fbpx
ಕಿರುತೆರೆ

ಭಂಡಾರಿ ಸಹೋದರರ ಪಾಲಿಗೆ ಕನ್ನಡದ ಈ ಸ್ಟಾರ್ ಸ್ಟೈಲ್ ಐಕಾನ್ ಅಂತೇ!

ತಮ್ಮ ಖಡಕ್ ಬ್ಯಾರಿಟೊನ್ ವಾಯ್ಸ್ , ಹ್ಯಾಂಡ್’ಸಮ್ ಲುಕ್ ,ಹೇರ್ ಸ್ಟೈಲ್, ಡ್ರೆಸ್ ಸ್ಟೈಲ್, ಆನ್ ಸ್ಕ್ರೀನ್ ಅಂಡ್ ಆಫ್ ಸ್ಕ್ರೀನ್ ಮ್ಯಾನರಿಸಂನಿಂದಲೇ ಸಾವಿರಾರು ಹುಡುಗಿಯರಿಗೆ ಹುಚ್ಚು ಹಿಡಿಸಿದ್ದಾರೆ ಸುದೀಪ್. ಸ್ಯಾಂಡಲ್ ವುಡ್’ನ ಬಹುತೇಕ ಎಲ್ಲಾ ಯುವ ನಟ ನಟಿಯರಿಗೆ ಕಿಚ್ಚನೇ ಹಾಟ್ ಫೆವರೇಟ್, ಇದು ಸಾಕಷ್ಟು ಭಾರಿ ಸಾಭೀತಾಗುತ್ತಲೇ ಇರುತ್ತದೆ.. ಭಂಡಾರಿ ಸಹೋದರರ ಮೂಲಕ ಈಗ ಅದು ಮತ್ತೆ ಸಾಭೀತಾಗಿದೆ.

 

 

ಶಿವಣ್ಣ ನಡೆಸಿಕೊಡುತ್ತಿರುವ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರುತ್ತಿರುವ ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ನೆನ್ನೆಯ ಸಂಚಿಕೆಯಲ್ಲಿ ರಾಜರಥ ಚಿತ್ರತಂಡ ಅಥಿತಿಗಳಾಗಿ ಬಂದಿದ್ದರು. ನಿರ್ದೇಶಕ ಅನೂಪ್ ಭಂಡಾರಿ. ನಟ ನಿರೂಪ್ ಭಂಡಾರಿ, ನಟಿ ಆವಂತಿಕಾ ಶೆಟ್ಟಿ ಮತ್ತು ಕಾಲಿವುಡ್ ಸ್ಟಾರ್ ಆರ್ಯ ಅತಿಗಳಾಗಿ ಬಂದಿದ್ದರು, ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ರಾಜರಥ ಚಿತ್ರತಂಡದವ್ರು ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದಲ್ಲಿ ಲೋಕಾಭಿರಾಮವಾಗಿ ಚರ್ಚೆ ನಡೆಸುವಾಗ ಭಂಡಾರಿ ಸಹೋದರರಿಗೆ “ಕನ್ನಡ ಚಿತ್ರರಂಗದಲ್ಲಿ ಯಾವ ನಟ ನಿಮಗೆ ಸ್ಟೈಲ್ ಐಕಾನ್.?’ ಎಂದು ಶಿವರಾಜ್ ಕುಮಾರ್ ಕೇಳಿದಾಗ ನಿರೂಪ್ ಮತ್ತು ಅನೂಪ್ ಇಬ್ಬರೂ ಕೂಡ ಥಟ್ ಅಂತ ”ಸುದೀಪ್ ” ಎಂದು ಉತ್ತರಿಸಿದರು. ತಮ್ಮ ಅಭಿಮಾನಿಗಳಿಂದ ಸ್ಟೈಲಿಶ್ ಕಿಂಗ್ ಎಂದೇ ಕರೆಸಿಕೊಳ್ಳುವ ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಸುರಸುಂದರ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top