fbpx
ಸಿನಿಮಾ

ಈ ಕಾರಣಕ್ಕೆ ಅಜಯ್‌ ದೇವಗನ್‌ ಗೆ ಸಕ್ಕತ್ ಕ್ಲಾಸ್ ತಗೊಂಡ್ರು ನೆಟ್ಟಿಗರು

ಬಾಲಿವುಡ್ ಚಿತ್ರನಟ ಅಜಯ್ ದೇವಗನ್ ನಿನ್ನೆ ತಮ್ಮ 49 ನೆಯ ಹುಟ್ಟುಬ್ಬವನ್ನು ಕುಟುಂಬದವರೊಂದಿಗೆ ಪ್ಯಾರಿಸ್ ನಲ್ಲಿ ಆಚರಣೆ ಮಾಡಿಕೊಂಡರು ಎಂದು ತಿಳಿದು ಬಂದಿದೆ.

 

 

ಅಜಯ ದೇವಗನ್ ತಮ್ಮ ಪತ್ನಿ ಕಾಜೋಲ್ ಹಾಗು ಪುತ್ರ ಯುಗ್‌ ಜೊತೆಗೆ ಅಮೂಲ್ಯ ಸಮಯ ಕಳೆದರು. ಈ ಸಂಧರ್ಭದಲ್ಲಿ ತೆಗೆಸಿಕೊಂಡ ಚಿತ್ರಗಳನ್ನು ಅಜಯ ದೇವಗನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವ್ರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ ಎಲ್ಲ ಚಿತ್ರಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ಆದ್ರೆ ಇವರ ಒಂದು ಚಿತ್ರ ಮಾತ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದೆ.

 

 

ಅಜಯ ದೇವಗನ್ ಪುತ್ರನ ಜೊತೆಗಿರುವ ಚಿತ್ರದಲ್ಲಿ ಕೈಯಲ್ಲಿ ಸಿಗರೇಟ್ ಹಿಡಿದುಕೊಂಡಿದ್ದಾರೆ. ಮಗ ಜೊತೆಗಿರುವಾಗ ಕೈಯಲ್ಲಿ ಸಿಗರೇಟ್ ಹಿಡಿದು ಕೊಂಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

 

 

ಅಭಿಮಾನಿಗಳು ಅಜಯ್ ದೇವಗನ್ ಗೆ ಸಿಗರೇಟ್ ಸೇದುವುದನ್ನು ಬಿಡಿ ಇಲ್ಲವೇ ಮಗ ಜೊತೆಗಿರುವಾಗ ಸೇದಬೇಡಿ ಎಂದು ಬುದ್ದಿ ಹೇಳುತ್ತಿದ್ದಾರೆ. ಟ್ರೊಲ್ ಮಾಡುವವರು ಉಗ್ರ ಸ್ವರೂಪ ಪಡೆದಿಲ್ಲ. ಸೌಮ್ಯವಾಗಿಯೇ ಅಜಯ ದೇವಗನ್ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಬಹುಶ ಅಜಯ ದೇವಗನ್ ಗೆ ಇದೂ ಎಚ್ಚರಿಕೆಯೇ ಘಂಟೆ ಆಗಲಿದೆ. ಇನ್ನು ಮುಂದೆ ಅಜಯ್ ಈ ರೀತಿ ತಪ್ಪು ಮಾಡಿವುದಿಲ್ಲ ಎನಿಸುತ್ತೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top