fbpx
ಆರೋಗ್ಯ

ಕೇವಲ ದನಕರುಗಳಿಗೆ ಮೇವಲ್ಲ ಈ ಹುರುಳಿ ಇದರ ಈ 11 ಆರೋಗ್ಯಕಾರಿ ಚಮತ್ಕಾರಗಳ ಬಗ್ಗೆ ತಿಳ್ಕೊಂಡ್ರೆ ಇನ್ಮೇಲೆ ಬಾಯಿ ಚಪ್ಪರಿಸಿಕೊಂಡು ತಿಂತೀರಾ

 

 

ಕಬ್ಬಿಣ, ಕ್ಯಾಲ್ಸಿಯಂ ಪ್ರೋಟೀನ್ ಹೇರಳವಾಗಿದ್ದು ದ್ವಿದಳ ಧಾನ್ಯಗಳಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಅಂಶವನ್ನು ಹೊಂದಿರುವ ಆಹಾರ ಇದು , ಕಡಿಮೆ ಕೊಬ್ಬು ಹಾಗು ಕಾರ್ಬೋಹೈಡ್ರೇಟ್ ಹೊಂದಿದೆ ಆದ್ದರಿಂದ ಮಧುಮೇಹ ಮತ್ತು ಬೊಜ್ಜು ರೋಗಿಗಳಿಗೆ ಸೂಕ್ತ ಆಹಾರ.

 

ರೋಗ ನಿರೋಧಕ ವ್ಯವಸ್ಥೆ ವರ್ಧಿಸುತ್ತದೆ :

 

ಶ್ವಾಸಕೋಶದ ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ , ಗಂಟಲು ನೋವು ಕೆಮ್ಮುಗಳಂತಹ ಉಸಿರಾಟದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹುರುಳಿ ಬಹಳ ಪರಿಣಾಮಕಾರಿಯಾಗಿದೆ ಬ್ಯಾಕ್ಟೀರಿಯಾಗಳ ತೊಂದರೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ .ರೋಗ ನಿರೋಧಕ ವ್ಯವಸ್ಥೆ ವರ್ಧಿಸುತ್ತದೆ.

 

ಅಜೀರ್ಣ ಹಾಗು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಮಾಡುತ್ತದೆ :

 

 

ಹುರುಳಿ ಅಜೀರ್ಣ ಹಾಗು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಮಾಡುತ್ತದೆ, ಹೊಟ್ಟೆಯಲ್ಲಿ ನೋವು ಅಥವಾ ಸಂಕಟವಾಗುವುದನ್ನು ಆಜೀರ್ಣವ್ಯಾದಿ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಇದು ಆಹಾರ ಸೇವನೆ ಸಂಬಂಧಿ ಸಮಸ್ಯೆ.ಜೊತೆಗೆ ಹೊಟ್ಟೆ ಉಬ್ಬರಿಸಿದಂತಾಗುವುದು , ತೇಗು ಬರುವುದು ಮತ್ತು ವಾಂತಿ ಕೂಡ ಆಗುತ್ತದೆ. ಸೋಂಕು ಹಾಗೂ ಕೆಲವು ಔಷಧದಿಂದಲೂ ಅಜೀರ್ಣವ್ಯಾಧಿ ಉಂಟಾಗುತ್ತದೆ.

 

ಬೊಜ್ಜು ಕಡಿಮೆಯಾಗುತ್ತದೆ :

 

 

ದೇಶದಲ್ಲಿ 350 ದಶಲಕ್ಷ ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಸ್ಥೂಲಕಾಯ ಹೊಂದಿರುವವರು ಖಿನ್ನತೆಗೆ ಒಳಗಾಗುವ ಅಪಾಯದ ಸಾಧ್ಯತೆ ಪ್ರಮಾಣ ಶೇಕಡ 20 ರಷ್ಟು ಅಧಿಕ, ದಿನಕ್ಕೆ ಎರಡು ಚಮಚ ಹುರುಳಿ ಪುಡಿಯನ್ನು ಹಾಲಿನಲ್ಲಿ ಕಾಯಿಸಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ .

 

ಸಕ್ಕರೆ ಖಾಯಿಲೆ ವಿರುದ್ಧ ಹೋರಾಡುತ್ತದೆ :

 

 

ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಗಳನ್ನು ಹೊಂದಿರುತ್ತದೆ ಅಷ್ಟೇ ಅಲ್ಲದೆ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ .

