ವಿಶೇಷ

ಗಂಡಾಗಿ ಹುಟ್ಟಿದ್ದ ಮಗು ಹೆಣ್ಣಾಗಿ ಲಿಂಗ ಬದಲಾದಾಗ ಆ ತಾಯಿ ಏನು ಮಾಡಿದಳು ಎಂದು ಕೇಳಿದರೆ ಆಶ್ಚರ್ಯ ಪಡ್ತೀರಾ

ಪ್ರಕೃತಿಯಲ್ಲಿ ಮುಖ್ಯವಾಗಿ ಗಂಡು ಹಾಗೂ ಹೆಣ್ಣು ಎಂಬ ಮೂಲ ಪ್ರಬೇಧಗಳಿವೆ ಆದರೆ ಕೆಲವೊಂದು ಬಾರಿ ದೇವರು ತೃತೀಯ ಲಿಂಗಿಗಳನ್ನು ಸೃಷ್ಟಿ ಮಾಡುತ್ತಾನೆ ಈಗಿನ ಸಮಾಜದಲ್ಲಿ ಗಂಡು ಹೆಣ್ಣನ್ನು ಗೌರವಿಸುವ ಹಾಗೆ ತೃತೀಯ ಲಿಂಗಿಗಳನ್ನು ಗೌರವಿಸಬೇಕು ಅವರ ಅಭಿಪ್ರಾಯ ಹಾಗೂ ಭಾವನೆಗಳಿಗೆ ಎಲ್ಲರೂ ಬೆಲೆ ಕೊಡಬೇಕು ಆದರೆ ವಾಸ್ತವದ ಸ್ಥಿತಿ ಬೇರೆಯೇ ಇದೆ ಹೀಗಿರುವಾಗ ಈ ರೀತಿಯ ಮಾಯದ ಆಟ ದೇವರು ಸೃಷ್ಟಿ ಮಾಡಿದಾಗ ಸಮಾಜವನ್ನು ಎದುರಿಸುವುದು ಬಹುಮುಖ್ಯ ಕೆಲಸವಾಗುತ್ತದೆ .

 

 

ಇಲ್ಲೊಂದು ಕತೆ ಈ ರೀತಿ ಲಿಂಗ ಬದಲಾವಣೆ ಮಾಡಿಕೊಳ್ಳಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಅದನ್ನು ಹೊರಗಡೆ ಹೇಳಲಾಗದೆ ಸಂಕಟಪಡುತ್ತಿರುವ ಜನರಿಗೆ ಸಹಾಯವಾಗುತ್ತದೆ .

ಕೋರೆ ಮೈಸೊನ್ ಕೇವಲ ಹನ್ನೊಂದು ವರ್ಷದ ಪುಟ್ಟ ಬಾಲಕ ಆತನಿಗೆ ತಾನು ಹೆಣ್ಣಾಗಿ ಇರಬೇಕು ಎಂದು ಬಯಸಿದ್ದ ಹೆಣ್ಣಿನ ರೀತಿಯ ಬಟ್ಟೆ ಹಾಕಿಕೊಳ್ಳಬೇಕು ಹಾಗೂ ಹೆಣ್ಣಿನ ಹಾವಭಾವಗಳನ್ನು ಉಳಿಸಿಕೊಳ್ಳಬೇಕು ಎಂದು ಆತ ಬಯಸಿದ್ದ ಆದರೆ ತಾನು ಹೆಣ್ಣಾಗಿ ಬದಲಾದರೆ ಈ ಸಮಾಜ ಆತನನ್ನು ಹೇಗೆ ನೋಡುವುದು ಎಂದು ಆತನಿಗೆ ಬಹಳ ಭಯ ಕಾಡಿತ್ತು ನನ್ನ ಕುಟುಂಬ ಈ ಬಯಕೆಯನ್ನು ಕೇಳಿದರೆ ಏನು ಮಾಡುವುದು ಮುಂದೇನು ನನ್ನ ಗತಿ ಎಂದು ಬಹಳ ಚಿಂತೆ ಮಾಡುತ್ತಿದ್ದ.

 

 

ಈ ವಿಷಯವನ್ನು ಮೂರು ತಿಂಗಳ ನಂತರ ತನ್ನ ತಾಯಿ ಎರಿಕಾ ಬಳಿ ಹೇಳಿಕೊಂಡಿದ್ದ ಮೊದಲಿಗೆ ಎರಿಕಾಗೆ ಆಶ್ಚರ್ಯವಾದರೂ ಸಹ ತನ್ನ ಮಗನ ಈ ಬಯಕೆಯನ್ನು ಈಡೇರಿಸಬೇಕೆಂದು ಆಕೆ ಅಂದುಕೊಂಡಳು ಹಾಗೆಯೇ ಮಗನ ಲಿಂಗ ಬದಲಾವಣೆಗೆ ಆಕೆ ಸಹಾಯ ಮಾಡಿದಳು ಮೂರು ವರ್ಷಗಳ ಬಳಿಕ ಕೋರೆ ಹುಡುಗಿಯಾಗಿ ಮಾರ್ಪಾಡಾಗಿದ್ದ  .

 

 

ಇದಾದ ನಾಲ್ಕು ವರ್ಷಗಳ ಬಳಿಕ ಆಶ್ಚರ್ಯಕರ ಸಂಗತಿಯೊಂದು ಕಾದಿತ್ತು ಕೋರೆ ತಾಯಿ ಎರಿಕಾ ಕೂಡ ತಾನು ಹೆಣ್ಣಾಗಿ ಇರಲು ಇಚ್ಛಿಸಿರಲಿಲ್ಲ ಎಂಬ ಮಾತನ್ನು ಹೊರ ಹಾಕಿದ್ದಳು ಆಕೆಗೆ ಗರ್ಭ ಧರಿಸುವುದೇ ಒಂದು ಹಿಂಸೆ ಆಗಿತ್ತಂತೆ ಆಕೆ ತಾನು ಪುರುಷನಾಗಿ ಇರಲು ಬಯಸಿದ್ದೆ ಎಂದು ಹೇಳಿದಳು .

 

 

ಆ ನಂತರ ತಾಯಿ ಎರಿಕಾ ಕೂಡ ತನ್ನ ಲಿಂಗ ಬದಲಾವಣೆ ಮಾಡಿಕೊಂಡು ಎರಿಕ್ ಎಂದು ಮರುನಾಮಕರಣ ಮಾಡಿಕೊಂಡು ಈಗ ಎರಿಕ್ ತನ್ನ ಮಗಳ ಭವಿಷ್ಯದ ಬಗ್ಗೆ ಯೋಚಿಸುತ್ತಾ ಆಕೆಗಾಗಿ ದುಡಿಯುತ್ತಾ ನೆಮ್ಮದಿಯಾಗಿ ಜೀವಿಸುತ್ತಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top