fbpx
ಸಮಾಚಾರ

ಆದಿವಾಸಿಗಳ ಅಹಿಂಸಾತ್ಮಕ ಹೋರಾಟಕ್ಕೆ ನಕ್ಸಲ್ ಬಣ್ಣ ಕಟ್ಟಿದ ಬಿಜೆಪಿ ಕೂಡಲೇ ಕ್ಷಮೆ ಕೇಳದಿದ್ದರೆ ಕಾನೂನು ಹೋರಾಟ- ನಟ ಚೇತನ್.

ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ, ಬಂದ ದುಡ್ಡಿನ ಲೆಕ್ಕ ಬರೆಯುತ್ತಾ ಕೂರುವ ಹೀರೋಗಳ ನಡುವೆ ಅನೇಕ ಸಾಮಾಜಿಕ ಸಮಸ್ಯೆಗಳು ಮತ್ತು ಶೋಷಿತರ ನೋವಿಗೆ ಮಿಡಿಯುತ್ತಾ ಬಂದಿರುವ ನಟ ಚೇತನ್ ಅವರಿಗೆ ರಾಜ್ಯ ಬಿಜೆಪಿ ನಕ್ಸಲ್ ಪಟ್ಟ ಕಟ್ಟಿದೆ. ಹೌದು ಇತ್ತೀಚಿಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ರಾಜ್ಯ ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ನಲ್ಲಿ ನಟ ಚೇತನ್ ನಕ್ಸಲ್ ಉಗ್ರವಾದ ಪ್ರೇರಿತಗಾರ ಎಂದು ಬಿಂಬಿಸಲಾಗಿದೆ. ಈ ಪಟ್ಟಿಯಲ್ಲಿ ಕೇವಲ ಚೇತನ್ ಮಾತ್ರವಲ್ಲದೇ ಹಿರಿಯ ವಿಚಾರವಾದಿ ಎ.ಕೆ.ಸುಬ್ಬಯ್ಯ, ಗುಜರಾತಿನ ಶಾಸಕ ಮತ್ತು ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರ ಹೆಸರನ್ನು ಸೇರಿಸಲಾಗಿದೆ.

 

 

ಕೊಡಗಿನ ಆದಿವಾಸಿಗಳ ಬದುಕನ್ನು ಎತ್ತಂಗಡಿ ಮಾಡಿರುವ ವಿಚಾರವಾಗಿ ಆರೋಪ ಮಾಡಿರುವ ಬಿಜೆಪಿ “ಕಾಂಗ್ರೆಸ್ ಸರ್ಕಾರ ಪುನರ್ವಸತಿ ಹೆಸರಿನಲ್ಲಿ ಪರೋಕ್ಷವಾಗಿ ನಕ್ಸಲೀಯರಿಗೆ ಪ್ರೋತ್ಸಾಹ ನೀಡಿದೆ” ಎಂದು ನೇರ ಆರೋಪ ಮಾಡಿದೆ. 2016ರಲ್ಲಿ ಕೊಡಗು ಜಿಲ್ಲೆ ದಿಡ್ಡಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸಿದ್ದ ಆದಿವಾಸಿಗಳ ತೆರವುಗೊಳಿಸಿ ಅವರ ಜೀವನವನ್ನು ಒಕ್ಕಲೆಬ್ಬಿಸಿತ್ತು. ಕಾಂಗ್ರೆಸ್ ಸರ್ಕಾರದ ಈ ಕ್ರಮದ ವಿರುದ್ಧ ಅಲ್ಲಿನ ಆಧಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆಯಲ್ಲಿ ಆದಿವಾಸಿಗಳ ಕೂಗಿಗೆ ನಟ ಚೇತನ್ ಕೂಡ ದನಿಗೂಡಿಸಿ ಆದಿವಾಸಿಗಳ ಪರವಾಗಿ ನಿಂತು ಅವರಿಗೆ ನ್ಯಾಯ ಕೊಡುವಂತೆ ತೀವ್ರ ಹೋರಾಟಮಾಡಿದ್ದರು.

ಆದರೆ, “ಪ್ರತಿಭಟನೆ ಬಳಿಕ ನಡೆದ ತನಿಖೆಯಿಂದ ಸ್ಥಳೀಯ ಆದಿವಾಸಿಗಳ ಸಹಾಯದಿಂದಲೇ ನಕ್ಸಲ್ ಭಯೋತ್ಪಾದಕರಿಗೆ ಕೊಡಗಿನ ಭಾಗಗಳಲ್ಲಿ ನೆಲೆಯೂರಲು ಕಾರಣವಾಗಿದೆ. ನಕ್ಸಲ್ ನೆಲೆ ಸ್ಥಾಪನೆಗೆ ಇಲ್ಲಿನ ಆದಿವಾಸಿಗಳನ್ನೇ ಬಳಕೆ ಮಾಡಿಕೊಳ್ಳಲಾಯಿತು ಹಾಗಾಗಿ ದಿಡ್ಡಲ್ಲಿ ಆದಿವಾಸಿಗಳ ಹೋರಾಟವನ್ನು ನಕ್ಸಲ್ ಪ್ರೇರಿತ ಎಂದು ಬಿಜೆಪಿ ಚಾರ್ಜ್‌ಶೀಟ್‌ನಲ್ಲಿ ಪ್ರಸ್ಥಾಪಿಸಲಾಗಿದೆ.

