ಹೆಚ್ಚಿನ

ಈ ಕೋಣದ ವೀರ್ಯಕ್ಕೆ ತಿಂಗಳಿಗೆ 25 ಲಕ್ಷ ರೂಪಾಯಿ ಕೊಡ್ತಾರೆ ಅಂದ್ರೆ ನಂಬಲೇ ಬೇಕು ! ಏನಿದರ ಸ್ಪೆಷಾಲಿಟಿ ನೀವೇ ಓದಿ

ಈ ಕೋಣದ ವೀರ್ಯಕ್ಕೆ ತಿಂಗಳಿಗೆ 25 ಲಕ್ಷ ರೂಪಾಯಿ ಕೊಡ್ತಾರೆ ಅಂದ್ರೆ ನಂಬಲೇ ಬೇಕು ! ಏನಿದರ ಸ್ಪೆಷಾಲಿಟಿ ನೀವೇ ಓದಿ

ವೀರ್ಯಗಾಥೆ!

 

 

ತಿಂಗಳಿಗೆ 25 ಲಕ್ಷ ರೂಪಾಯಿಗಳನ್ನು ಗಳಿಸಿದರೂ ‘ಅಯ್ಯೋ ಎಮ್ಮೆ ಕೋಣ’ ಎಂಬ ಮಾತು ಕೇಳಬೇಕಾಗಿದೆ.

‘ಛೇ… ಹೀಗನ್ನಬಾರದಲ್ವಾ?’

ಇದು ಅಕ್ಷರಶಃ ಎಮ್ಮೆ ಕೋಣವೇ ಆಗಿದೆ. ಹೆಸರು ಭೀಮ. ಹರ್ಯಾಣದ ಕುರುಕ್ಷೇತ್ರದ ಸುನಾರಿಯೋದ ಕರ್ಮವೀರ ಸಿಂಗ್ ಇದರ ಮಾಲೀಕ. ವಯಸ್ಸು ಇನ್ನೂ ಐದೇ ವರ್ಷ. ಆಗಲೇ ದಿನಕ್ಕೆ 4-5ಎಂ.ಎಲ್. ವೀರ್ಯ ಸುರಿಸುತ್ತಾನೆ. ಈ ವೀರ್ಯವೇ ಭೀಮನ ಯಶಸ್ಸಿಗೆ ಕಾರಣ. ಈ ಕೋಣವೇ ಕರ್ಮವೀರನ ಆಯದ ಮೂಲವಾಗಿದೆ.

 

 

ಈ ಎಮ್ಮೆಯ ವೀರ್ಯಕ್ಕೆ ಎಲ್ಲಿಲ್ಲದ ಡಿಮ್ಯಾಂಡ್. ಒಂದೊಂದು ತೊಟ್ಟಿನ ವೀರ್ಯಕ್ಕೂ ಮೌಲ್ಯವಿದೆ. 7 ಕೋಟಿ ರೂಪಾಯಿಗಳ ಬೇಡಿಕೆ ಬಂದರೂ ಕರ್ಮವೀರ್ ಮಾರಿಲ್ಲ. ಈ ವೀರ್ಯದಿಂದ ಜನಿಸಿದ ಎಮ್ಮೆಗಳು ಅಪರಿಮಿತ ಹಾಲು ನೀಡುತ್ತದೆ. ಅದರ ಮಾಂಸ ಕೂಡ ಅಷ್ಟೇ ರುಚಿಯಂತೆ. ಚರ್ಮವೂ ಶ್ರೇಷ್ಠ. ಭಾರತದಲ್ಲಿ ಈ ರೀತಿಯ ‘ಮುರ್ರಾ’ ಎಮ್ಮೆ ತಳಿಯ ಬಗೆಗೆ ಹೆಚ್ಚಿನ ಜನರಿಗೆ ಜ್ಞಾನವಿಲ್ಲ. ಸರ್ಕಾರವೂ ಈ ಕುರಿತು ಜಾಗೃತಿ ಮೂಡಿಸಿಲ್ಲ. ಉತ್ತರ ಭಾರತದ ಪಂಜಾಬ್, ಹರ್ಯಾಣಗಳಲ್ಲಿ ತಕ್ಕಮಟ್ಟಿಗೆ ತಿಳಿದಿದೆ. ಆದರೆ ದಕ್ಷಿಣಭಾರತೀಯರಿಗೆ ಅಪರಿಚಿತ.

 

ತಿಂಗಳಿಗೆ ಲಕ್ಷಾಂತರ ಆದಾಯ ತರುವ ಈ ಎಮ್ಮೆಯ ‘ವೀರ್ಯಗಾಥೆ’ ಹೇಗಿದೆ? ‘ನೀನಾರಿಗಾದೆಯೋ ಎಲೆ ಮಾನವಾ…?’ ಎಂದು ಆ ಎಮ್ಮೆ ಕೋಣ ಕೇಳುತ್ತಿದೆ.

‘ದನಕಾಯೋನು’ ಕೋಣಕ್ಕೆ ಉತ್ತರ ನೀಡಲಿ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top