fbpx
ಭವಿಷ್ಯ

ಏಪ್ರಿಲ್ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ಮೇಷ ರಾಶಿ ತಿಂಗಳ ಭವಿಷ್ಯ 

 

ಮೇಷ (Mesha)

 

 

 

ಹಣಕಾಸು ಮತ್ತು ವ್ಯಾಪಾರ ವಿಷಯದಲ್ಲಿ .

ಗುರುವಿನ ಸ್ಥಾನ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಶುಭವಾಗಿದ್ದು, ಇದು ಶುಭ ಸೂಚನೆಯಾಗಿದ್ದು, ತುಂಬಾ ಸಮಯದವರೆಗೆ ಲಾಭ ದೊರೆಯಲಿದೆ. ಇನ್ನೂ  ಶುಕ್ರನ ಸ್ಥಾನ ಮೇಷ ರಾಶಿಯವರಿಗೆ ಏಪ್ರಿಲ್ ಹದಿನೆಂಟು ಅಂದರೆ ಅಕ್ಷಯ ತೃತೀಯದರವರೆಗೆ ನಿಮ್ಮ ರಾಶಿಯವರಲ್ಲಿ ಒಳ್ಳೆಯ ಫಲಗಳನ್ನು ಕೊಡಲಿದ್ದಾನೆ. ಅಕ್ಷಯ ತೃತೀಯ ನಿಮಗೆ ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ಸಂತೋಷಕ್ಕೆ ಮುಖ್ಯವಾಗಿ ಕಾರಣವಾಗುತ್ತದೆ.ಆದ್ದರಿಂದ ಸರಿಯಾಗಿ ಈ ತಿಂಗಳನ್ನು ಉಪಯೋಗಿಸಿಕೊಳ್ಳಿ. ಸಣ್ಣ ಲಾಭವನ್ನು ನಿರೀಕ್ಷಿಸುವ ಜಾಗದಲ್ಲಿ ದೊಡ್ಡ ಮಟ್ಟದ ಲಾಭ ಸಿಗುತ್ತವೆ. ಏಪ್ರಿಲ್ 18 ರವರೆಗೆ ವ್ಯಾಪಾರ ದೃಷ್ಟಿಯಲ್ಲಿ ನಿಮಗೆ ತುಂಬಾ ಚೆನ್ನಾಗಿದೆ. ಆತ್ಮವಿಶ್ವಾಸ ನಿಮ್ಮಲ್ಲಿದ್ದು, ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಿ.

ಹಣಕಾಸಿನ ವಿಷಯದಲ್ಲಿ ಹೇಳುವುದಾದರೆ ಏಪ್ರಿಲ್ ಹತ್ತೊಂಬತ್ತನೇ ತಾರೀಖಿನ ನಂತರ ಬಹಳಷ್ಟು ಮೂಲಗಳಿಂದ ನಿಮಗೆ ಹಣ ಹರಿದು ಬರಲಿದೆ. ಅದೇ ರೀತಿ ಮಂಗಳ ಗ್ರಹವು ಸ್ಥಿತವಿರುವುದನ್ನು ನೋಡಿಕೊಂಡು ಹೇಳುವುದಾದರೆ, ಹಣವೂ ಸಹ ಹೆಚ್ಚಾಗಿ ಖರ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಆದಷ್ಟು ಹಣವನ್ನು ಖರ್ಚು ಮಾಡುವುದನ್ನು ತಡೆಗಟ್ಟಿ. ಅನಾವಶ್ಯಕ ಖರ್ಚನ್ನು ಮಾಡಬೇಡಿ. ಮಿತವಾಗಿ ಖರ್ಚು ಮಾಡಿ .ಇನ್ನು ವ್ಯಾಪಾರ ಹಾಗೂ ಹಣಕಾಸಿನ ವಿಷಯದ ಬಗ್ಗೆ ಯಾವುದೇ ಮೂರನೇ ವ್ಯಕ್ತಿಗೆ ಹೇಳಿಕೊಳ್ಳಬೇಡಿ . ಅತಿ ಬುದ್ಧಿವಂತಿಕೆಯಿಂದ ಮುಂದುವರಿಯುವುದು ಒಳ್ಳೆಯದು.

