fbpx
ವಿಶೇಷ

ಕಾಂಡೋಮ್ ಬಳಸಿ ಹೊಸ ರೀತಿಯ ಆಟ ಶುರು ಹಚ್ಚಿಕೊಂಡ ಐನಾತಿಗಳು

 

‘ಕಾಂಡೋಮ್ ಸ್ನೋರ್ ಟಿಂಗ್ ಚಾಲೆಂಜ್ ‘ ಶುರುವಾಗಿದ್ದು ಏಪ್ರಿಲ್ ಫೂಲ್ ಎಂಬ ಹೊಸ ಟ್ರೆಂಡ್ ನೊಂದಿಗೆ 2013 ರಲ್ಲಿ ಮೊದಲ ಬಾರಿಗೆ ಈ ಆಟ ಪ್ರಪಂಚದಾದ್ಯಂತ ವೈರಲ್ ಆಗಿದ್ದು ವಿಚಿತ್ರವಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆಟಗಳಲ್ಲಿ ಇದು ಸಹ ಒಂದು ಆದರೆ ಎಷ್ಟು ಮೋಜು ಮಸ್ತಿ ನೀಡುತ್ತದೋ ಗೊತ್ತಿಲ್ಲ ಒಂದು ವೇಳೆ ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಕುತ್ತು ಬರುವುದಂತೂ ಖಂಡಿತ .

 

 

ಈ ಸವಾಲನ್ನು ಯಾರು ಸ್ವೀಕಾರ ಮಾಡುತ್ತಾರೋ ಅವರು ಮೂಗಿನ ಒಂದು ಹೊಳ್ಳೆಯ ಮೂಲಕ ಕಾಂಡೋಮ್ ಅನ್ನು ಎಳೆದುಕೊಳ್ಳಬೇಕಾಗುತ್ತದೆ ಆ ನಂತರ ಬಾಯಿಯ ಮೂಲಕ ಕಾಂಡೋಮ್ ಹೊರತೆಗೆಯಬೇಕು ಒಂದು ವೇಳೆ ಕಾಂಡೋಮ್ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡರೆ ಉಸಿರಾಟಕ್ಕೆ ತೊಂದರೆಯಾಗಿ ಸಾವನ್ನಪ್ಪುವುದು ಖಂಡಿತ

ಅಷ್ಟೇ ಅಲ್ಲದೆ ಮೂಗು ಹಾಗೂ ಅನ್ನ ನಾಳಕ್ಕೆ ಸಂಬಂಧಿಸಿದ ಅನೇಕ ಸೋಂಕು ರೋಗಗಳಿಗೂ ಈ ಆಟ ಮೂಲವಾಗುತ್ತದೆ ಇಷ್ಟು ಅಪಾಯವಿದೆ ಎಂದು ಗೊತ್ತಿದ್ದರೂ ಸಹ ಯುವಜನತೆ ಈ ಆಟವನ್ನು ಆಡಬೇಕೆಂದು ಮುಗಿಬಿದ್ದು ಆಡುತ್ತಿವೆ.

 

 

ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುವ ಯುವಕ ಯುವತಿಯರು ತಾವು ಮಾಡುತ್ತಿರುವ ಈ ಆಟವನ್ನು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ

ತಮ್ಮ ವಿಡಿಯೋಗಳಿಗೆ ಹೆಚ್ಚು ಲೈಕ್ ಹಾಗೂ ಕಾಮೆಂಟ್ ಗಳು ಹಾಗೂ ಶೇರುಗಳು ಆಗಲಿ ಎಂಬ ಉದ್ದೇಶದಿಂದ ಈ ವಿಚಿತ್ರವಾದ ಆಟದ ಮೊರೆ ಹೋಗಿರುವ ಯುವಜನತೆ ಮುಂದೆ ಇನ್ನಷ್ಟು ಅಪಾಯಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top