 

 

ತಮ್ಮ ಹೋರಾಟಕ್ಕೆ ನಕ್ಸಲ್ ಬಣ್ಣ ಕಟ್ಟಿರುವ ವಿಚಾರವಾಗಿ ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚೇತನ್ “ಸಂವಿಧಾನಾತ್ಮಕವಾಗಿ ಗಾಂಧೀ, ಅಂಬೇಡ್ಕರ್ ಹಾಕಿಕೊಟ್ಟ ಅಹಿಂಸೆ ಮಾರ್ಗದಲ್ಲಿ ನಡೆದ ಆದಿವಾಸಿ ಜನರ ದಿಡ್ಡಳ್ಳಿ ಹೋರಾಟವನ್ನು ನಕ್ಸಲ್ ಪ್ರೇರಿತ ಹೋರಾಟ ಹಾಗೂ ಅದರ ನೇತೃತ್ವ ವಹಿಸಿದ್ದ ನನ್ನ ಹಾಗೂ ಎ.ಕೆ.ಸುಬ್ಬಯ್ಯರನ್ನು ನಕ್ಸಲ್ ಪ್ರೇರಿತರು ಎಂದು ಬಿಂಬಿಸಿರುವ ಬಿಜೆಪಿ ಈ ಕೂಡಲೆ ರಾಜ್ಯದ ಜನತೆಯ ಮುಂದೆ ಕ್ಷಮೆ ಯಾಚಿಸಿ, ಚಾರ್ಜ್‌ಶೀಟ್‌ನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಕಾನೂನಾತ್ಮಕ ಹೋರಾಟ ನಡೆಸಲಾಗುವುದು” ಎಂದು ಹೇಳಿದ್ದಾರೆ.

ದಿಡ್ಡಳ್ಳಿಯಲ್ಲಿ ಮೂರು ಸಾವಿರ ಆದಿವಾಸಿಗಳ ಎತ್ತಂಗಡಿ ಮಾಡಿಸಿ ಬದುಕನ್ನು ಒಕ್ಕಲೆಬ್ಬಿಸಿದಾಗ ಅವರ ಜೊತೆ ನಾವು ಹೋರಾಟ ನಡೆಸಿದ್ದೆವು. ಅದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಮಾಡಿದ ಹೋರಾಟ. ಹೋರಾಟದಲ್ಲಿ ಯಾವುದೇ ತೆರೆಯಾದ ಶಸ್ತ್ರಾಸ್ತ್ರ ಬಳಕೆ ಮಾಡಿರಲಿಲ್ಲ. ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಿದ್ದೇವೆ ಮುಖ್ಯವಾಗಿ ಈ ಪ್ರತಿಭಟನೆ ನಡೆಯುವಾಗ ನಾವು ಯಾವುದೇ ರೀತಿಯಲ್ಲಿ ಕಾನೂನಿನ ಉಲ್ಲಂಘನೆ ಆಗಿಲ್ಲ..ಕೆಲವು ಕಾನೂನು ತಜ್ಞರನ್ನು ಕರೆದೊಯ್ದು ಆ ಹೋರಾಟವನ್ನು ನಾವು ಗೆದ್ದಿದ್ದೇವೆ. ಈಗ ಅಲ್ಲಿನ ಮೂಲ ನಿವಾಸಿಗಳಿಗೆ 528 ಮನೆಗಳು ನಿರ್ಮಾಣವಾಗುತ್ತಿವೆ. ಇನ್ನೂ ಸಾವಿರ ಮನೆಗಳನ್ನು ನಿರ್ಮಿಸುವ ಭರವಸೆ ಸರ್ಕಾರದಿಂದ ಸಿಕ್ಕಿದೆ. ಆದರೆ ನಮ್ಮ ಈ ಹೋರಾಟವನ್ನು ನಕ್ಸಲ್ ಪ್ರೇರಿತ ಎಂದಿರುವುದು ನಿಜಕ್ಕೂ ನೋವು ತಂದಿದೆ

 

 

ಹಾಗೆ ನೋಡಿದರೆ ಸರ್ಕಾರದ ವಿರುದ್ದದ ಈ ಹೋರಾಟದಲ್ಲಿ ಆದಿವಾಸಿಗಳ ಪುನರ್ವಸತಿ ವಿಚಾರವಾಗಿ ವಿರೋಧಪಕ್ಷವಾಗಿರುವ ಬಿಜೆಪಿ ನಮ್ಮೊಂದಿಗೆ ಕೈಜೋಡಿಸಬೇಕಿತ್ತು. ಆದ್ರೆ ಬಿಜೆಪಿ ಮಹಿಳೆಯರ, ದಲಿತರ, ಶೋಷಿತರ ಪರವಾಗಿಲ್ಲ ಎಂದು ಆದಿವಾಸಿಗಳ ಅಹಿಂಸಾತ್ಮಕ ಹೋರಾಟಕ್ಕೆ ನಕ್ಸಲ್ ಬಣ್ಣ ಕಟ್ಟಿರುವುದರಿಂದಲೇ ತಿಳಿಯುತ್ತದೆ. ಬಿಜೆಪಿ ಶ್ರೀಮಂತರು, ಭೂಮಾಲೀಕರು, ಬಂಡವಾಳಶಾಹಿಗಳ ಪರವಾಗಿದ್ದು ಕೇವಲ ಧರ್ಮವನ್ನಿಟ್ಟು ರಾಜಕೀಯ ಸಿದ್ಧಾಂತ ಹೇರುತ್ತಿದ್ದಾರೆ. ನಾವು ದೇಶಭಕ್ತರು, ಕೇವಲ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಕೂಡ ಜನಪರವಾಗಿಲ್ಲ. ಯಾವ ರಾಜಕೀಯ ಪಕ್ಷವೂ ಶೋಷಿತರ ಪರವಾಗಿ ಧ್ವನಿ ಎತ್ತುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top