fbpx
ಭವಿಷ್ಯ

ಈ 2 ರಾಶಿಯವರು ಸಂಬಂಧದಲ್ಲಿ ಹೆಚ್ಚು ನಂಬಿಕಸ್ಥರು ,ಕಷ್ಟ ಅಂತ ಬಂದೋರಿಗೆ ಸಹಾಯ ಮಾಡೋರು ಆದ್ರು ವೈಯಕ್ತಿಕ ಸಂಬಂಧದಲ್ಲಿ ಎಲ್ರುಗಿಂತ ಕಷ್ಟ ಅನುಭವಿಸುತ್ತಾರೆ

ಈ ಎರಡು ರಾಶಿಯವರು ವೈಯಕ್ತಿಕ ಸಂಬಂಧದಲ್ಲಿ ಮತ್ತು ಜೀವನದಲ್ಲಿ ಎಲ್ಲರಿಗಿಂತಲೂ ಹೆಚ್ಚು , ಕಷ್ಟ ಮತ್ತು ದುಃಖವನ್ನು ಅನುಭವಿಸುತ್ತಾರೆ ಹಾಗೂ ಸಂಬಂಧದಲ್ಲಿ ಇವರು ಅತಿ ಹೆಚ್ಚು ನಂಬಿಕಸ್ಥರು ಹಾಗೂ ವಿಶ್ವಾಸಾರ್ಹರು ಕೂಡ ಇವರೇ ಆಗಿರುತ್ತಾರೆ.

ಜೀವನದಲ್ಲಿ ಸಂಬಂಧಗಳಲ್ಲಿ ಅತೀ ಹೆಚ್ಚು ಕಷ್ಟವನ್ನು ಮನುಷ್ಯನಾದವನು ಅನುಭವಿಸುತ್ತಾನೆ. ಎಲ್ಲದಕ್ಕಿಂತ ಹೆಚ್ಚು ಸಂಬಂಧಗಳು ಮುರಿದು ಹೋಗುತ್ತವೆ.ಅತಿ ಹೆಚ್ಚಾಗಿ ಸಂಬಂಧ ಕೆಟ್ಟು ಹೋಗುತ್ತದೆ. ನಾವು ಹೇಗೆ ಜೀವನ ನೆಡೆಸುತ್ತೇವೆ ಹಾಗೇ ಇರುತ್ತೇವೆ. ಮತ್ತೊಂದು ಬಾರಿ ನಾವು ಗಟ್ಟಿಯಾಗಬೇಕು ಎಂದರೆ ಸಂಬಂಧದಲ್ಲಿ ಗಟ್ಟಿ ಮನಸ್ಸು ಮಾಡಿ ಹೊಂದಾಣಿಕೆ ಆಗಬೇಕಾಗುತ್ತದೆ. ಇಂದು ಆ ರೀತಿಯಲ್ಲಿ ಇರುವ ಎರಡು ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

 

 

ಅವರು ಸಂಬಂಧಗಳ ವಿಷಯದಲ್ಲಿ ಅತಿ ಹೆಚ್ಚು ದುಃಖವನ್ನು ಅನುಭವಿಸುತ್ತಾರೆ ಕಷ್ಟವನ್ನು ಪಡುತ್ತಾರೆ. ಆ ಎರಡು ರಾಶಿಗಳು ಯಾವ ರೀತಿ ಇದೆ ಎಂದರೆ ಅವರು ವೈಯಕ್ತಿಕ ಸಂಬಂಧಗಳಲ್ಲಿ ಗಂಗಾಜಲದ ರೀತಿಯಲ್ಲಿ ಪವಿತ್ರರಾಗಿರುತ್ತಾರೆ. ಅವರು ಅವರ ಸಂಬಂಧಕ್ಕೆ ಅಂದರೆ ಅವರ ಬಾಳ ಸಂಗಾತಿಗೆ ಎಲ್ಲವನ್ನೂ ಕೊಟ್ಟು ಬಿಡುತ್ತಾರೆ. ಅವರು ಈ ಸಂಬಂಧ ಕ್ಕೋಸ್ಕರ ಯಾವುದೇ ದುಃಖವನ್ನು ,ಕಷ್ಟವನ್ನು ಅನುಭವಿಸಲು ಸಹ ತಯಾರಾಗಿರುತ್ತಾರೆ.

