fbpx
ಸಮಾಚಾರ

‘ಮೆಜೆಸ್ಟಿಕ್‌ ನಮ್ದಲ್ಲ ನಿಮ್ದು’- ಕರ್ನಾಟಕದ ಖಡಕ್ ಅಧಿಕಾರಿ ರವಿ ಚನ್ನಣ್ಣನವರ್

ಈ ಹಿಂದೆ ಮೈಸೂರು ಹಾಗು ಶಿವಮೊಗ್ಗ ಜಿಲ್ಲೆಯಲ್ಲಿ ಎಸ್.ಪಿ ಆಗಿ ಕಾರ್ಯ ನಿರ್ವಹಣೆ ಮಾಡಿರುವ ರವಿ ಚನ್ನಣ್ಣನವರ್ ಅವರು ತಮ್ಮ ಕರ್ತವ್ಯ ನಿಷ್ಠೆಯಿಂದ ಅಪಾರ ಜನರ ಮನಸ್ಸು ಗೆದ್ದಿದ್ದಾರೆ. ಈಗ ಅವರು ಬೆಂಗಳೂರಿಗೆ ವರ್ಗಾವಣೆ ಆಗಿದ್ದಾರೆ. ಇಲ್ಲಿಯೂ ಕೂಡ ಜನರ ಮನಸ್ಸು ಗೆಲ್ಲುತ್ತಿದ್ದಾರೆ. ಮೆಜೆಸ್ಟಿಕ್ ನಲ್ಲಿರುವ ಬೀದಿ ವ್ಯಾಪಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಸಭೆ ಮಾಡುವ ಮಾಡಿದ್ದಾರೆ ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಸಭೆಯಲ್ಲಿ ಮೆಜೆಸ್ಟಿಕ್ ನಲ್ಲಿರುವ ಭಯದ ವಾತಾವರಣವನ್ನು ಹೋಗಲಾಡಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಬೆಂಗಳೂರಿಗೆ ಬರುವ ಜನರಿಗೆ ಮೆಜೆಸ್ಟಿಕ್ ನಲ್ಲಿ ನಿಮ್ಮಿಂದಲೇ ಹೊರತು, ನಮ್ಮಿಂದ ಅಲ್ಲ. ಈ ಮೆಜೆಸ್ಟಿಕ್ ನಮ್ಮದಲ್ಲ ಎಂದು ಬೀದಿ ವ್ಯಾಪಾರಿಗಳಿಗೆ ಹೇಳಿದ್ದಾರೆ.

 

 

ಈ ವರೆಗೂ ಪೊಲೀಸರ ಕಡೆಯಿಂದ ಯಾವುದಾದರು ತಪ್ಪಾಗಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ. ಮುಂದೆ ತರಹದ ತಪ್ಪುಗಳು ಆಗುವುದಿಲ್ಲ ಎಂದು ಬೀದಿ ವ್ಯಾಪಾರಿಗಳಲ್ಲಿ ರವಿ ಚನ್ನಣ್ಣನವರ್ ಮನವಿ ಮಾಡಿಕೊಂಡಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪಶ್ವಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ಬೀದಿ ಬದಿ ವ್ಯಾಪಾರಿಗಳ ಸಹಕಾರ ಬಯಸಿದ್ದಾರೆ.

 

 

ಬೀದಿ ವ್ಯಾಪಾರಿಗಳೊಂದಿಗೆ ಪ್ರೀತಿಯಿಂದ ಮಾತನಾಡಿರುವ ರವಿ ಚನ್ನಣ್ಣನವರ್ ಮಕ್ಕಳ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಬೀದಿ ವ್ಯಾಪಾರ ಮಾಡುವುದು ನಿಮಗೆ ಕೊನೆಯದಾಗಲಿ. ಅದು ನಿಮ್ಮ ಮಕ್ಕಳಿಗೂ ಮುಂದುವರಿಯಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಹೇಳಿದ್ದಾರೆ.

ಈ ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top