 

ಋತು ನೋವು :

 

 

ಋತು ಚಕ್ರ ಅಥವಾ ಪಿರಿಯಡ್ಸ್ ಸಮಯದಲ್ಲಿ ನೋವು ಜಾಸ್ತಿ ಆಗಿ ಕಷ್ಟಪಡುತ್ತಿದ್ದರೇ ದಿನಕ್ಕೆ ಒಂದು ಲೋಟ ಹುರಳಿ ಸೂಪ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ

 

ಭೇದಿ ,ವಾಂತಿ ಸಮಸ್ಯೆ ನಿವಾರಣೆ ಮಾಡುತ್ತದೆ :

 

 

ಕೆಲವರಿಗೆ ಊಟ ಮಾಡಿದ ತಕ್ಷಣ ಫುಡ್ ಪಾಯಿಸನ್ ಆಗಿಬಿಡುತ್ತದೆ .ಇದರಿಂದ ಹೊಟ್ಟೆ ನೋವು ,ಭೇದಿ ಮತ್ತು ಎದೆ ನೋವು ಉಂಟಾಗುತ್ತದೆ.ಅಂತಹ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಹುರಳಿ ಸೇವಿಸುತ್ತಾ ಬಂದರೆ ಕಡಿಮೆಯಾಗುತ್ತದೆ .

 

ಕಿಡ್ನಿ ಕಲ್ಲು ಸಮಸ್ಯೆ ನಿವಾರಣೆ ಮಾಡುತ್ತದೆ :

 

 

ಅನಿರೀಕ್ಷಿತ ಆಹಾರ ಪದ್ಧತಿಯು ನಿಮ್ಮ ಮೂತ್ರಪಿಂಡವನ್ನು ತೀವ್ರವಾಗಿ ಹಾನಿಗೊಳಿಸುತ್ತದೆ, ನಿಮ್ಮ ಮೂತ್ರಪಿಂಡಗಳು ಪ್ರತಿ ದಿನವೂ ವಿರಾಮವನ್ನು ತೆಗೆದುಕೊಳ್ಳದೆ ಕೆಲಸಮಾಡುತ್ತದೆ,ನಿಮ್ಮ ದೇಹದಲ್ಲಿ ಫಿಲ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ .ನಿಮ್ಮ ದೇಹದ ಹಾನಿಕಾರಕ ಜೀವಾಣು ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ ನಿತ್ಯವೂ ಎರಡು ಚಮಚ ಹುರಿದ ಹುರಳಿ ಬೀಜದ ಪುಡಿಯನ್ನು ಸೇವಿಸಿ .

 

ಮೂತ್ರದ ಸಮಸ್ಯೆ :

 

 

ಹಿಡಿಯಷ್ಟು ಹುರಳಿಯನ್ನು ಒಂದು ನೀರಿನ ಬಟ್ಟಲಲ್ಲಿ ನೆನೆಹಾಕಿ ಮರುದಿನ ಬೇಯಿಸಿ ಆ ನೀರನ್ನು ಮೂರು ಬಾರಿ ಸೇವಿಸಬೇಕು.

 

ದೇಹದ ಹುಣ್ಣುಗಳನ್ನು ನಿವಾರಿಸುತ್ತದೆ :

 

 

ದಿನಕ್ಕೆ ಎರಡು ಬಾರಿ ಹುರಳಿಯನ್ನು ಬೇಯಿಸಿ ಸೇವಿಸಿದರೆ ಹುರುಳಿಯಲ್ಲಿರುವ ಅಗತ್ಯ ಲಿಪಿಡ್ ಗಳು ಹುಣ್ಣುಗಳಿಂದ ನಿವಾರಣೆ ನೀಡುತ್ತದೆ .

 

ಪೈಲ್ಸ್ ನಿವಾರಿಸುತ್ತದೆ :

 

 

ಹಿಡಿಯಷ್ಟು ಹುರಳಿಯನ್ನು ಒಂದು ನೀರಿನ ಬಟ್ಟಲಲ್ಲಿ ನೆನೆಹಾಕಿ ಮರುದಿನ ಬೇಯಿಸಿ ಆ ನೀರನ್ನು ಮೂರು ಬಾರಿ ಸೇವಿಸಬೇಕು ಇದು ಪೈಲ್ಸ್ ಹಾಗು ಡಯೇರಿಯಾ ದಂತಹ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top