fbpx
ವಿಶೇಷ

ಕೇರಳದಲ್ಲಿ ಹೆಂಗಸರ ಎದೆಭಾಗಕ್ಕೆ ಬಟ್ಟೆ ಹಾಕೋಬೇಕಿದ್ರೆ ಟ್ಯಾಕ್ಸ್ ಕಟ್ಟಬೇಕಿತ್ತು , ಇದರಿಂದ ಬೇಸತ್ತಿದ್ದ ಆ ಹೆಂಗಸು ಏನ್ ಮಾಡಿದ್ಲು ಕೇಳಿ ಕಣ್ಣೀರು ಬರುತ್ತೆ

18 ಹಾಗೂ 19ನೇ ಶತಮಾನದ ಮಧ್ಯ ಕಾಲದಲ್ಲಿ ಕೇರಳವು ಅನೇಕ ವಿಧವಾದ ತೆರಿಗೆಗಳನ್ನು ತನ್ನ ಪ್ರಜೆಗಳ ಮೇಲೆ ಹೇರಿತ್ತು ಅದರಲ್ಲಿ ಬಹುಮುಖ್ಯವಾದದ್ದು ಮೂಲಕರ ಅಥವಾ ವಕ್ಷ ಸ್ಥಳದ ಸುಂಕ , ಕೇರಳದ ಕೆಲವು ಜನಾಂಗದ ಮಹಿಳೆಯರು ತಮ್ಮ ಮೇಲು ಹೊದಿಕೆಯನ್ನು ಹಾಕಿಕೊಳ್ಳಬೇಕಾದರೆ ಈ ಸುಂಕವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕಿತ್ತು .

 

 

ಹದಿನೆಂಟನೇ ಶತಮಾನದಲ್ಲಿ ಕೇರಳದ ಕೆಳ ವರ್ಗದ ಮಹಿಳೆ ಹಾಗೂ ಪುರುಷರು ಅದರಲ್ಲೂ ನಾಡಾರ್ ಹಾಗೂ ಎಜ್ಹವ ಪಂಗಡಗಳ ಜನರುತಮ್ಮ ಎದೆಯ ಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು ಎಂದರೆ ಅವರಿಗೆ ಸುಂಕ ವಿಧಿಸಲಾಗುತ್ತಿತ್ತು ಆಗಿನ ಕಾಲದಲ್ಲಿ ಬಟ್ಟೆ ಎಂಬುದು ಬಹುಮುಖ್ಯವಾದ ವಸ್ತುಗಳಲ್ಲಿ ಒಂದಾಗಿದ್ದು ಕೇವಲ ಮೇಲ್ವರ್ಗದ ಜನರು ಮಾತ್ರ ಬಟ್ಟೆಯನ್ನು ಹಾಕಿಕೊಳ್ಳಬೇಕು ಇದು ವರ್ಗ ಭೇದಗಳನ್ನು ಮಾಡುವುದಲ್ಲದೆ ಬಟ್ಟೆ ಎಂಬುದು ಕೇವಲ ಮುಂದುವರಿದ ಜನಗಳು ಮಾತ್ರ ಹಾಕಿಕೊಳ್ಳುವುದು ಎಂಬುದನ್ನು ಒತ್ತಿ ಒತ್ತಿ ಸಾರುತ್ತಲೇ ಇತ್ತು

ಮೂಲ ಕರ ಜೊತೆಗೆ ಇನ್ನೂ 110 ಹಲವು ವಿಧವಾದ ಸುಂಕಗಳನ್ನು ಕೆಳ ವರ್ಗದ ಜನರ ಮೇಲೆ ಅಲ್ಲಿನ ಸರ್ಕಾರ ಹೇರಿತ್ತು ಇದರಿಂದ ಬಹಳವಾಗಿ ನಲುಗಿ ಹೋಗಿದ್ದರು ಅಲ್ಲಿನ ಕೆಳವರ್ಗದ ಜನರು , ಮೇಲ್ವರ್ಗದ ಬ್ರಾಹ್ಮಣರು ಹಾಗೂ ನಾಯರ್ ಗಳಲ್ಲಿ ಮಾತ್ರ ಈ ಪದ್ಧತಿ ಇರಲಿಲ್ಲ ಆದರೆ ದೇವಸ್ಥಾನಗಳಿಗೆ ನಾಯರ್ ಗಳು ಹೋಗುವಾಗ ಅವರು ಸಹ ಮೇಲ್ಹೊದಿಕೆ ಯನ್ನು ತೆಗೆದು ಒಳ ಹೋಗಬೇಕಿತ್ತು .

 

 

ಈ ಸಮಯದಲ್ಲಿ ರೋಮನ್ ಕ್ಯಾಥೊಲಿಕ್ ಹಾಗೂ ಸಿರಿಯನ್ ಕ್ಯಾಥೊಲಿಕ್ ಪಂಗಡಗಳು ಸುಲಭವಾಗಿ ಕೇರಳವನ್ನು ಪ್ರವೇಶ ಮಾಡಿ ಕ್ರಿಶ್ಚಿಯನ್ ಮತಾಂತರ ಬಹಳ ಹೆಚ್ಚಾಗಿ ಹೋಗಿತ್ತು ಆಗಲೇ ಬಹಳ ಅಸಮಾಧಾನವನ್ನು ಹೊಂದಿದ್ದ ಹಿಂದುಳಿದ ವರ್ಗದವರು ಕ್ರಿಶ್ಚಿಯನ್ ಧರ್ಮಕ್ಕೆ ಸುಲಭವಾಗಿ ಮತಾಂತರಗೊಂಡರು ಆಗಿನ ಕಾಲದಲ್ಲಿ ಕ್ರಿಶ್ಚಿಯನ್ ಮಹಿಳೆಯರು ಮೇಲ ಹೊದಿಕೆಯಾಗಿ ಕುಪ್ಪಸವನ್ನು ಧರಿಸುತ್ತಿದ್ದರು ಈ ಕುಪ್ಪಸಗಳು ಮೇಲ್ವರ್ಗದ ನಾಯರ್ ಮಹಿಳೆಯರಿಗಿಂತ ಕೊಂಚ ಭಿನ್ನವಾಗಿತ್ತು

