fbpx
ಸಮಾಚಾರ

ರುಚಿಯಾದ ಬಟರ್‌ ಚಿಕನ್‌ ಈಗ ಮನೇಲೆ ಮಾಡ್ಕೋಬಹುದು

ಬಟರ್‌ ಚಿಕನ್‌ ರೆಸಿಪಿ

ಬೇಕಾಗುವ ಸಾಮಾಗ್ರಿಗಳು

ಚಿಕನ್‌ಗೆ ಮಿಶ್ರಣ ಮಾಡಿ ಇಡಲು
1 ಕೆಜಿ ಚಿಕನ್‌
ಶುಂಠಿ ಪೇಸ್ಟ್‌ 1 ಚಮಚ
ಬೆಳ್ಳುಳ್ಳಿ ಪೇಸ್ಟ್‌ 1 ಚಮಚ
ಗರಂ ಮಸಾಲ ಅರ್ಧ ಚಮಚ
ತಾಜಾ ನಿಂಬೆರಸ 1 ಚಮಚ
ಖಾರದ ಪುಡಿ 1 ಚಮಚ
ಅರ್ಧ ಚಮಚ ಅರಿಶಿಣ ಪುಡಿ
ರುಚಿಗೆ ಉಪ್ಪು
ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಒಂದು ಬಟ್ಟಲಿಗೆ ಹಾಕಿ ಮಿಕ್ಸ್ ಮಾಡಿ ಒಂದು ಗಂಟೆ ಇಡಿ.
ಒಂದು ಬಾಣಲೆ ಬಿಸಿ ಮಾಡಿ, 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದರಲ್ಲಿ ಮಿಶ್ರಣ ಮಾಡಿಟ್ಟ ಚಿಕನ್‌ ಹಾಕಿ 10 ನಿಮಿಷ ಫ್ರೈ ಮಾಡಿ ಇಡಿ.

ಮಸಾಲೆ ಮಿಶ್ರಣ :

5 ಚಮಚ ಎಣ್ಣೆ
1/4 ಕಪ್‌ ಬೆಣ್ಣೆ
1 ಚಮಚ ಖಾರದ ಪುಡಿ
11/4 ಕಪ್‌ ಟೊಮೆಟೊ ಪೇಸ್ಟ್
1 ಕಪ್ ಕ್ರೀಮ್‌
1 ಚಮಚ ಕಸೂರಿ ಮೆಂತೆ
1/2 ಚಮಚ ಗರಂ ಮಸಾಲ
ಹಸಿ ಮೆಣಸಿನಕಾಯಿ 2-3
ರುಚಿಗೆ ತಕ್ಕ ಉಪ್ಪು

ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಬೆಣ್ಣೆ ಹಾಕಿ, ಖಾರದ ಪುಡಿ ಸೇರಿಸಿ ನಂತರ ಟೊಮೆಟೊ ಪೇಸ್ಟ್ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣವನ್ನು ಕುದಿಸಿ, ನಂತರ ಉರಿ ಕಡಿಮೆ ಮಾಡಿ ಕ್ರೀಮ್‌ ಸೇರಿಸಿ, ಮೆಲ್ಲನೆ ತಿರುಗಿಸಿ.

ನಂತರ ಫ್ರೈ ಮಾಡಿಟ್ಟ ಚಿಕನ್ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.
ಈಗ ಚಿಕನ್‌ ಅನ್ನು ಉರಿಯಿಂದ ಇಳಿಸಿ ಕಸೂರಿ ಮೇತಿ, ಗರಂ ಮಸಾಲ, ಹಸಿ ಮೆಣಸಿನಕಾಯಿ ಹಾಕಿ ಮಿಕ್ಸ್‌ ಮಾಡಿ, ಮತ್ತೆ 2 ನಿಮಿಷ ಬಿಸಿ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top