fbpx
ಸಿನಿಮಾ

ಮತ್ತೆ ಕ್ರೇಜಿ ಸ್ಟಾರ್ ಹಾವಳಿ ಶುರು

ನಟ ರವಿಚಂದ್ರನ್ ಅವರ ಯಾವ ಚಿತ್ರಗಳು ಇತ್ತೀಚಿಗೆ ಬಿಡುಗಡೆ ಆಗಿರಲಿಲ್ಲ ಇದರಿಂದ ಅವರ ಅಭಿಮಾನಿಗಳಲ್ಲಿ ನಿರಾಸೆ ಉಂಟಾಗಿತ್ತು. ಈಗ ರವಿಮಾಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ರವಿಚಂದ್ರರವರ 5 ಚಿತ್ರಗಳು ಈ ವರ್ಷ ಬ್ಯಾಕ್ ಟು ಬ್ಯಾಕ್ ಬಿಡುಗಡೆ ಆಗಲಿವೆ ಎಂದು ತಿಳಿದು ಬಂದಿದೆ. ಅದರಲ್ಲಿ ಈಗಾಗಲೇ ಶೂಟಿಂಗ್ ಮುಗಿಸಿರುವ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.

 

 

ಬಕಾಸುರ ಮತ್ತು ಸೀಜರ್ ಚಿತ್ರದಲ್ಲಿ ರವಿಚಂದ್ರನ್ ಅಭಿನಯ ಮಾಡಿದ್ದೂ ಎರಡು ಚಿತ್ರಗಳು ಈಗ ಬಿಡುಗಡೆ ಆಗಲು ಸಿದ್ಧವಾಗಿವೆ. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಯುಗಾದಿ ಹಬ್ಬಕ್ಕೆ ರಿಲೀಸ್ ಆಗಬೇಕಿತ್ತು ಆದರೆ ಕೆಲವು ದೃಶ್ಯಗಳ ರೀಶೂಟ್, ಮತ್ತು ಗ್ರಾಫಿಕ್ ಕೆಲಸಗಳು ಬಾಕಿ ಉಳಿದಿದ್ದರಿಂದ ಯುಗಾದಿಗೆ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ.. ಏನೇ ಆಗಲಿ ಚುನಾವಣೆಗೂ ಮುನ್ನ ಚಿತ್ರವನ್ನು ರಿಲೀಸ್ ಮಾಡಬೇಕು ಎಂದು ಪಣತೊಟ್ಟಿರುವ ನಿರ್ಮಾಪಕ ಮುನಿರತ್ನ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರಲು ನಿರ್ಧರಿಸಿದ್ದಾರೆ.

 

 

ರವಿಚಂದ್ರನ್ ಅವರೇ ನಿರ್ದೇಶನ ಮಾಡಿರುವ ‘ರಾಜೇಂದ್ರ ಪೊನ್ನಪ್ಪ’ ಚಿತ್ರ ಕೂಡ ಅತಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಇದರ ಜೊತೆಗೆ ‘ದಶರಥ’ ಚಿತ್ರದಲ್ಲಿ ಕೂಡ ರವಿಚಂದ್ರನ್ ಅಭಿನಯ್ ಮಾಡಿದ್ದೂ ಅದು ಕೂಡ ಬಿಡುಗಡೆಗೆ ಸಿದ್ಧವಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top