fbpx
ಸಮಾಚಾರ

ಕೃಷ್ಣಮೃಗ ಬೇಟೆ ಪ್ರಕರಣ:ಬಾಲಿವುಡ್ ನಟ ಸಲ್ಮಾನ್ ಖಾನ್’ಗೆ ಜೈಲು

ಬಾಲಿವುಡ್ ಬ್ಯಾಡ್ ಬಾಯ್ ಎಂದೇ ಹೆಸರು ಉಳಿಸಿಕೊಂಡಿರುವ ಸಲ್ಮಾನ್ ಖಾನ್ ಅಪರಾಧಿ ಎಂದು ಜೋಧ್‌ಪುರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ತೀರ್ಪು ಪ್ರಕಟಿಸಿದೆ. 20 ವರ್ಷಗಳ ಹಿಂದೆ ನಟ ಸಲ್ಮಾನ್ ಖಾನ್ ಹಾಗೂ ಇತರೆ ನಟರ ವಿರುದ್ಧ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ರಾಜಸ್ಥಾನದ ಜೋಧಪುರ ನ್ಯಾಯಾಲಯ ಪ್ರಕಟಿಸಿದ್ದು ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 51ರ ಅಡಿ ಸಲ್ಮಾನ್​​ಗೆ ಶಿಕ್ಷೆ ಪ್ರಕಟವಾಗಲಿದ್ದು ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದೆ.

 

 

ಪ್ರಕ್ರಣದಲ್ಲಿ ಸಲ್ಮಾನ್​​ ಖಾನ್ ಜೊತೆ ಆರೋಪಿಗಳಾಗಿದ್ದ ಸೊನಾಲಿ ಬೇಂದ್ರೆ, ಟಬು, ನೀಲಂ, ಸೈಫ್​​ ಅಲಿಖಾನ್​ ನಿರ್ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದ್ದು ​ ಅವರೆಲ್ಲರಿಗೂ ಬಿಗ್‌ ರಿಲೀಫ್ ಪಡೆದಿದ್ದಾರೆ. ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ಸುಮಾರು ಆರು ವರ್ಷಗಳ ಜೈಲು ಶಿಕ್ಷೆ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

 

ಏನಿದು ಪ್ರಕರಣ?:
ಹ್ಯಾಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದಲ್ಲಿ ತಂಗಿದ್ದ ಸಲ್ಮಾನ್ ಖಾನ್ ಹಾಗೂ ಇತರೆ ನಟರುಗಳು 1998ರ ಅಕ್ಟೊಬರ್ 1ರ ಮದ್ಯ ರಾತ್ರಿ ರಾಜಸ್ಥಾನದ ಜೋಧಪುರ ಬಳಿ ಜೀಪ್ ನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ಕೃಷ್ಣಮೃಗಗಳ ಹಿಂಡನ್ನು ನೋಡಿದ ಚಾಲಕನ ಸೀಟಿನಲ್ಲಿ ಕೂತಿದ್ದ ಸಲ್ಮಾನ್ ಖಾನ್ ಆ ಹಿಂಡಿನತ್ತ ಗುಂಡು ಹಾರಿಸಿದ್ದರು. ಪರಿಣಾಮ 2 ಕೃಷ್ಣಮೃಗಗಳು ಮೃತಪಟ್ಟಿದ್ದವು. ಇದನ್ನು ಅಲ್ಲಿನ ಜನರು ಗಮನಿಸಿ ಬೆನ್ನಟ್ಟಿದಾಗ, ಮೃತಪಟ್ಟಿದ್ದ ಕೃಷ್ಣಮೃಗಗಳನ್ನು ಅಲ್ಲೇ ಬಿಟ್ಟು ಸಲ್ಮಾನ್ ಮತ್ತು ತಂಡ ಅಲ್ಲಿಂದ ಕಾಲ್ಕಿತ್ತಿತ್ತು ಎಂದು ಸರ್ಕಾರ ಪರ ವಕೀಲರು ವಾದಿಸಿದ್ದಾರೆ.

.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top