fbpx
ಮನೋರಂಜನೆ

ಶೂಟಿಂಗ್ ಸ್ಪಾಟಲ್ಲಿ ವ್ಯಾನ್‌ನೊಳಗೆ ಸನ್ನಿ ಲಿಯೋನ್ ಏನ್ಮಾಡ್ತಾಳೆ ಗೊತ್ತಾ?

ವ್ಯಾನ್‌ನೊಳಗೆ ಸನ್ನಿ ಲಿಯೋನ್ ಏನ್ಮಾಡ್ತಾಳೆ ಗೊತ್ತಾ?

 

 

ನೀಲಿಚಿತ್ರಗಳ ಮೂಲಕವೇ ಸದ್ದು ಮಾಡಿ, ಆ ಮೂಲಕವೇ ಪರಿಚಯವಾದ ಸನ್ನಿ ಲಿಯೋನ್ ಈ ಬಾರಿ ಬಾಲಿವುಡ್ ಚಿತ್ರಗಳಲ್ಲಿನ ನಟನೆಯನ್ನೇ ಪ್ರಧಾನವಾಗಿ ತೆಗೆದುಕೊಂಡಿದ್ದಾಳೆ. ಬಹುಶಃ ಬಾಲಿವುಡ್‌ನ ಯಾವ ನಟಿಯೂ ಮಾಡಿಕೊಳ್ಳದ ಸೌಕರ್ಯಗಳನ್ನು ಇದಕ್ಕಾಗಿ ಸನ್ನಿ ಮಾಡಿಕೊಂಡಿದ್ದಾಳೆ!

ಪ್ರಸಿದ್ಧ ನಟಿಯರು ಶೂಟಿಂಗ್ ಸಂದರ್ಭದಲ್ಲಿ ಡ್ರೆಸ್ ಚೇಂಜ್ ಮಾಡೋದಕ್ಕೆ, ರೆಸ್ಟ್ ಪಡೆದುಕೊಳ್ಳುವುದಕ್ಕೆ ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್‌ಗಳನ್ನು ಬಳಸುತ್ತಾರೆ. ಆದರೆ ಸನ್ನಿ ಲಿಯೋನ್ ಮಾತ್ರ ಈ ವಿಚಾರದಲ್ಲಿ ಪಕ್ಕಾ ಡಿಫರೆಂಟು. ಈಕೆ ಯಾವುದೇ ಟೀವಿ ಶೋಗೆ ಹೋದರೂ, ಶೂಟಿಂಗೆ ಹೋದರೂ ಕೂಡಾ ವ್ಯಾನಿಟಿ ವ್ಯಾನ್ ಅನ್ನು ರಿಹರ್ಸಲ್ ಸ್ಟುಡಿಯೋದಂತೆ ಬಳಸಿಕೊಳ್ಳುತ್ತಾಳಂತೆ!

 

 

ಇದೀಗ ಸನ್ನಿ ಲಿಯೋನ್ ತಾನೇ ಒಂದು ಸುಸಜ್ಜಿತವಾದ ವ್ಯಾನಿಟಿ ವ್ಯಾನನ್ನು ಕೊಂಡುಕೊಂಡಿದ್ದಾಳೆ. ಅದರಲ್ಲಿ ಒಂದು ಮಿನಿ ಸ್ಟುಡಿಯೋವನ್ನೇ ಸೃಷ್ಟಿಸಿಕೊಂಡಿರೋ ಸನ್ನಿ ಅದನ್ನು ನಟನೆಯ ಕಲಿಕೆಗಾಗಿಯೇ ಮೀಸಲಿಟ್ಟಿದ್ದಾಳಂತೆ. ಆಕೆ ಇದನ್ನು ಪ್ರಮುಖವಾಗಿ ಬಳಸಿಕೊಳ್ಳುತ್ತಿರೋದು ಸಿನಿಮಾಗಳಿಗಾಗಿ. ಸನ್ನಿ ಟೀವಿ ಶೋಗಳಲ್ಲಿ ಬ್ಯುಸಿಯಾಗಿರೋವಾಗಲೂ ಸಿನಿಮಾ ಕೋರಿಯೋಗ್ರಾಫರ್‌ಗಳನ್ನು ಜೊತೇಲಿಟ್ಟುಕೊಂಡು ಬಿಡುವಿನ ವೇಳೆಯಲ್ಲಿ ಪ್ರಾಕ್ಟೀಸ್ ಮಾಡ್ತಾಳಂತೆ.

 

 

ಈ ಬಾರಿ ಬಾಲಿವುಡ್‌ನ ಎಲ್ಲಾ ನಟಿಯರೂ ಹೊಸಾ ಹೊಸಾ ಚಿತ್ರಗಳನ್ನು ಒಪ್ಪಿಕೊಳ್ಳೋ ಮೂಲಕ ಹವಾ ಸೃಷ್ಟಿಸುವ ಪ್ರತಿಜ್ಞೆಯೊಂದಿಗೇ ಹೊಸಾ ವರ್ಷವನ್ನು ಎದುರುಗೊಂಡಿದ್ದಾರೆ. ಆದರೆ ಸನ್ನಿ ತನ್ನ ಪಾಡಿಗೆ ತಾನು ವೃತ್ತಿಪರ ನಟಿಯಾಗಿ ಮುಂದುವರೆಯೋ ಬಯಕೆಯಿಂದ ಅಣಿಗೊಳ್ಳುತ್ತಿದ್ದಾಳೆ. ಈಗಾಗಲೇ ನೀಲಿಚಿತ್ರಗಳ ಇಮೇಜಿನಿಂದ ಆಚೆ ಬಂದು ನಟಿಯಾಗಿ ಗುರುತಿಸಿಕೊಳ್ಳುವ ಹಾದಿಯಲ್ಲಿರೋ ಸನ್ನಿ ಈ ಬಾರಿ ಅದರಲ್ಲಿ ಸಂಪೂರ್ಣವಾಗಿ ಯಶ ಕಾಣುವ ಆಸೆ ಹೊಂದಿದ್ದಾಳಂತೆ. ಕೇಲವ ಬಾಲಿವುಡ್ ಮಾತ್ರವಲ್ಲದೆ ತೆಲುಗು, ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿಯೂ ಬಹು ಬೇಡಿಕೆ ಇದ್ದರೂ ಬಲು ಎಚ್ಚರಿಕೆಯಿಂದಲೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರೋ ಸನ್ನಿಯ ಆಸೆ ಕೈಗೂಡುವ ಎಲ್ಲ ಲಕ್ಷಣಗಳೂ ಇವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top