 

 

ಸಂಸಾರ ಜೀವನದಲ್ಲಿ

ಗುರು ಹಾಗೂ ಶುಕ್ರ ಗ್ರಹದ  ಸ್ಥಾನ ಏಪ್ರಿಲ್ ಹದಿನೆಂಟರವರೆಗೆ ತುಂಬಾ ಚೆನ್ನಾಗಿದ್ದು, ಉತ್ತಮವಾಗಿದೆ ಕೆಲಸ ಕಾರ್ಯಗಳಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹುದು. ಆತ್ಮವಿಶ್ವಾಸ ನಿಮ್ಮಲ್ಲಿ ಇರಲಿ .ಮಹಿಳೆಯರ ಮನೆಯಲ್ಲಿ ಕುಳಿತು ಹೊಸ ಕೆಲಸಗಳನ್ನು ಕಾರ್ಯಗಳನ್ನು ಆರಂಭಿಸಬಹುದು. ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕೆಲಸಗಳನ್ನು ಆರಂಭಿಸಲು ಇದು ಉತ್ತಮವಾಗಿದೆ. ನೀವು ಕಲಿತಿರುವ ವಿಷಯಗಳನ್ನು ಅಥವಾ ಹೊಸ ವಿಷಯಗಳನ್ನು ಕಲಿಯಲು ಶುಭ ಸಮಯವಾಗಿದೆ. ಇದರಿಂದ ನಿಮ್ಮ ಆದಾಯ ಹಾಗೂ ಗೌರವ ಕೂಡ ಹೆಚ್ಚಾಗುವುದು .

ಒಂದು ವೇಳೆ ಪತಿ ಹಾಗೂ ಪತ್ನಿ ಒಂದೇ ಕೆಲಸದಲ್ಲಿ ತೊಡಗಿದ್ದರೆ ಸಣ್ಣಪುಟ್ಟ ಜಗಳಗಳು ಬರಬಹುದು. ಆದ್ದರಿಂದ ತಾಳ್ಮೆ ವಹಿಸಬೇಕು. ಬುಧನ ಸ್ಥಾನವನ್ನು ನೋಡಿದಾಗ ಮಹಿಳೆಯರು ಸಂಸಾರಕ್ಕೆ ಸಂಬಂಧಪಟ್ಟಂತೆ ಮಾಡುತ್ತಿರುವ ಒಳ್ಳೆಯ ಕೆಲಸಕ್ಕೆ ಸರಿಯಾಗಿ ಮನೆಯವರಿಂದ ಒಳ್ಳೆಯ ಮಾತುಗಳು ಕೇಳಿ ಬರುವುದಿಲ್ಲ. ನಿಮ್ಮನ್ನು ನಿಂದಿಸಬಹುದು ಕಿರಿಕಿರಿಯಾಗುವಂತೆ ಮಾತನಾಡಬಹುದು . ಆದ್ದರಿಂದ ಬಹಳಷ್ಟು ಎಚ್ಚರ ವಹಿಸಿ. ತಾಳ್ಮೆ ಮುಖ್ಯವಾಗಿ ಇರಲಿ,ಕೋಪ ಮಾಡಿಕೊಳ್ಳಬೇಡಿ .

ವಿದ್ಯಾರ್ಥಿಗಳ ಜೀವನದಲ್ಲಿ.

 

ಸೂರ್ಯನ ಸ್ಥಾನ ನೋಡಿ ಹೇಳುವುದಾದರೆ ಏಪ್ರಿಲ್ ಹದಿನಾಲ್ಕರ ತನಕ  ಮಕ್ಕಳು ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕು ಏಕೆಂದರೆ ಅಷ್ಟರವರೆಗೆ ವಿದ್ಯಾರ್ಥಿಗಳಿಗೆ ಏಕಾಗ್ರತೆ ಓದುವುದರಲ್ಲಿ  ಇರುವುದಿಲ್ಲ.ವಿದ್ಯಾರ್ಥಿಗಳು ಚಟುವಟಿಕೆಯನ್ನು ಹಾಕಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರೀತಿ, ಪ್ರೇಮ ಮನರಂಜನೆಗೆ ಹಲವು ವಿಷಯಗಳಲ್ಲಿ ಬೇಡದ ಸಮಯಕ್ಕೆ ಅನಗತ್ಯವಾಗಿ ಸಮಯವನ್ನು ಕಳೆಯಲಿದ್ದೀರಿ. ಹಗಲು ಗನಸು ಕಾಣುವುದನ್ನು ಈ ಸಮಯದಲ್ಲಿ ವಿದ್ಯಾರ್ಥಿಗಳು ಬಿಟ್ಟು ಬಿಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದಕ್ಕೆ ಇದು ಉತ್ತಮ ಸಮಯವಾಗಿದೆ.ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಏಪ್ರಿಲ್ 14 ನಂತರ ಏಪ್ರಿಲ್ ಕೊನೆಯವರೆಗೆ ಸಮಯ ಉತ್ತಮವಾಗಿದೆ.ಮಂಗಳನ ದೃಷ್ಟಿ ಹಾಗೂ ರಾಹುವಿನ ದೃಷ್ಟಿ ಜಾತಕದ ಎರಡನೇ ಸ್ಥಾನದ ಮೇಲೆ  ಇರುವುದರಿಂದ , ಈ ತಿಂಗಳು ವಿದ್ಯಾಭ್ಯಾಸದ ವಿಷಯದಲ್ಲಿ ಸ್ವಲ್ಪ ಅಧಿಕ ಖರ್ಚು ಬರಬಹುದು.

