fbpx
ಆರೋಗ್ಯ

ಹಿಂದೆ ಕೆಮ್ಮು ಜ್ವರ ಬಂದ್ರೆ ಮಕ್ಕಳಿಗೂ ಬ್ರಾಂಡಿ ಕುಡಿಸೋರು ಯಾಕೆ ಗೊತ್ತಾ? ಬ್ರಾಂಡಿ ಕುಡಿಯೋದ್ರಿಂದ ಈ 6 ಲಾಭ ಪಡ್ಕೊಬಹುದು ಗೊತ್ತಾ ?

ಬ್ರಾಂಡಿ ಸುಮಾರು 30-60% ಆಲ್ಕಹಾಲ್ ಪರಿಮಾಣವನ್ನು ಹೊಂದಿರುತ್ತದೆ ,ಬ್ರಾಂಡಿ ವೈನ್ ನಿಂದ ಮಾಡಲ್ಪಟ್ಟಿರುತ್ತದೆ , ಓಕ್ ಮರದ ದೊಡ್ಡ ದೊಡ್ಡ ಬ್ಯಾರೆಲ್ ಗಳಲ್ಲಿ ಸಂಗ್ರಹಿಸಿಟ್ಟ ಕಾರಣ ಇದು ವಿಶಿಷ್ಟ ಬಣ್ಣವನ್ನು ಹೊಂದಿರುತ್ತದೆ , ಸಾಮಾನ್ಯವಾಗಿ ವೈನ್ ಅಥವಾ ಇತರ ಹುದುಗುವ ಹಣ್ಣಿನ ರಸದಿಂದ ಬ್ರಾಂಡಿ ತಯಾರಿಸಲಾಗುತ್ತದೆ .

 

 

ಬ್ರಾಂಡಿಯ ಅತ್ಯುತ್ತಮ ಆರೋಗ್ಯ ಪ್ರಯೋಜನಗಳು ಹೀಗಿವೆ

 

ಶ್ವಾಸಕೋಶದ ತೊಂದರೆ ನಿವಾರಿಸುತ್ತದೆ :

 

 

ಶ್ವಾಸಕೋಶದ ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ , ಗಂಟಲು ನೋವು ಕೆಮ್ಮುಗಳಂತಹ ಉಸಿರಾಟದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬ್ರಾಂದಿ ಬಹಳ ಪರಿಣಾಮಕಾರಿಯಾಗಿದೆ ಬ್ರಾಂಡಿಯಲ್ಲಿರುವ ಬಲವಾದ ಆಲ್ಕಹಾಲ್ ಅಂಶ ಬ್ಯಾಕ್ಟೀರಿಯಾಗಳ ತೊಂದರೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ .

 

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ :

 

 

ನೂರಾರು ವರ್ಷಗಳಿಂದ ಸಾಮಾನ್ಯ ಶೀತ ಅಥವಾ ಜ್ವರಕ್ಕೆ ಸಾಂಪ್ರದಾಯಿಕ ಪರಿಹಾರವಾಗಿ ಬ್ರಾಂಡಿಯನ್ನು ಬಳಸಲಾಗುತ್ತದೆ ,ಬ್ರಾಂಡಿಯಲ್ಲಿರುವ ಬಲವಾದ ಆಲ್ಕಹಾಲ್ ಅಂಶ ಬ್ಯಾಕ್ಟೀರಿಯಾಗಳನ್ನು ನಿರ್ಣಾಮ ಮಾಡುತ್ತದೆ, ,ಅಷ್ಟೇ ಅಲ್ಲದೆ ದೇಹವನ್ನು ಬೆಚ್ಚಗಿಟ್ಟು ವಿಷಮ ಶೀತ ಜ್ವರದ ವಿರುದ್ಧ ಹೋರಾಡುತ್ತದೆ ,ದೇಹದ ವಿಶ್ರಾಂತಿ ಹೆಚ್ಚಿಸುತ್ತದೆ ನಿದ್ದೆ ಬರಿಸುತ್ತದೆ ,ರೋಗ ನಿರೋಧಕ ವ್ಯವಸ್ಥೆ ವರ್ಧಿಸುತ್ತದೆ.