ಈ ರಾಶಿಯವರ  ಜೀವನ ಏನಾದರೂ ಪರವಾಗಿಲ್ಲ, ಅವರಿಗೆ ಎಂಥದ್ದೇ ? ಏನೇ ಕೆಲಸ ಮಾಡಬೇಕಾದಂತಹ ಸ್ಥಿತಿ, ಸಂದರ್ಭ ಬಂದರೂ ಸರಿ  ಆ ಕಷ್ಟವನ್ನು ತಮ್ಮ ಪ್ರೀತಿ ಪಾತ್ರರಿಗೋಸ್ಕರ ಸ್ವೀಕರಿಸುತ್ತಾರೆ. ಆದರೆ ಈ ಎರಡು ರಾಶಿಯ ಜನರು ಯಾವಾಗಲೂ ಸಾಯುವ ಬಗ್ಗೆಯೇ ಯೋಚಿಸುತ್ತಾರೆ . ಈ ಎರಡು ರಾಶಿಯ ಸ್ತ್ರೀ ಮತ್ತು ಪುರುಷರು ಈ ಜಗತ್ತಿನ ಮುಂದೆ ತುಂಬಾ ಗಟ್ಟಿಯಾಗಿ ಇದ್ದೇವೆ ಎಂದು ಕಾಣಿಸಿ ಕೊಳ್ಳುತ್ತಾರೆ. ತುಂಬಾ ಗಟ್ಟಿ ಮನಸ್ಸನ್ನು ಉಳ್ಳವರು ಎಂದು ಹೊರಗಿನ ಪ್ರಪಂಚಕ್ಕೆ ಕಾಣಿಸುತ್ತದೆ. ಹೊರಗಿನ ಜನರು ಸಹ ಇವರನ್ನು ನೋಡಿ ಅದೇ ರೀತಿ ಅಂದುಕೊಳ್ಳುತ್ತಾರೆ.

 

 

ಆದರೆ ನಿಜ ಅಂಶವೇ ಬೇರೆಯಾಗಿರುತ್ತದೆ. ನಿಜವಾಗಿಯೂ ನಾವು ಇವರನ್ನು ಒಳ ಮನಸ್ಸಿನಿಂದ ನೋಡಿದರೆ ಇವರು ಸಂಪೂರ್ಣವಾಗಿ ಮುರಿದು ಹೋಗಿರುವ, ಎಲ್ಲವನ್ನೂ ಕಳೆದುಕೊಂಡಿರುವವರು ಮತ್ತು ಎಲ್ಲವನ್ನು ಬೇರೆಯವರಿಗೆ  ಬಿಟ್ಟು ಕೊಟ್ಟಿರುವವರು ಆಗಿರುತ್ತಾರೆ. ಈ ರಾಶಿಯವರನ್ನು ನೀವು ಸಹ ಬೇಕಾದರೆ ಬಹಳ ಹತ್ತಿರದಿಂದ ಗಮನಿಸಿ. ಆಗ ನಿಮಗೂ ಅರ್ಥವಾಗುತ್ತದೆ ಅವರು ಸಂಬಂಧಗಳಲ್ಲಿ ನಿಷ್ಠೆ, ಸಹಿಷ್ಣುತೆ, ಭಾವನಾತ್ಮಕತೆ, ಪವಿತ್ರತೆ, ಸಮರ್ಪಣಾ ಭಾವ ಮತ್ತು ತ್ಯಾಗ ಮನೋಭಾವವನ್ನು ಉಳ್ಳವರಾಗಿರುತ್ತಾರೆ. ಅವರ ಮಾತು ಕೂಡ ತುಂಬಾ ಮಧುರವಾಗಿ ಇರುತ್ತದೆ.ಈ ಪ್ರಕೃತಿಯು ಅವರಿಗೆಂದೇ ಇವೆಲ್ಲವನ್ನೂ ನೀಡಿದೆ ಆದರೆ ಸಾಮಾಜಿಕವಾಗಿ ನೋಡುವುದಾದರೆ ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ  ಮುಂದೆ ಸಾಗವುದು ಉತ್ತಮ.

ಕುಂಭ ಲಗ್ನ ಮತ್ತು  ಕುಂಭ ರಾಶಿ, ಸಿಂಹ ಲಗ್ನ ಮತ್ತು ಸಿಂಹ ರಾಶಿ.

