fbpx
ದೇವರು

108 ತಿರುಪತಿಯಲ್ಲಿ ‘ಬಂಗಾರ ತಿರುಪತಿ’ ಎಂದೇ ಖ್ಯಾತಿಯಾಗಿರುವ ಈ ದೇವಾಲಯಕ್ಕೆ ಹೋದರೆ ನಿಮ್ಮ ಆರೋಗ್ಯದ ಸಮಸ್ಯೆ ಏನೇ ಇದ್ದರೂ ಸರಿ ಹೋಗುತ್ತದೆ ಎಂಬ ನಂಬಿಕೆ ಇದೆ

ಕೋಲಾರ ಜಿಲ್ಲೆಯ ಚಿನ್ನದ ಗಣಿ ಹತ್ತಿರ ಗುಟ್ಟಹಳ್ಳಿ ಎಂಬ ಪ್ರದೇಶದಲ್ಲಿ ನೂರಾ ಎಂಟು ತಿರುಪತಿ ಗಳಲ್ಲಿ ಬಹಳ ಮುಖ್ಯವಾದ ಬಂಗಾರದ ತಿರುಪತಿ ದೇವಾಲಯವಿದೆ ಈ ಕ್ಷೇತ್ರದಲ್ಲಿ ತಿರುಪತಿ ತಿಮ್ಮಪ್ಪ ಹಾಗೂ ಪದ್ಮಾವತಿ ದೇವಿ ಪೂಜಿಸಲ್ಪಡುತ್ತಾನೆ ಮಹ್ಮದ ವೆಂಕಟೇಶ್ವರನನ್ನು ಭಕ್ತರ ಯಾವುದೇ ಕಷ್ಟವಾದರೂ ಸರಿ ತಿಳಿಸುತ್ತಾರಂತೆ ಆದ್ದರಿಂದಲೇ ಇದಕ್ಕೆ ಬಂಗಾರ ತಿರುಪತಿ ಎಂಬ ಹೆಸರು ಬಂತು.

 

 

ಇತಿಹಾಸ ಹೀಗಿದೆ ಈ ಸ್ಥಳದಲ್ಲಿ ಭೃಗು ಮಹರ್ಷಿಗಳು ತಪಸ್ಸನ್ನು ಆಚರಿಸಿದರು ಎಂದು ಹೇಳಲಾಗುತ್ತದೆ ಪೌರಾಣಿಕ ಕತೆ ಪ್ರಕಾರ ಭೃಗು ಮಹರ್ಷಿಯು ತನ್ನ ಅಹಂಕಾರದಿಂದ ಮಹಾವಿಷ್ಣುವನ್ನು ಎದೆಗೆ ಒಲಿಯುತ್ತಾನೆ ಆಗ ಕೋಪಗೊಂಡ ಲಕ್ಷ್ಮಿಯೂ ಕರವಿಪುರ ಗ್ರಾಮಕ್ಕೆ ಹೋಗಿ ನೆಲೆಸುತ್ತಾಳೆ ಆಕೆಯನ್ನು ಹುಡುಕಿಕೊಂಡು ಮಹಾವಿಷ್ಣುವು ಕಲಿಯುಗಕ್ಕೆ ಬಂದಾಗ ಈ ಹಿಂದೆ ರಾಮ ನಾಗಿದ್ದಾಗ ವೇದಾವತಿಗೆ ಕೊಟ್ಟಿದ್ದ ವರವನ್ನು ಈಡೇರಿಸುವ ಸಲುವಾಗಿ ಇಲ್ಲಿ ಬಂದು ನೆಲೆ ನಿಲ್ಲುತ್ತಾನೆ .

 

 

ಆಗ ಅಲ್ಲಿಗೆ ಬಂದ ಪದ್ಮಾವತಿ ಹಾಗೂ ಲಕ್ಷ್ಮಿ ನಡುವೆ ಭಾರಿ ಜಗಳ ನಿಲ್ಲುತ್ತದೆ ಯಂತೆ ಆಗ ಲಕ್ಷ್ಮಿ ಏಕೆ ಮಾತಾಡದೆ ಕಲ್ಲಾಗಿ ನಿಂತಿದ್ದೀರಿ ಎಂದು ವೆಂಕಟೇಶ್ವರನನ್ನು ಕೇಳುತ್ತಾಳೆ ಇದೇ ಕಾರಣದಿಂದ ವೆಂಕಟೇಶ್ವರ ಕಲ್ಲಾಗಿ ಹೋದ ಎಂದು ಪುರಾಣಗಳು ಹೇಳುತ್ತವೆ ಕನಕನ ಕಿಂಡಿಯಲ್ಲಿ ಉಡುಪಿ ಶ್ರೀಕೃಷ್ಣನ ದರ್ಶನ ಮಾಡುವಂತೆ ಇಲ್ಲಿ ಕೂಡ ಕಿಂಡಿಯಲ್ಲಿ ವೆಂಕಟೇಶ್ವರನ ದರ್ಶನ ಮಾಡಬೇಕು ಇದಕ್ಕೆ ನೇತ್ರ ದರ್ಶನ ಎಂದು ಕರೆಯುತ್ತಾರೆ

 

 

ಲಕ್ಷ್ಮೀ ಪದ್ಮಾವತಿ ದೇವಿಯ ಜೊತೆಗೆ ಗಣಪತಿ ಆಂಜನೇಯ ಸ್ವಾಮಿಯ ದರ್ಶನವನ್ನು ಸಹ ಪಡೆಯಬಹುದು ಇದಲ್ಲದೆ ಮೆಟ್ಟಿಲೇರುವಾಗ ಗರುಡ ಮೂರ್ತಿಯೂ ಬಹಳ ಸುಂದರವಾಗಿ ಕಾಣುತ್ತದೆ.

 

 

ಇಲ್ಲಿನ ಭಕ್ತರು ಭಕ್ತರು ಹೇಳುವ ಪ್ರಕಾರ ಈ ಕಲ್ಯಾಣಿಯಲ್ಲಿ ಮಿಂದು ವೆಂಕಟೇಶ್ವರನ ದರ್ಶನ ಪಡೆದರೆ ಅನೇಕ ಆರೋಗ್ಯ ಸಮಸ್ಯೆಗಳು ಹಾಗೂ ಜೀವನದ ಕಷ್ಟಗಳು ತೀರಿ ಹೋಗುತ್ತವೆಯಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top