ಆರೋಗ್ಯದ ವಿಷಯದಲ್ಲಿ.

ಆರೋಗ್ಯದ ವಿಷಯದಲ್ಲಿ ಮೂಳೆಗೆ ಸಂಬಂಧಪಟ್ಟ ರೋಗಗಳು ಮತ್ತು ಮಾನಸಿಕ ಒತ್ತಡ ಯೋಚನೆಗಳು ಹೆಚ್ಚಾಗಲಿದೆ. ಆದ್ದರಿಂದ ಸ್ವಲ್ಪ ಎಚ್ಚರ ವಹಿಸಿ .ಏಕೆಂದರೆ ನಿಮ್ಮವರೇ ನಿಮಗೆ ವೈರಿಯಾಗಬಹುದು. ಆದ್ದರಿಂದ ಆದಷ್ಟು ಎಚ್ಚರ ವಹಿಸಿ ಯಾರನ್ನೂ ಅತಿಯಾಗಿ ನಂಬಬೇಡಿ.

ಇನ್ನು ಮನಸ್ಸು ಕೆಡುವ ದಿನಗಳನ್ನು ನೋಡುವುದಾದರೆ  14,15,5,4,22,23 ಈ ದಿನಗಳಲ್ಲಿ ವಿಶೇಷವಾಗಿ ಸಮಾಧಾನದಿಂದ ವರ್ತಿಸಬೇಕು. ತಾಳ್ಮೆ ಇರಲಿ. ಮನಸ್ಸಿಗೆ ಬೇಜಾರಾಗುವ ಸಾಧ್ಯತೆಗಳು ಹೆಚ್ಚಾಗಿ ಇವೆ.

ಕೆಲಸದ ಸ್ಥಳಗಳಲ್ಲಿ ಕಚೇರಿಗಳಲ್ಲಿ ವಿನಾಕಾರಣ ಯಾರ ಜತೆಗೂ ಮಾತನಾಡಲು ಹೋಗಬೇಡಿ ಅನಗತ್ಯ ವಿಷಯ ವಿಷಯಗಳಿಗೆ ಮೂಗು ತೂರಿಸಿಕೊಂಡು ಮಾತನಾಡಬೇಡಿ. ಮಾಡದೇ ಇರುವ ತಪ್ಪುಗಳಲ್ಲಿ ಸಿಲುಕಿ ಹಾಕಿಕೊಳ್ಳುವ ಸಂಭವ ಇದೆ. ಇನ್ನು ಮನೆಯಲ್ಲಿ ಸುಮ್ಮನೆ ಯೋಚನೆ ಮಾಡುತ್ತಾ ಕುಳಿತುಕೊಳ್ಳಬೇಡಿ. ನಿಮ್ಮ ಮಾತು ಆದಷ್ಟು ಹಿಡಿತದಲ್ಲಿ ಇರಲಿ. ಯಾವುದೇ ಮಾತನ್ನು ಮಾತನಾಡುವ ಮುನ್ನ ತುಂಬಾ ಯೋಚನೆ ಮಾಡಿ ಮಾತನಾಡಿ. ನಿಮ್ಮ ಮಾತುಗಳಿಂದಲೇ ನಿಮ್ಮ ಕೆಲಸಗಳು ಕೆಡಬಹುದು. ಆದ್ದರಿಂದ ಎಚ್ಚರವಾಗಿರಿ. ಕೆಲಸ ಬದಲಾಯಿಸುವುದಕ್ಕೆ ಇದು ಉತ್ತಮ ಸಮಯವಲ್ಲ . ಬ್ಯಾಂಕಿಂಗ್ ಮತ್ತು ಅಕೌಂಟಿಂಗ್, ಆಡಿಟಿಂಗ್ ಕೆಲಸ ಮಾಡುತ್ತಿರುವವರು ಕೆಲಸದ ವಿಷಯಗಳಲ್ಲಿ ಶುಭ ಸಮಾಚಾರಗಳನ್ನು ಕೇಳಲಿದ್ದೀರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top