fbpx
ಸಮಾಚಾರ

ಈ ಕೋಳಿಯ ಬೆಲೆ 2 ಲಕ್ಷ: ಅಷ್ಟಕ್ಕೂ ಕೋಳಿಯ ವಿಶೇಷತೆ ಏನು ಗೊತ್ತಾ?

ಈ ಕೋಳಿಯ ಬೆಲೆ 2 ಲಕ್ಷ: ಅಷ್ಟಕ್ಕೂ ಕೋಳಿಯ ವಿಶೇಷತೆ ಏನು ಗೊತ್ತಾ?

 

ಸರ್ವ ಸಾಮಾನ್ಯವಾಗಿ ಕೋಳಿಗಳನ್ನ ಹಳ್ಳಿಗಳಲ್ಲಿ ಕಾಣಬಹುದು,ಮೊಟ್ಟೆ ಅಥವಾ ಮಾಂಸಕ್ಕಾಗಿ ಕೋಳಿಗಳನ್ನ ಬೆಳೆಸುತ್ತಾರೆ , ಇನ್ನು ಇದರಲ್ಲಿ ಕೋಳಿ ಮತ್ತು ಹುಂಜ ಎಂಬ ಎರಡು ವಿಧಗಳಿರುತ್ತವೆ, ಇವುಗಳನ್ನ ಫಾರಂ ನಲ್ಲಿ ಬೆಳೆಸುವ ಬಾಯ್ಲರ್ ಕೋಳಿಗಳು ಹಕುಡ ಇರುತ್ತದೆ. ಕೋಳಿಮಾಂಸದಿಂದ ತಯಾರಿಸುವ ಚಿಕನ್ ಗೆ ಎಷ್ಟು ಬೇಡಿಕೆ ಇದೆ ಅಂತ ನಾವು ನಿಮಗೆ ಹೇಳಬೇಕಿಲ್ಲ.

 

ಇನ್ನು ಈ ಕೋಳಿಗಲ್ಲಿ ಎಷ್ಟು ರೀತಿಯ ಬಣ್ಣಗಳಿರುತ್ತವೆ ಕಪ್ಪು , ಬಿಳಿ,ಕೆಂಪು ,ಹಳದಿ ಇತ್ಯಾದಿಗಳು ಇರುತ್ತವೆ.ಇನ್ನು ವಿಷಯಕ್ಕೆ ಬಂದರೆ ಇಂಡೋನೇಷಿಯಾದಲ್ಲಿ ಒಂದು ಕಪ್ಪು ಕೋಳಿ ಇದೆ ಅಂತೇ ಅವುಗಳಿಗಿರುವ ಬೇಡಿಕೆ ಎಷ್ಟು ಅಂದರೆ ಸುಮಾರು 2 ಲಕ್ಷ ರೂ ಕೋಳಿಗಳನ್ನ ಮಾರುತ್ತಾರೆಂತೆ. ಇನ್ನು ಸುಳ್ಳು ಅಂತ ಅನ್ಕೋತ ಇದೀರಾ ಆ ಕೋಳಿ ಬೆಲೆ ಅಷ್ಟೊಂದಾ ಅಂತ ಅಚ್ಚರಿ ಅಯಿತ.

 

 

 

