fbpx
ಸಮಾಚಾರ

ಕಾಲಿವುಡ್ ಸ್ಟಾರ್ ಆರ್ಯ ಪಾಲಿಗೆ ಕನ್ನಡದ ಈ ನಟ ಸ್ಟೈಲ್ ಐಕಾನ್ ಅಂತೇ!

ರಾಜ ರಾಣಿ ಎಂಬ ತಮಿಳು ಚಿತ್ರದ ಮೂಲಕ ಅಭೂತಪೂರ್ವ ಜನಪ್ರಿಯತೆಯನ್ನು ಕಂಡಿರುವ ಕಾಲಿವುಡ್ ಸ್ಟಾರ್ ನಟ ಆರ್ಯ. ಇತ್ತೀಚಿಗೆ ರಾಜರಥ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ. ತಮ್ಮ ಗಂಭೀರ ನಟನೆಯಿಂದ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಆರ್ಯ ಅವರಿಗೆ ನಮ್ಮ ಕನ್ನಡದ ಈ ನಟಿ ಅಂದ್ರೆ ತುಂಬಾ ಇಷ್ಟ ಅಂತೇ! ಅದು ಯಾರು ಅಂತೀರಾ? ಮುಂದೆ ಓದಿ.

 

 

ಶಿವಣ್ಣ ನಡೆಸಿಕೊಡುತ್ತಿರುವ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರುತ್ತಿರುವ ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ನೆನ್ನೆಯ ಸಂಚಿಕೆಯಲ್ಲಿ ರಾಜರಥ ಚಿತ್ರತಂಡ ಅಥಿತಿಗಳಾಗಿ ಬಂದಿದ್ದರು. ನಿರ್ದೇಶಕ ಅನೂಪ್ ಭಂಡಾರಿ. ನಟ ನಿರೂಪ್ ಭಂಡಾರಿ, ನಟಿ ಆವಂತಿಕಾ ಶೆಟ್ಟಿ ಮತ್ತು ಕಾಲಿವುಡ್ ಸ್ಟಾರ್ ಆರ್ಯ ಅತಿಗಳಾಗಿ ಬಂದಿದ್ದರು, ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ರಾಜರಥ ಚಿತ್ರತಂಡದವ್ರು ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದಲ್ಲಿ ಲೋಕಾಭಿರಾಮವಾಗಿ ಚರ್ಚೆ ನಡೆಸುವಾಗ “ಕನ್ನಡ ಚಿತ್ರರಂಗದಲ್ಲಿ ಯಾವ ನಟ ನಿಮಗೆ ಸ್ಟೈಲ್ ಐಕಾನ್.?’ ಎಂದು ಶಿವರಾಜ್ ಕುಮಾರ್ ಕೇಳಿದಾಗ ತಮಿಳು ನಟ ಆರ್ಯ ತಕ್ಷಣ ”ಯಶ್” ಎಂದು ಉತ್ತರಿಸಿದರು. ಈ ಮೂಲಕ ತಮ್ಮ ಸ್ಟೈಲ್’ನಿಂದಲೇ ಕನ್ನಡ ಚಿತ್ರರಸಿಕರನ್ನು ಮೋಡಿಮಾಡಿರುವ ಯಶ್ ಗಡಿಯಾಚೆಗಿನ ನಟರಿಗೂ ಫಿದಾ ಮಾಡಿದ್ದಾರೆ ಎಂಬ ವಿಚಾರ ಆರ್ಯ ಮೂಲಕ ಬಹಿರಂಗವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top