದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಉನ್ನತ ಅಧಿಕಾರಿಯಾಗುವ ಸಂಭವವೂ ಇದೆ.ಆದರೆ ಇವರಿಗೆ ಕುಟುಂಭ ಸೌಖ್ಯ ಕಡಿಮೆ.ದಾಂಪತ್ಯ ಜೀವನದಲ್ಲಿಯೂ ಸಹ ಎಡರು ತೊಡರುಗಳನ್ನು ಸಹ ಎದುರಿಸುತ್ತಾರೆ.

ಕುಂಭ ರಾಶಿಯವರಿಗೆ ಬೇರೆಯವರ ಮೇಲೆ ಅಷ್ಟಾಗಿ ವಿಶ್ವಾಸ ಇರುವುದಿಲ್ಲ.ತಮಗೆ ಎಲ್ಲ ತಿಳಿದಿದೆ ಎಂದು ಇವರು ತಿಳಿದುಕೊಳ್ಳುತ್ತಾರೆ.ಅನ್ಯರಿಗೆ ಸಹಾಯ ಮಾಡುವ ಕೆಲಸದಲ್ಲಿ ಮತ್ತು ಅವರ ಕಾರ್ಯ ನಿರ್ವಹಿಸುವುದರಲ್ಲಿಯೇ ತೊಡಗಿರುತ್ತಾರೆ.

ಅಷ್ಟಾಗಿ ಬೇರೆಯವರ ಸಂಪರ್ಕ ಇರುವುದಿಲ್ಲ.ಆದ್ದರಿಂದ ಕೆಲವರು ಇವರನ್ನು ಸ್ವಾರ್ಥಿಗಳು ಎಂದು ಸಹ ಅಂದುಕೊಳ್ಳುತ್ತಾರೆ.ಆದರೆ ಇವರು ನಿಜವಾಗಿಯೂ ಸ್ವಾರ್ಥಿಗಳಲ್ಲ.ತ್ಯಾಗಮಯಿಗಳು.ತಮಗೋಸ್ಕರ ಏನನ್ನು ಮಾಡದೇ ಬೇರೆಯವರಿಗೆ ,ಸಮಾಜಕ್ಕೆ,ಕುಟುಂಭ ವರ್ಗದವರಿಗೆ ಒಳ್ಳೆಯದನ್ನು ಮಾಡುತ್ತಾರೆ.

ಆದರೆ ತಾವು ಸುಖ ಭೋಗವನ್ನು ಅನುಭವಿಸಬೇಕು. ಚೆನ್ನಾಗಿರಬೇಕು ನಾನು,ನನ್ನದು ಎನ್ನುವ ಸ್ವಾರ್ಥ ಮನೋಭಾವನೆ ಇವರಲ್ಲಿ ಇಲ್ಲ.ಯಾವ ಕೆಟ್ಟ ಅಲೋಚನೆಯು ಇವರಲ್ಲಿ ಇಲ್ಲ.ನಿಜವಾಗಿಯೂ ಇವರೇ ತ್ಯಾಗಮಯಿಗಳು,ಒಳ್ಳೆಯ ಗುಣ ಇರುವವರು.ಇಂತಹ ಗುಣ ಇರುವವರು ಈ ಸಮಾಜದಲ್ಲಿ ಬಹಳ ಕಡಿಮೆ.
Recreated from vk ಪರೋಪಕಾರಿ ಗುಣ ಕುಂಭರಾಶಿಯವರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top