fbpx
ಮನೋರಂಜನೆ

ಕೆಜಿಎಫ್ ಚಿತ್ರದ ಯಶ್ ಇಂಟ್ರೊಡಕ್ಷನ್ ಹಾಡಿಗಾಗಿ ರೆಡಿಯಾಯ್ತು’80’ ರ ದಶಕದ ಭರ್ಜರಿ ಸೆಟ್.

ನಾನಾ ಕಾರಣಗಳಿಂದ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಹುಟ್ಟುಹಾಕಿರುವ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಈ ಹಿಂದೆ ಉಗ್ರಂ ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಅದೇಕೋ ಮುಗಿಯುವಂತೆಯೇ ಕಾಣಿಸುತ್ತಿಲ್ಲ. ಯಶ್ ಅಭಿಮಾನಿಗಳೂ ಕೂಡಾ ಕಾದೂ ಕಾದು ಸುಸ್ತೆದ್ದಿದ್ದಾರೆ.

 

 

ಇಂಥಾದ್ದರ ನಡುವೆ ಇದೀಗ ಸದರಿ ಚಿತ್ರದ ನಿರ್ಮಾಪಕರ ಕಡೆಯಿಂದ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ! ಕೆಜಿಎಫ್ ನಿರ್ಮಾಪಕ ಕಾರ್ತಿಕ್ ಗೌಡ ಚಿತ್ರೀಕರಣ ಕಡೇಯ ಹಂತ ತಲುಪಿಕೊಂಡಿರುವ ಸೂಚನೆ ಕೊಟ್ಟಿದ್ದಾರೆ. ಪಕ್ಕಾ ಮಾಸ್ ಚಿತ್ರವಾದ ಕೆಜಿಎಫ್‌ನ ಯಶ್ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡಿದ್ದು ಹಾಡಿನ ಸಲುವಾಗಿ ಹಾಕಿರುವ ’80’ ರ ದಶಕದ ಭರ್ಜರಿ ಸೆಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೈ ಜುಮ್ ಎನಿಸುವಂತಹ ಈ ಸೆಟ್ ಗಳನ್ನ ನೋಡಿದರೆ ಗೊತ್ತಾಗುತ್ತಿದೆ ಕೆಜಿಎಫ್ ಚಿತ್ರದ ಕ್ವಾಲಿಟಿ ಯಾವ ರೇಂಜಿಗೆ ಇದೆ ಎಂದು.

 

 

ಈಗಾಗಲೇ ಬಿಡುಗಡೆಯಾಗಿಒರುವ ಫೋಟೋಗಳಲ್ಲಿ ಯಶ್ ಅವರ ಡಿಫರೆಂಟ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಅವರಿಲ್ಲಿ ಈ ಹಿಂದೆ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರದಂಥಾ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರೀಕರಣವಾಗಲಿರೋ ದೃಷ್ಯಗಳೂ ಕೂಡಾ ಅಂಥಾದ್ದೇ ಖದರ್ ಹೊಂದಿವೆಯಂತೆ.

ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಭುವನ್ ಗೌಡ ಅವರ ಛಾಯಾಗ್ರಹಣವಿದೆ. ಅದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಈಗ ಕೆಜಿಎಫ್ ಸೃಷ್ಟಿಸಿರುವ ವ್ಯಾಪಕ ಹವಾ ಗಮನಿಸಿದರೆ ಈ ಚಿತ್ರ ಅದೇನೋ ಕಮಾಲ್ ಮಾಡುತ್ತದೆ ಎಂಬಂಥಾ ವಾತಾವರಣವಿರೋದಂತೂ ನಿಜ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top