ಕುಂಭ ಲಗ್ನ ಅಥವಾ ಕುಂಭ ರಾಶಿಯವರು ನೀವಾಗಿದ್ದರೆ, ನಿಮ್ಮ ಜೀವನದಲ್ಲಿ ಬಹಳಷ್ಟು ಏರಿಳಿತಗಳ ಜೊತೆಗೆ ನಿಮ್ಮ ತುದಿ ಬೆರಳಿನಲ್ಲಿ ಒಂದು ಅಥವಾ ಎರಡು ಸಂಬಂಧಗಳನ್ನು ಬಿಟ್ಟರೆ ಬಾಕಿ ಎಲ್ಲೂ ಯಾವ ಸಂಬಂಧವೂ ಕೂಡ ಇವರ ಜೀವನದಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ತಾಯಿಯ ಸಂಬಂಧ ಚೆನ್ನಾಗಿರುತ್ತದೆ. ಯಾಕೆಂದರೆ ಕುಂಭ ರಾಶಿಯಿಂದ ಚತುರ್ಥನೇ ಭಾವದಲ್ಲಿ ಚಂದ್ರನ ಸ್ಥಾನ ಅಂದರೆ ತಾಯಿಯ ಮನೆಯಾಗಿದೆ. ಆದ್ದರಿಂದ ಇವರು ತಮ್ಮ ತಾಯಿಯ ಜೊತೆ ಚೆನ್ನಾಗಿ ಇರುತ್ತಾರೆ. ಇನ್ನು ಸ್ವಲ್ಪ ಹೇಳಬೇಕೆಂದರೆ ತಂದೆಯ ಜೊತೆಗಿನ ಸಂಬಂಧ. ಇವರಿಬ್ಬರ ಸಂಬಂಧವನ್ನು ಬಿಟ್ಟು ಕುಂಭ ರಾಶಿಯವರಿಗೆ ಜೀವನದಲ್ಲಿ ಬೇರೆ ಯಾವ ಸಂಬಂಧವೂ ಹತ್ತಿರವಾಗುವುದಿಲ್ಲ.

 

 

ಒಂದು ವೇಳೆ ನಿಮಗೆ ಬೇರೆ ಯಾರಾದರೂ ಹತ್ತಿರವಾದರೂ ಕೂಡ ಅವರು ನಿಮಗೆ ಬರೀ ದುಃಖ, ಕಷ್ಟ, ಅವಮಾನಗಳನ್ನು ಮಾಡಲೆಂದೇ ಮತ್ತು ಇನ್ನೂ ಹೆಚ್ಚಾಗಿ ಅವರು ಯಾರ ಜೊತೆ ಪ್ರೀತಿಯ ಸಂಬಂಧದಲ್ಲಿ ಬಾಳ ಸಂಗಾತಿಯಾಗಿ ಇರುತ್ತಾರೋ ಅವರು ಇನ್ನೂ ಅಧಿಕವಾಗಿ ಹೆಚ್ಚು ದುಃಖವನ್ನು ಇವರಿಗೆ ನೀಡುತ್ತಾರೆ. ಈ ರೀತಿಯ ರಾಶಿಯವರು ಬಹಳಷ್ಟು ಮೋಸ ಹೋಗುತ್ತಾರೆ. ನೀವು ಬೇರೆಯವರಿಗೋಸ್ಕರ ಏನೇ ಮಾಡಿದರೂ ಸಹ ನಿಮ್ಮ ಜೀವನದಲ್ಲಿ ವೈಯಕ್ತಿಕ ಸಂಬಂಧದ ವಿಷಯಗಳಲ್ಲಿ ಬಂದರೆ ಸದಾ ದುಃಖ ಮತ್ತು ಕಷ್ಟವನ್ನು ಕೊಡುವವರೇ ಸಿಗುತ್ತಾರೆ. ಇದು ಎಷ್ಟು ಎತ್ತರಕ್ಕೆ ತಲುಪುತ್ತದೆ, ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಅದಕ್ಕೂ ಕೂಡ ಕೊನೆ ಇಲ್ಲ ಅದು ಆ ಈಶ್ವರನಿಗೆ ಗೊತ್ತು .