 

ನಿದ್ರೆಗೆ ಸಹಾಯ ಮಾಡುತ್ತದೆ :

 

ಉಷ್ಣತೆ ಮತ್ತು ವಿಶ್ರಾಂತಿ ಗುಣಗಳನ್ನು ಬ್ರಾಂಡಿ ಹೊಂದಿದೆ. ಖಿನ್ನತೆಯ ಗುಣಗಳಿಂದ ಬಳಲುತ್ತಿದ್ದರೆ ,ವಿಶ್ರಾಂತಿಯ ಹಾರ್ಮೋನು ಬಿಡುಗಡೆ ಮಾಡಿ , ಮನಸ್ಸನ್ನು ಹಾಗು ಮೈಯನ್ನು ಪ್ರಶಾಂತ ಗೊಳಿಸುತ್ತದೆ ಹಾಗೆಯೇ ಆರಾಮದಾಯಕ ನಿದ್ದೆಗೆ ಸಹಾಯ ಮಾಡುತ್ತದೆ .

ಹೃದಯ ಆರೋಗ್ಯ ಸುಧಾರಿಸುತ್ತದೆ :

 

 

ಬ್ರಾಂಡೀ ವ್ಯಾಪಕ ಶ್ರೇಣಿಯಲ್ಲಿರುವ ಆಂಟಿ ಆಕ್ಸಿಡಾಂಟ್ ಗಳನ್ನೂ ಹೊಂದಿದೆ ಇದು ಹೃದಯದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ ಕೊಲೆಸ್ಟರಾಲ್ ಮಟ್ಟವನ್ನು ಸಮತೋಲನಗೊಳಿಸಿ ಪ್ಲೇಕ್ ರಚನೆಯನ್ನು ಕಡಿಮೆ ಮಾಡುತ್ತದೆ .ಬ್ರಾಂಡೀಯಲ್ಲಿರುವ ಪಾಲಿಫಿನೋಲಿಕ್ ಸಂಯುಕ್ತಗಳು ಹೃದಯನಾಳದ ವ್ಯವಸ್ಥೆಯಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

 

ವಯಸ್ಸಾಗುವಿಕೆ ತಡೆಗಟ್ಟುತ್ತದೆ :

 

 

ಬ್ರಾಂಡಿಯಲ್ಲಿರುವ ಆಂಟಿ ಆಕ್ಸಿಡಾಂಟ್ ಅಂಶಗಳು ಮತ್ತು ಹಳೆಯ ಬ್ರಾಂಡಿ ಪೀಪಾಯಿಗಳಲ್ಲಿ ಕಂಡುಬರುವ ತಾಮ್ರದ ಅಂಶಗಳು ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕುತ್ತದೆ ,ಇದರಿಂದ ಅಪೊಪ್ಟೋಸಿಸ್ (ಜೀವಕೋಶದ ಸಾವು ) ಕೊಂಚ ಮುಂದೆ ಹೋಗುತ್ತದೆ ಇದರ ಪರಿಣಾಮವಾಗಿ ದೇಹದ ಮೇಲೆ ನೆರಿಗೆ ಹಾಗು ಸುಕ್ಕುಗಳು ಕಾಣುವುದಿಲ್ಲ .

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ :

 

 

ಬ್ರಾಂಡಿಯಲ್ಲಿರುವ ಆಂಟಿ ಆಕ್ಸಿಡಾಂಟ್ ಅಂಶಗಳು ಮತ್ತು ಎಲ್ಯಾಜಿಕ್ ಆಸಿಡ್ ಕ್ಯಾನ್ಸರ್ ವಿರುದ್ಧ ಬಲವಾಗಿ ಹೋರಾಡುತ್ತದೆ ,ಅಷ್ಟೇ ಅಲ್ಲದೆ ದೇಹದ ಜೀವಕೋಶದ ರಚನೆಯಲ್ಲಿನ ಏರುಪೇರನ್ನು ಸರಿಪಡಿಸುತ್ತದೆ .

 

ನೆನಪಿಡಿ :

ಯಾವುದೇ ವಿಷಯ ವಸ್ತುವಾದರೂ ಸರಿ ಅತಿಯಾದರೆ ಅಮೃತವು ವಿಷ , ಬ್ರಾಂಡಿಯನ್ನು ದಿನವೂ ಸೇವನೆ ಮಾಡಿದರೆ ದಾಸರಾಗುತ್ತೀರಾ ಒಂದು ಎಲ್ಲೆಯಲ್ಲಿ ಸೇವನೆ ಮಾಡಬೇಕು ಇಲ್ಲವಾದರೆ ನಿಮ್ಮ ಯಕೃತ್ ಹಾಗು ಕಿಡ್ನಿ ಗೆ ತೊಂದರೆ ತಪ್ಪಿದ್ದಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top