fbpx
ಸಿನಿಮಾ

ಐಂದ್ರಿತಾ – ದಿಗಂತ್‌ ಜೊತೆಗಿನ ಕೆಲವು ರೋಮ್ಯಾಂಟಿಕ್ ಘಟನೆಗಳನ್ನ ನೋಡಿದ್ರೆ ಯಾವುದೇ ಲವರ್ಸ್ ಗಾದ್ರು ಹೀಗಿದ್ರೆ ಚೆನ್ನ ಅಂತ ಅನ್ನಿಸದೆ ಇರಲ್ಲ

ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೈ ಹಾಗು ನಟ ದಿಗಂತ್ ಮದುವೆ ಅಗಲಿದ್ದಾರೆ ಎನ್ನುವ ಮಾತುಗಳು ಈಗ ಗುಟ್ಟಾಗಿ ಉಳಿದಿಲ್ಲ. ಕೆಲವು ವರ್ಷಗಳ ಇವರ ಪ್ರೇಮದ ಬಗ್ಗೆ ನಟಿ ಐಂದ್ರಿತಾ ರೈ ಅವರೇ ಖಚಿತ ಪಡಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ನಡೆಸಿಕೊಡುವ ಯಾರಿ ವಿಥ್ ಶಿವಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿಗಂತ್, ಶಿವಣ್ಣ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ವೇಳೆ ದಿಗಂತ ಈ ವರ್ಷದ ಕೊನೆಗೆ ಮದುವೆ ಆಗುವುದಾಗಿ ಹೇಳಿದರು.

ದಿಗಂತ್ ಹಾಗು ಐಂದ್ರಿತಾ ರೈ ಅವರ ನಡುವಿನ ಪ್ರೇಮ-ಸ್ನೇಹಕ್ಕೆ ಈ ಫೋಟೋಗಳು ಸಾಕ್ಷಿಯಾಗಿವೆ. ಐಂದ್ರಿತಾ ತಮ್ಮ ಫೇಸ್‌ ಬುಕ್‌ ಪುಟದಲ್ಲಿ ದಿಗಂತ್‌ ಜತೆಗಿನ ರೋಮಾಂಟಿಕ್‌ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ಚಿತ್ರದ ಜೊತೆಗೆ ಆಂಗ್ಲ ಭಾಷೆಯಲ್ಲಿ ಕವನವನ್ನೂ ಕೂಡ ಇವರು ಬರೆದಿದ್ದಾರೆ. ಪ್ರೀತಿಯ ಮಾತುಗಳನ್ನು ದಿಗಂತ್‌ ಹುಟ್ಟು ಹಬ್ಬದಂದು ಪೋಸ್ಟ್‌ ಮಾಡಿದ್ದಾರೆ. ‘ಬರಿಗಾಲಲ್ಲಿ ಮರ ಮತ್ತು ಬೆಟ್ಟ ಹತ್ತುವ, ಕ್ರೀಡಾ ಪಟುವಾಗಿದ್ದರೂ ಆಕ್ಸಿಡೆಂಟಲಿ ನಟನಾಗಿರುವ, ಬೈಕನ್ನು ಪರಮಾತ್ಮನ ಕೊಡುಗೆ ಎಂದು ಭಾವಿಸುವ, ಹಿಂದಿನ ಸೀಟನ್ನ ತೆಗೆದವ!! ಸದಾ ಶಾಂತಚಿತ್ತನಾಗಿರುವ, ಸದಾ ತಲೆಯಲ್ಲಿ ಕಾಸ್ಮಿಕ್‌ ಮಿಸ್ಟರಿ ಬಗ್ಗೆ ಯೋಚನೆ ಮಾಡುತ್ತ ಇರುವ, ಬೇರೆ ಯಾರಿಗೂ ನೋವನ್ನುಂಟು ಮಾಡಲು ಬಯಸದ ನನ್ನ ಸ್ಮೈಲಿಂಗ್‌ ಬುದ್ಧನಿಗೆ ಜನುಮ ದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂದ ಇನ್ನೊಂದು ತಾರಾ ಜೋಡಿ ಮದುವೆ ಕಾದಿದೆ ಎಂದು ತಿಳಿದು ಬಂದಿದೆ.

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top