 

ಕುಂಭ ಮತ್ತು ಸಿಂಹ  ರಾಶಿಯವರು ಜೀವನದಲ್ಲಿ ಅವಶ್ಯವಾಗಿ ಅಳವಡಿಸಿಕೊಳ್ಳ ಬೇಕಾಗಿರುವ ಕೆಲವು ಸಲಹೆಗಳು. ಅವುಗಳನ್ನು ಪಾಲಿಸಿ ನಿಮ್ಮ ಜೀವನವನ್ನು ನೀವೇ ಬದಲಾಯಿಸಿಕೊಂಡು ರೂಪಿಸಿಕೊಳ್ಳಿ

 

ಕುಂಭ ಮತ್ತು ಸಿಂಹ  ರಾಶಿಯವರಾಗಿ ನೀವು ಎಂದಿಗೂ ಕೂಡ ವೈಯಕ್ತಿಕ ಸಂಬಂಧಗಳ ವಿಷಯಕ್ಕೆ ಸಂಕಷ್ಟಕ್ಕೆ ಈಡಾಗುವುದು ಬೇಡ. ನೀವು ನಿಮ್ಮ ರಾಶಿಯ ಪ್ರಕಾರ ತುಂಬಾ ಗಟ್ಟಿಯಾಗಿದ್ದೀರ ಅದು ನಿಮ್ಮ ವಿಚಾರಗಳಿಂದಾಗಿ, ರಾಶಿಯಿಂದಾಗಿ ಚಂದ್ರ ಮತ್ತು ಗುರುವಿನಿಂದ ಕೂಡ. ಆದರೂ ಕೂಡ ನೀವು ನಿಮ್ಮನ್ನು ದುರ್ಬಲರು ಎಂದು ಅಂದುಕೊಳ್ಳಬೇಡಿ. ವೈಯಕ್ತಿಕ ಸಂಬಂಧಗಳ ವಿಷಯಕ್ಕೆ ಬಂದಾಗ ನಿಮ್ಮನ್ನು ನೀವೇ ತುಂಬಾ ಗಟ್ಟಿಯಾಗಿ ಇರಿಸಿಕೊಳ್ಳಬೇಕು. ನಿಮ್ಮನ್ನು ಯಾರೂ ಅಲ್ಲಾಡಿಸಬಾರದು. ನಿಮ್ಮ ಗುರಿಯನ್ನು ತಲುಪಲು ನೀವೊಬ್ಬರೇ, ನಿಮ್ಮ ಶಕ್ತಿ ಸಾಮರ್ಥ್ಯದಿಂದ ಸಕ್ಷಮವಾಗಿ ಪ್ರಯತ್ನಿಸಬೇಕು.

ಯಾರ ಮೇಲೂ ಎಂದಿಗೂ ಅವಲಂಬಿತರಾಗಬೇಡಿ. ಅವರಿಲ್ಲದೇ ನಿಮ್ಮ ಜೀವನ ಇಲ್ಲ ಎಂದು ಅಂದುಕೊಳ್ಳಬೇಡಿ.

ನಿಮ್ಮನ್ನು ನೀವು ಏನೂ ಅಲ್ಲ ಎಂದು ಪರಿಗಣಿಸಿ ಕೀಳಾಗಿ, ಅವರಿಲ್ಲದೆ ಏನೂ ಇಲ್ಲ ಎಂದು ಅಂದುಕೊಳ್ಳಬೇಡಿ.

ಯಾವುದೂ ಕೂಡ ನಿಮ್ಮನ್ನು ಅಲ್ಲಾಡಿಸಬಾರದು ಆ ರೀತಿಯಲ್ಲಿ ನೀವು ಗಟ್ಟಿಯಾಗಿ ಸದೃಢವಾಗಿ ಇರಬೇಕು.

 

 

ಸಿಂಹ ರಾಶಿ ಮತ್ತು ಕುಂಭ ರಾಶಿ.

