fbpx
ಹೆಚ್ಚಿನ

ಬಡ ವೃದ್ಧೆ ಮನೆಗೆ ಭೇಟಿ ನೀಡಿ ಮಾಸಿಕ ಪಿಂಚಣಿ ಕೊಟ್ಟು, ಜೊತೆಗೆ ಊಟ ಮಾಡಿದ ಜಿಲ್ಲಾಧಿಕಾರಿ

ತಮಿಳುನಾಡು ಕರೂರ್ ಜಿಲ್ಲಾಧಿಕಾರಿ ಆಗಿರುವ ಟಿ. ಅನ್ಬಾಝಗನ್ ಅವರು ತೀರಾ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ವೃದ್ಧೆಯ ಮನೆಗೆ ತೆರಳುವ ಮೂಲಕ ಅವರಿಗೆ ವೃದ್ಯಾಪ್ಯ ವೇತನವನ್ನು ಕೊಟ್ಟು. ವೃದ್ಧೆಯ ಜೊತೆಗೆ ಕುಳಿತು ಊಟ ಮಾಡಿ ಮಾನವೀತೆಯ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

 

ತಮಿಳು ನಾಡು ರಾಜ್ಯದ ಕರೂರು ನಗರದ ಚಿನ್ನಮನೈಕೆನ್ಪಟ್ಟಿ ಎಂಬಲ್ಲಿ ಸುಮಾರು 80 ವರ್ಷ ವಯಸ್ಸಿನ ವೃದ್ಧೆಯೊಬ್ಬರು ತೀರಾ ಬಡತನದಿಂದ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಈ ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಅವರಿಗೆ ಸ್ಥಳೀಯರು ವೃದ್ಧೆಯ ಸಂಕಷ್ಟದ ಜೀವನದ ಬಗ್ಗೆ ಹೇಳಿದ್ದರು. ಇದಕ್ಕೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ ವೃದ್ಧೆಗೆ ಮಾಸಿಕ ವೃದ್ಯಾಪ್ಯ ವೇತನ ಸಿಗುವುದಕ್ಕೆ ಎಲ್ಲ ತಯಾರಿ ಮಾಡಿದ್ದರು. ನಂತರ ಮಂಜೂರಾದ ಬಳಿಕ ತಾವೇ ಖುದ್ದಾಗಿ ಭೇಟಿ ನೀಡಿ ಅಜ್ಜಿಗೆ ವೃದ್ಯಾಪ್ಯ ವೇತನ ನೀಡಿದರು.

 

 

ಅನ್ಬಾಝಗನ್ ಅವರು ಬಡ ವೃದ್ಧ ಮಹಿಳೆಗೆ ಮಾಸಿಕವಾಗಿ 1000 ರೂಪಾಯಿ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈಗ ವೃದ್ಧೆಯ ಜೀವನಕ್ಕೆ ಈ ಪಿಂಚಣಿ ಆಸರೆಯಾಗಿದ್ದು ಜಿಲ್ಲಾಧಿಕಾರಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ವೃದ್ಧಾಪ್ಯ ಸಮಸ್ಯೆಯಿಂದ ಜೀವನ ನಡೆಸರು ತೊಂದರೆ ಸನುಭವಿಸುತ್ತಿರುವವರ ಮಾಹಿತಿ ಕಲೆಹಾಕಿ ಅವರಿಗೆ ವೃದ್ಧಾಪ್ಯ ಪಿಂಚಣಿ ಮಂಜೂರು ಮಾಡಿ ಎಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top