fbpx
ಸಿನಿಮಾ

ಅವತ್ತು ಕೈಯಲ್ಲಿ ಬರಿ 500 ರೂಪಾಯಿ ಹಿಡ್ಕೊಂಡು ಸಿನಿಮಾಗೋಸ್ಕರ ಮನೆಯಿಂದ ಓಡಿ ಬಂದಿದ್ದಳು ಈ ನಟಿ

ಕ್ರಿಕೆಟ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿಯ ಕುರಿತು ತಯಾರಾದ ಎಂ. ಎಸ್‌. ಧೋನಿ : ದ ಅನ್‌ಟೋಲ್ಡ್‌ ಸ್ಟೋರಿ ಬಾಲಿವುಡ್‌ನ‌ಲ್ಲಿ ದಿಶಾಳ ಮೊದಲ ಸಿನಿಮಾ. ಧೋನಿಯ ಪತ್ನಿ ಆಗಿರುವ ಸಾಕ್ಷಿಯ ಪಾತ್ರದಲ್ಲಿ ದಿಶಾ ನಟಿಸಿದ್ದಾಳೆ.ಈ ಮೊದಲು ತೆಲುಗಿನಲ್ಲಿ ರಿಲೀಸ್ ಆಗಿದ್ದ ಪೂರಿ ಜಗನ್ನಾಥ್​ ನಿರ್ದೇಶನದ ಲೋಫರ್ ಲೋಫ‌ರ್‌ ದಿಶಾಳ ಪ್ರಥಮ ಚಿತ್ರ. ಹಿಂದಿ ಮತ್ತು ಚೈನೀಸ್‌ ಭಾಷೆಯಲ್ಲಿ ತಯಾರಾದ ಕುಂಗ್‌ ಫ‌ು ಯೋಗ ಚಿತ್ರದಲ್ಲಿ ಕೂಡ ಜಾಕಿ ಜತೆ ದಿಶಾ ನಟಿಸಿದ್ದಾಳೆ.

 

 

ಬಾಲಿವುಡ್​ನಲ್ಲಿ ಈಗ ಉತ್ತ್ತಮವಾದ ನೆಲೆ ಕಂಡುಕೊಳ್ಳುತ್ತಿರುವ ದಿಶಾ ಪಟಾನಿ ಅವ್ರು ಒಂದು ಕಾಲದಲ್ಲಿ ಅವಕಾಶಕ್ಕಾಗಿ ಕಷ್ಟ ಪಟ್ಟಿದ್ದಾರೆ. ಕಾಲೇಜು ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿಶಾ ಪಟಾನಿ ಗೆ ಗ್ಲಾಮರ್​ ಜಗತ್ತು ಆಕರ್ಷಣೆ ಮಾಡಿತು. ಓದಿಗೆ ಗುಡ್​ ಬೈ ಹೇಳಿ ದಿಶಾ ಪಟಾನಿ ಬಾಲಿವುಡ್ ನಗರಿ ಮುಂಬೈಗೆ ಆಗಮಿಸಿದಾಗ ಆಕೆ ಬಳಿ ಇದ್ದದ್ದು ಕೇವಲ 500 ರೂಪಾಯಿ ಮಾತ್ರ. ಕುಟುಂಬದ ಸಹಾಯವನ್ನು ಪಡೆಯದೇ ಮುಂಬೈನಲ್ಲಿ ಪುಟ್ಟ ಮನೆ ಮಾಡಿಕೊಂಡಿದ್ದ ದಿಶಾ ಪಟಾನಿ, ಟಿವಿ ಕಮರ್ಶಿಯಲ್​ ಗಳಿಗೆಲ್ಲಾ ತಪ್ಪದೇ ಆಡಿಷನ್​ ನೀಡುವ ಮೂಲಕ ಅವಕಾಶ ಗಿಟ್ಟಿಸಿಕೊಂಡರು. ಆಮೇಲೆ ಚಿತ್ರರಂಗಕ್ಕೆ ಆಗಮಿಸಿದರು.

 

 

ತನಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಸದುಪಯೋಗ ಪಡಿಸಿಕೊಂಡ ದಿಶಾ ಇಅಂದು ಯಶಸ್ಸಿನ ದಿಕ್ಕಿನಲ್ಲಿ ಸಾಗುತ್ತಿದ್ದರೆ. ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಭಾಗವಹಿಸಿದ ದಿಶಾ ಪಟಾನಿ ತಮ್ಮ ಕಷ್ಟದ ದಿನಗಳ ಬಗೆ ಹೇಳಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top