fbpx
ಭವಿಷ್ಯ

ಏಪ್ರಿಲ್ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ವೃಷಭ ರಾಶಿ ತಿಂಗಳ ಭವಿಷ್ಯ 

 

ವ್ಯಾಪಾರ ಹಾಗೂ ಹಣಕಾಸು.

 

ಹೊಸ ಕೆಲಸ ಪ್ರಾರಂಭಿಸಲು ಇದು ಒಳ್ಳೆಯ ಕಾಲ ಎಪ್ರಿಲ್ ಹತ್ತೊಂಬತ್ತನೇ ತಾರೀಖಿನವರೆಗೆ ಇರುವ ವ್ಯಾಪಾರದಲ್ಲಿ ಸ್ವಲ್ಪ ನಿಧಾನ ಅಥವಾ ಅರೆ ತಡೆಗಳನ್ನು ಎದುರಿಸಬಹುದು .ಏಪ್ರಿಲ್ ಹತ್ತೊಂಬತ್ತರ ನಂತರ ವ್ಯಾಪಾರ ಹಾಗೂ ಹಣಕಾಸಿನ ವಿಷಯಗಳಲ್ಲಿ ನಿಮಗೆ ಒಳ್ಳೆಯ ಸಮಯ ಬರಲಿದೆ. ತುಂಬಾ ಚೆನ್ನಾಗಿದೆ . ಆದ್ದರಿಂದ ಸರಿಯಾಗಿ ಬಳಸಿಕೊಳ್ಳಿ. ಹೊಸ ವ್ಯಾಪಾರ ಹಾಗೂ ವ್ಯವಹಾರಗಳಿಗೆ ಇದು ಶುಭ ಕಾಲವಾಗಿದೆ. ಆದರೆ ಎಚ್ಚರ ವಹಿಸಬೇಕು. ಕೆಲಸದ ವಿಷಯದಲ್ಲಿ ಬಹಳ ಶ್ರದ್ಧೆಯಿಂದ ಬಲದಿಂದ ಕೆಲಸ ಮಾಡಿ.

ಮುಖ್ಯವಾಗಿ ಕಾಗದ ಪತ್ರಗಳ ವ್ಯವಹಾರದಲ್ಲಿ ಎಚ್ಚರ ವಹಿಸಿ. ಬೇಜವಾಬ್ದಾರಿತನ ಬೇಡ. ನಿಮಗೆ ಆ ಕೆಲಸ ಗೊತ್ತಿಲ್ಲದೇ ಹೋದರೆ ಬೇರೆಯವರ ಬಳಿ ಕೇಳಿ ತಿಳಿದು ಮಾಡಿ .ಹಣಕಾಸಿನ ವಿಷಯಗಳಲ್ಲಿ ನೀವು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಯಾವ ಕೆಲಸ ನಿಮಗೆ ಇಷ್ಟವಿಲ್ಲವೋ ಅಂತಹ ಕೆಲಸಗಳನ್ನು ನೀವು ಮಾಡಲೇಬೇಡಿ. ಬೇರೆಯವರು ಹೇಳಿದರು ಎಂದು ಹೇಳಿ ಮಾಡಲು ಹೋದರೆ ನಿಮಗೆ ನಷ್ಟವಾಗುವುದು. ನಿಮ್ಮ ಸ್ವಂತ ಬುದ್ಧಿವಂತಿಕೆಯನ್ನು ಬಳಸಿ ಮುಂದುವರಿಯಿರಿ.ಕೆಲಸ ವಿಳಂಬವಾಗಬಹುದು ಆದರೆ ತಾಳ್ಮೆಯನ್ನು   ಕಳೆದುಕೊಳ್ಳಬೇಡಿ .

ಸಂಸಾರ .

 

ಸಂಸಾರದ ವಿಷಯದಲ್ಲಿ ಏಪ್ರಿಲ್ ಹತ್ತೊಂಬತ್ತನೇ ತಾರೀಖಿನವರೆಗೆ ನೀವು ಆಡುವ  ಮಾತುಗಳ ಮೇಲೆ ನಿರ್ಧರಿಸಲಾಗುತ್ತದೆ.. ಯಾವುದೇ ಅನಗತ್ಯ ಮಾತುಗಳನ್ನು ಆಡಬೇಡಿ. ಇದರಿಂದ ನಿಮ್ಮ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಸುಮ್ಮನೆ ಜಗಳ ಮಾಡಬೇಡಿ.ಏಪ್ರಿಲ್ ಹತ್ತೊಂಬತ್ತರ ನಂತರ ಸಂಸಾರದ ವಿಷಯದಲ್ಲಿ ತುಂಬಾ ಉತ್ತಮ ಸಹಾಯವಾಗಿದೆ . ಮಕ್ಕಳ ವಿವಾಹ ಮಾಡುವುದಕ್ಕೂ ಕೂಡ 19 ನೇ ತಾರೀಖಿನ ನಂತರ ತುಂಬಾ ಸಮಯ ಉತ್ತಮ ಸಮಯವಾಗಿದೆ .

ವಿದ್ಯಾರ್ಥಿಗಳಿಗೆ .