ಈ ಎರಡು ರಾಶಿಯವರ ವೈಯಕ್ತಿಕ  ಜೀವನದಲ್ಲಿ ಯಾವುದೇ ರೀತಿಯ ಸುಖದ  ಕಲ್ಪನೆಯನ್ನು ನೀವು ಎಂದಿಗೂ ಇಟ್ಟುಕೊಳ್ಳಬೇಡಿ. ಯಾಕೆಂದರೆ ನೀವು ನಿಮ್ಮಲ್ಲಿರುವ ಎಲ್ಲವನ್ನೂ ತ್ಯಾಗ ಮಾಡಿದರೂ, ಕೊಟ್ಟರೂ ಸಹ, ಅವರು ನಿಮ್ಮ ಜೀವನವನ್ನು ಸುಖವಾಗಿ ಇರಲು ಬಿಡುವುದಿಲ್ಲ. ಇದೆಲ್ಲವನ್ನೂ ತಿಳಿದುಕೊಂಡ ಮೇಲೆ ನೀವು ಕೇಳಬಹುದು ಹಾಗಾದರೆ ನಾವು ಯಾರ ಮೇಲೆ ನಂಬಿಕೆ ಇಡಬೇಕು ? ನಮ್ಮ ಜೀವನದಲ್ಲಿ ಯಾರನ್ನು ನಂಬಬೇಕು ? ಎಂದು ಈ ಎರಡು ರಾಶಿಯವರ ಮೇಲೆ ನೀವು ನಂಬಿಕೆ ಇಡಬಹುದು. ವಿಶ್ವಾಸ ಇಡಬಹುದು. ತುಲನಾತ್ಮಕ ದೃಷ್ಟಿಯಿಂದ ನೀವು ನಂಬಿಕೆ ಇಡಬಹುದು. ಕುಂಭ  ಮತ್ತು ಸಿಂಹ ರಾಶಿಯವರು ವಿಶ್ವಾಸಕ್ಕೆ ಅರ್ಹರು ಮತ್ತು ಪಾತ್ರರಾಗಿರುತ್ತಾರೆ. ಆದರೆ ವೈಯಕ್ತಿಕ ಸಂಬಂಧಗಳ ವಿಷಯಕ್ಕೆ ಬಂದರೆ ಇವರು ತುಂಬಾ ದುರ್ಬಲರು ಮತ್ತು ಕಷ್ಟ, ದುಃಖವನ್ನು ಅನುಭವಿಸಬೇಕಾಗುವುದು.

 

 

ನಿಮ್ಮದು ಕುಂಭ ಲಗ್ನ ಮತ್ತು  ಕುಂಭ ರಾಶಿ, ಸಿಂಹ ಲಗ್ನ ಮತ್ತು ಸಿಂಹ ರಾಶಿಯಾಗಿದ್ದರೆ

ನಿಮ್ಮದು ಕುಂಭ ಲಗ್ನ ಮತ್ತು  ಕುಂಭ ರಾಶಿ, ಸಿಂಹ ಲಗ್ನ ಮತ್ತು ಸಿಂಹ ರಾಶಿಯಾಗಿದ್ದರೆ, ನಿಮ್ಮನ್ನು ನೀವು ಗಟ್ಟಿಯಾಗಿ, ಗಟ್ಟಿಯಾದ ಸದೃಢವಾದ ಮನಸ್ಸನ್ನು ಇಟ್ಟುಕೊಳ್ಳಬೇಕು .ಯಾವ ರೀತಿ ಇರಬೇಕೆಂದರೆ ವೈಯಕ್ತಿಕ ಸಂಬಂಧಗಳಲ್ಲಿ ದುಃಖ ಕಷ್ಟಗಳನ್ನು ಅನುಭವಿಸುತ್ತ ಇರಬೇಡಿ. ನಿಮ್ಮ ಗುರಿ ನಿಮ್ಮ ಜೊತೆಗೆ ಇರುತ್ತದೆ. ಈ ವಿಷಯವನ್ನು ನಿಮಗೆ ಈ ರೀತಿಯಾಗಿ ತಿಳಿಸುತ್ತಿದ್ದೇವೆ ಅಷ್ಟೇ. ಆದರೆ ನಿಮ್ಮ ಜೀವನ ಏನು  ? ಎಂಬುದು ನಿಮಗೆ ಗೊತ್ತಿದೆ . ಅಲ್ಲವೆ ?  ಈ ವಿಷಯವನ್ನು ಅರ್ಥ ಮಾಡಿಕೊಂಡು ನಿಮ್ಮನ್ನು ನೀವೇ ಬದಲಾಯಿಸಿಕೊಳ್ಳಿ. ಯಾವತ್ತಿಗೂ ಎಂದಿಗೂ ನಾನು  ಒಂಟಿ ಎಂದು ಭಾವಿಸಬೇಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top