fbpx
ಕಿರುತೆರೆ

ಸರಿಗಮಪ ವೇದಿಕೆಗೆ ಬರಲಿದ್ದಾರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ.

ಕನ್ನಡ ಕಿರುತೆರೆ ರಿಯಾಲಿಟಿ ಷೋಗಳಿಗೆ ಹೊಸ ರೂಪವನ್ನು ಕೊಟ್ಟ ಜೀ ಕನ್ನಡ ವಾಹಿನಿ, ಇದೀಗ ತನ್ನ ಜನಪ್ರಿಯ ಷೋಗಳಲ್ಲೊಂದಾದ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್-೧೪ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರನ್ನು ಈ ವಾರದ ಅಥಿತಿಯಾಗಿ ಕರೆಸುತ್ತಿದೆ. ಇತ್ತೀಚಿಗೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ ವಿಶೇಷ ಅತಿಥಿಯಾಗಿ ಭಾಗವಹಿಸಿ ಸ್ಪರ್ಧಿಗಳಿಗೆ ಚೈತನ್ಯ ತುಂಬಿದ್ದರು ಈಗ ವೀರೇಂದ್ರ ಹೆಗಡೆಯವರು ಮಕ್ಕಳಿಗೆ ಹಿತನುಡಿಗಳನ್ನು ಹೇಳಲಿದ್ದಾರೆ.

 

 

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹಾಗೂ ವಿಜಯಪ್ರಕಾಶ್ ಅವರ ಜೊತೆಗೆ ಮಹಾಗುರುಗಳಾಗಿ ಸ್ವರಮಾಂತ್ರಿಕ ಹಂಸಲೇಖ ತೀರ್ಪುಗಾರರಾಗಿರುವ ಈ ಶೋನಲ್ಲಿ ಹೊಸ ಕನಸುಗಳನ್ನು ಹೊತ್ತ ಮುದ್ದು ಮಕ್ಕಳು, ಹೊಸ ಬಾಲಪ್ರತಿಭೆಗಳು, ತಮ್ಮ ಅದ್ಭುತವಾದ ಹಾಡುಗಾರಿಕೆಯ ಮೂಲಕ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ..

ಇಂತಹ ಜನಪ್ರಿಯ ಕಾರ್ಯಕ್ರಮದ ವೇದಿಕೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯಂತಹ ಅಂತಹ ಮಹಾನ್‌ ವ್ಯಕ್ತಿಗಳು ವಿಶೇಷ ಅಥಿತಿಗಳಾಗಿ ಆಗಮಿಸುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಇಮ್ಮಡಿಯಾಗಿದೆ. ಅವರು ಮಕ್ಕಳಿಗೆ ಯಾವರೀತಿಯ ಉಪದೇಶ, ಹಿತನುಡಿಗಳನ್ನು ಹೇಳಿದ್ದಾರೆ ಎಂಬುದನ್ನು ನೋಡಲು ವೀಕ್ಷಕರು ಕಾದುಕುಳಿತಿದ್ದಾರೆ. ಅಂದಹಾಗೆ ಡಾ.ವೀರೇಂದ್ರ ಹೆಗಡೆಯವರ ಸಂಚಿಕೆ ಇದೆ ಶನಿವಾರ ಮತ್ತು ಭಾನುವಾರ ಸಂಜೆ ೭.೩೦ಕ್ಕೆ ಝೀ ಕನ್ನಡದಲ್ಲಿ ಪ್ರಸಾರವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top