ಹೀಗೆ ವರ್ಗ ಭೇದದಿಂದ ಧರ್ಮ ಭೇದವೂ ಮುಂದೆ ಮುಂದುವರಿದು ಎರಡು ಧರ್ಮಗಳ ಮಧ್ಯೆ ಆಗಾಗ ಅಸಮಾಧಾನ ಭುಗಿಲೇಳುತ್ತಿತ್ತು ದಕ್ಷಿಣ ಕೇರಳದಲ್ಲಿ .

 

ಹೀಗೆ ಮೂಲ ಕರದ ಪ್ರತಿಭಟನೆಯ ಭಾಗವಾಗಿ ಒಂದು ಮುಖ್ಯವಾದ ಘಟನೆ ನಡೆದಿತ್ತು

 

 

ತಿರುವನಂತಪುರ ರಾಜರು ಮಹಿಳೆಯರ ಮೇಲೆ ವಿಧಿಸಿದ್ದ ಸುಂಕವನ್ನು ಅನೇಕ ಹಿಂದುಳಿದ ವರ್ಗದವರು ವಿರೋಧಿಸಿದ್ದರು ಈ ಸಮಯದಲ್ಲಿ ತಿರುವನಂತಪುರ ರಾಜರು ಹೊರಡಿಸಿದ್ದ ಆದೇಶವನ್ನು ಒಬ್ಬ ಮಹಿಳೆ ತನ್ನದೇ ಶೈಲಿಯಲ್ಲಿ ವಿರೋಧ ಮಾಡಿದ್ದಳು .

ಟ್ರಾವಂಕೂರು ಸಂಸ್ಥಾನಕ್ಕೆ ಸೇರಿದ ಮದ್ಯ ಕೇರಳದ ಚೆರತಲಾ ಎಂಬ ಪ್ರದೇಶಕ್ಕೆ ಸೇರಿದವಳಾಗಿದ್ದ ನಾಗೇಲಿ ಎಂಬ ಮಹಿಳೆ ಸುಂಕ ಕಟ್ಟದೆ ರಾಜರ ಆದೇಶಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಳು ಅಲ್ಲಿ ಸುಂಕ ವಸೂಲಿಗಾರರನ್ನು ಪಾರ್ವತಿಯಾರ್ ಎಂದು ಕರೆಯುತ್ತಿದ್ದರೂ ಅವರು ಬಂದೊಡನೆ ಬಾಳೆ ಎಲೆಯನ್ನು ಹಾಸಿಡುತ್ತಿದ್ದರೂ ಆ ಬಾಳೆ ಎಲೆ ಮೇಲೆ ಎಲ್ಲ ಮಹಿಳೆಯರು ತಮ್ಮ ಸುಂಕದ ಹಣವನ್ನು ಹಾಕಿ ಹೋಗಬೇಕಿತ್ತು .

 

 

ಈ ಸುಂಕದಿಂದ ಬಹಳವಾಗಿ ನೊಂದು ಬೆಂದಿದ್ದ ನಾಗೇಲಿ ಆ ದಿನ ಒಂದು ಚಾಕುವನ್ನು ತೆಗೆದುಕೊಂಡು ತನ್ನ ಎದೆಯನ್ನು ಕತ್ತರಿಸಿ ಬಾಳೆ ಎಲೆಯಲ್ಲಿ ಇಡುತ್ತಾಳೆ ತೀವ್ರ ರಕ್ತಸ್ರಾವವಾಗಿ ಆಕೆ ಸ್ವಲ್ಪ ಸಮಯದ ಬಳಿಕ ತೀರಿ ಹೋಗುತ್ತಾಳೆ ಆ ನಂತರ ಆಕೆಯ ಹೆಣವನ್ನು ಅಂತ್ಯಸಂಸ್ಕಾರಕ್ಕೆಂದು ತೆಗೆದುಕೊಂಡು ಹೋಗಿ ಸುಡಲಾಗುತ್ತದೆ ಆ ಬೆಂಕಿಯಲ್ಲಿ ಆಕೆಯ ಗಂಡ ಚಿರುಕಂದನ ಬಿದ್ದು ಸತ್ತು ಹೋಗುತ್ತಾನೆ .

ಆಕೆಯ ನಿಧನದ ನಂತರ ದಲಿತರಲ್ಲಿ ಹೋರಾಟದ ಕಿಚ್ಚು ಹೆಚ್ಚಾಗುತ್ತದೆ ಇದರಿಂದ ಟ್ರಾವಂಕೂರು ಸಂಸ್ಥಾನದಲ್ಲಿ ಮೂಲ ಕರವನ್ನು ನಿಷೇಧ ಮಾಡಲಾಗುತ್ತದೆ ಆಕೆ ತನ್ನ ಎದೆಯ ಭಾಗವನ್ನು ಕತ್ತರಿಸಿಕೊಟ್ಟ ಸ್ಥಳವನ್ನು ಮುಲಾಚಿ ಪರಂಬು ಎಂದು ಕರೆಯಲು ಶುರು ಮಾಡುತ್ತಾರೆ ಹೀಗೆಂದರೆ ವಕ್ಷಸ್ಥಳವಿದ್ದ ಮಹಿಳೆಯರ ಜಾಗ ಎಂದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top