ಹಾಗಾದರೆ ಅದರ ವಿಶೇಷ ಏನ್ ಗೊತ್ತಾ
ಇಂಡೋನೇಷಿಯಾದಲ್ಲಿ ಸಿಗುವ ಎಲ್ಲಾ ಕೋಳಿಗಳ ಅಷ್ಟೇ ಬೆಲೆಬಾಳುತ್ತದೆ ಅಂತ ತಿಳ್ಕೊಂಡರೆ ತಪ್ಪು. ಅದು ಕಪ್ಪು ಆಗಿರುವ ಕಾರಣ ಅಷ್ಟೊಂದು ಬೆಲೆ.
ಅದರಲ್ಲಿ ಏನು ವಿಶೇಷ ನಮ್ಮಲ್ಲಿ ಕಪ್ಪು ಕೋಳಿಗಳಿವೆ ಅಂತ ಅಂದರೆ ನಮ್ಮಲಿರುವ ಕಪ್ಪು ಕೋಳಿಗಳ ಗರಿಗಳು ಮಾತ್ರ ಕಪ್ಪು ಆಗಿರುತ್ತದೆ,
ಆದರೆ ಇಂಡೋನೇಷಿಯಾದಲ್ಲಿ ಕಪ್ಪು ಕೋಳಿಗಳ ಗರಿಗಳು , ಚರ್ಮ , ಮಾಂಸ , ಅದರ ಕಣ್ಣುಗಳು ,ಮೂಗು ,ಬಾಯಿ ,ನಾಲಿಗೆ ಎಲ್ಲವೂ ಕಪ್ಪು ಆಗಿರುವುತ್ತವೆ.ಇದರ ಬಣ್ಣ ಇಷ್ಟೊಂದು ಡಿಮ್ಯಾಂಡ್ ತಂದಿಕೊಟ್ಟಿದೆ .ಇಷ್ಟಕ್ಕೂ ಇದರ ಬೆಲೆ ಎಷ್ಟು ಅಂದರೆ ಸುಮಾರು ಸುಮಾರು 2 ಲಕ್ಷ ರೂಪಾಯಿ ಅಂತೇ .

 

 

 

 

ಇವುಗಳಲ್ಲಿ ಹುಂಜಗಳು 2 ರಿಂದ 3kg ತೂಕವಿದ್ದು ,ಹೆಣ್ಣು ಕೋಳಿಗಳು 1 ರಿಂದ 2 ಕೆಜಿ ತೂಕವಿರುತ್ತೆ ಅಂತೇ.ಕನಿಷ್ಠ ಇವುಗಳ ಬೆಲೆ 1 .25 ಲಕ್ಷ ರೂ ಅಂತೇ ಆಗ ತಾನೇ ಹುಟ್ಟಿದ ಕೋಳಿ ಮರಿಗಳು ಸಹ 15000 ರೂಪಾಯಿಗಿಂತ ಕಡಿಮೆ ಮಾರಾಟವಾಗುವುದಿಲ್ಲವಂತೆ .
“ಫೈಬ್ರೊ ಮೊನಾಸಿಸ್” ಎನ್ನುವ ಜನ್ಯ ಕಾರಣಗಳಿಂದ ಇವುಗಳ ಶರೀರದೊಂದಿಗೆ ಕೋಳಿಗಳ ಒಳಗಿನ ಭಾಗಗಳು ಕೂಡ ಕಪ್ಪು ಬಣ್ಣವಾಗಿರುತ್ತದೆ.

ಉಳಿದ ಕೋಳಿಗಳಿಗೆ ಹೋಲಿಸಿದರೆ ಈ ಕೋಳಿಗಳ ಮಾಂಸ ರುಚಿಯಾಗಿರುತ್ತದೆ ಅಲ್ಲದೆ ಆರೋಗ್ಯವಾಗಿರುತ್ತದೆ ಅಂತ ಹೇಳಲಾಗುತ್ತದೆ.
ಅದಕ್ಕಾಗಿ ಈ ಕೋಳಿಗಳಿಗೆ ಬರಿ ಡಿಮ್ಯಾಂಡ್ ಅಂತೇ .
ಇನ್ನೊಂದು ವಿಷಯ ಎಂದರೆ ಪ್ರಪಂಚದ ಅತ್ಯಂತ ಉದ್ದನೆಯ ಕೋಳಿ ಟರ್ಕಿ ಯಲ್ಲಿ ಕಂಡುಬರುತ್ತೆ ಅಂತೇ.ಇದು ಸಾಮಾನ್ಯ ಕೋಳಿಗಳಿಗಿಂತ ತುಂಬಾ ದೊಡ್ಡದು ಮತ್ತು ಉದ್ದವಾಗಿರುತ್ತದೆಂತೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top