ಉನ್ನತ ವಿದ್ಯಾಭ್ಯಾಸಕ್ಕಾಗಿ ಈ ತಿಂಗಳು ತುಂಬಾ ಉತ್ತಮ ಸಮಯವಾಗಿದೆ.ಬ್ಯಾಂಕಿಂಗ್ ಹಾಗೂ ಹಣಕಾಸು ವಿಷಯಕ್ಕೆ ಸಂಬಂಧ ಪಟ್ಟ ಕೆಲಸ ಮಾಡುತ್ತಿರುವವರು ಸ್ವಲ್ಪ  ಕಿರಿಕಿರಿ ಮತ್ತು ಅಡಚಣೆಗಳನ್ನು ಎದುರಿಸಬೇಕಾಗಬಹುದು . ಆದ್ದರಿಂದ ಎಚ್ಚರದಿಂದಿರಿ. ಪ್ರೀತಿ ,ಪ್ರೇಮ, ಮನರಂಜನೆ ಎಂದು  ಒಂದಿಷ್ಟು ಅಡೆತಡೆಗಳು ನಿಮ್ಮನ್ನು ಕಾಡಬಹುದು. ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿ ಹಾಕಿಸಬಹುದು. ಯಾವುದೇ ಪರೀಕ್ಷೆಗೆ ತಯಾರಿ ಮಾಡಲು ಇದು ಉತ್ತಮ ಸಮಯವಾಗಿದೆ. ಪ್ರಯತ್ನಿಸಿ ಸರಿಯಾಗಿ ಸಮಯವನ್ನು ಉಪಯೋಗಿಸಿಕೊಳ್ಳಿ. ವಿನಾ ಕಾರಣ ಸಮಯವನ್ನು ವ್ಯರ್ಥ ಮಾಡಬೇಡಿ.

 

 

ಏಪ್ರಿಲ್ ತಿಂಗಳಿನಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಏಪ್ರಿಲ್ ಹತ್ತೊಂಬತ್ತನೇ ತಾರೀಖಿನವರೆಗೆ ಚೆನ್ನಾಗಿದೆ ನಂತರ ಸಕ್ಕರೆ ಕಾಯಿಲೆ, ಹೊಟ್ಟೆಗೆ ಸಂಬಂಧಪಟ್ಟಂತೆ, ಲಿವರ್ ಗೆ ಸಂಬಂಧಪಟ್ಟಂತೆ ಕಾಯಿಲೆಗಳನ್ನು  ಎದುರಿಸುತ್ತಿರುವವರು ಸ್ವಲ್ಪ ಎಚ್ಚರದಿಂದ ಇರುವುದು ಉತ್ತಮ.ಆದರೆ ತೊಂದರೆ ಕಂಡು ಬಂದಲ್ಲಿ ತುರ್ತಾಗಿ ವೈದ್ಯರನ್ನು ಕಾಣಬೇಕು. ಮಾನಸಿಕ ಅಶಾಂತಿ ಇರಬಹುದು . ಯೋಚನೆಯನ್ನು ಬಿಟ್ಟು ನಿಮ್ಮ ಕೆಲಸ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇನ್ನೂ ಸಂಚಾರಕ್ಕೆ ಸಂಬಂಧಪಟ್ಟಂತೆ ತಾಳ್ಮೆ ಹಾಗೂ ಜಾಗ್ರತೆ ಇರಲಿ ಎಚ್ಚರದಿಂದ ವಾಹನವನ್ನು ಚಲಾಯಿಸಿ .

ಎಚ್ಚರಿಕೆಯಿಂದ ಇರಬೇಕಾದ ದಿನಗಳು.

ಮಾನಸಿಕ ಶಾಂತಿ ಕೆಡಬಹುದು. ದಿನಾಂಕ 26,25,17,16,7,8.ಈ ದಿನಾಂಕ ಶಾಂತಿ ಸಹನೆಯಿಂದ ವರ್ತಿಸುವುದು ಉತ್ತಮ. ಕೆಲಸಕ್ಕೆ ಸಂಬಂಧಪಟ್ಟಂತೆ ನೋಡುವುದಾದರೆ ಏಪ್ರಿಲ್ ತಿಂಗಳಿನಲ್ಲಿ ಕೆಲಸ ಹುಡುಕುತ್ತಿರುವವರು ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೆಲಸ ಹುಡುಕುತ್ತಿರುವವರಿಗೆ ಇದು ಶುಭ ಕಾಲವಾಗಿದೆ. ಮುಂದೆ ಉನ್ನತ ಶಿಕ್ಷಣಕ್ಕಾಗಿ ಕೂಡ ಇದು ಶುಭ ಕಾಲವಾಗಿದೆ . ನಿಮ್ಮ ಶ್ರಮಕ್ಕೆ ತಕ್ಕ ಫಲ ಈ ತಿಂಗಳು ನಿಮಗೆ ದೊರೆಯಲಿದೆ. ಪ್ರಮೋಷನ್ ಹಾಗೂ ಸಂಬಳ ಹೆಚ್ಚು ಮಾಡುವ ಸಂಭವ ಇದೆ. ನಿಮ್ಮಲ್ಲಿ ಕೆಲಸದ ವಿಷಯದಲ್ಲಿ ಸಂತೋಷ ಮನೆ ಮಾಡಲಿದೆ ಸರಿಯಾಗಿ ಯೋಜನೆಯನ್ನು ರೂಪಿಸಿಕೊಳ್ಳಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top