fbpx
ದೇವರು

ಚಾಣಕ್ಯ ನೀತಿಯ ಪ್ರಕಾರ ಕಾಗೆಗೆ ಇರೋ ಈ 5 ಬುದ್ದಿ ಗುಣಗಳು ಮನುಷ್ಯನಿಗೆ ಇದ್ರೆ ಬಹಳ ಎತ್ತರಕ್ಕೆ ಹೋಗಿ ಉದ್ದಾರ ಆಗ್ತಾನಂತೆ

ಚಾಣಕ್ಯ ನೀತಿಯ ಪ್ರಕಾರ ಕಾಗೆಗೆ ಇರೋ ಈ 5 ಬುದ್ದಿ ಗುಣಗಳು ಮನುಷ್ಯನಿಗೆ ಇದ್ರೆ ಬಹಳ ಎತ್ತರಕ್ಕೆ ಹೋಗಿ ಉದ್ದಾರ ಆಗ್ತಾನಂತೆ

 

ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ಒಬ್ಬ ಮನುಷ್ಯ ಜೀವನದಲ್ಲಿ ಯಶಸ್ವಿಯಾಗಲು ಕಾಗೆಯಿಂದ ಈ ವಿಷಯಗಳನ್ನು ಅವಶ್ಯವಾಗಿ ಕಲಿತುಕೊಳ್ಳಬೇಕು.
ಆಚಾರ್ಯ ಚಾಣಕ್ಯ ಒಬ್ಬ ದೊಡ್ಡ ತತ್ತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಮತ್ತು ಉತ್ತಮ ಸಲಹೆಗಾರರು ಕೂಡ ಆಗಿದ್ದಾರೆ. ಜೀವನದಲ್ಲಿ ಯಶಸ್ವಿಯಾಗಲು ಈ ಐದು ವಿಷಯಗಳನ್ನು ಕಲಿತುಕೊಳ್ಳಬೇಕು. ಚಾಣಕ್ಯನ ಪ್ರಕಾರ ಪ್ರತಿಯೊಬ್ಬ ಮನುಷ್ಯ ಜೀವಿಯೂ ಸಹ ಈ ಐದು ಗುಣಗಳನ್ನು ಕಾಗೆಯಿಂದ ಕಲಿತುಕೊಳ್ಳಬೇಕಂತೆ.

 

 

1.ಲೈಂಗಿಕತೆ ಖಾಸಗಿ ವಿಷಯವಾಗಿದೆ.
ನೀವು ಕಾಗೆಯನ್ನು ಎಂದಾದರೂ ಎಲ್ಲರಿಗೂ ಕಾಣುವಂತೆ ಲೈಂಗಿಕತೆ ನೆಡೆಸುವುದನ್ನು ನೋಡಿದ್ದೀರಾ? ಕಾಗೆಯು ತನ್ನ ಸಂಗಾತಿಯೊಂದಿಗೆ ಎಂದಿಗೂ ಸಹ ಎಲ್ಲರಿಗೂ ಕಾಣುವಂತೆ ಲೈಂಗಿಕ ಕ್ರಿಯೆಯನ್ನು ನಡೆಸುವುದಿಲ್ಲ. ಮನುಷ್ಯ ಕಾಗೆಯ ಈ ಗುಣವನ್ನು ಕಲಿತುಕೊಳ್ಳಬೇಕು. ಇದು ಮನುಷ್ಯನಿಗೆ ಉತ್ತಮ ಗೌರವವನ್ನು ಸಂಪಾದಿಸಲು ಖಾತರಿಗೊಳಿಸುತ್ತದೆ.

 

2.ಧೈರ್ಯ.
ಕಾಗೆಯ ರೀತಿ ಶತ್ರುಗಳನ್ನು ಹಿಮ್ಮೆಟ್ಟಲು ಮತ್ತು ಒಬ್ಬ ಮನುಷ್ಯ ತನ್ನ ಶತ್ರುಗಳಿಗೆ ದುಷ್ಟತನ ಮತ್ತು ಅಡಚಣೆಗಳನ್ನು ಉಂಟು ಮಾಡುವುದನ್ನು ಕಲಿತುಕೊಳ್ಳಬೇಕು. ಕೋಪಗೊಂಡ ಕಾಗೆ ತನ್ನ ಕುಟುಂಬ ಮತ್ತು ಆಹಾರವನ್ನು ರಕ್ಷಿಸಿಕೊಳ್ಳಲು, ತನ್ನ ಶತ್ರುಗಳನ್ನು ಆಕ್ರಮಣ ಮಾಡಲು, ಹೇಗೆ ಒಂಟಿಯಾಗಿ ತೆರಳುತ್ತದೆಯೋ ಹಾಗೆ ಮನುಷ್ಯ ಕೂಡ ಈ ಗುಣವನ್ನು ಕಲಿತುಕೊಳ್ಳಬೇಕು.ಕಾಗೆ ಅಷ್ಟು ಸುಲಭವಾಗಿ ಯಾವುದನ್ನೂ ಬಿಟ್ಟುಕೊಡುವುದಿಲ್ಲ . ಅವುಗಳನ್ನು ಎದುರಿಸುವುದು ಸ್ವಲ್ಪ ಕಷ್ಟವೇ ಆಗಿದೆ.

 

 

3 .ವಸ್ತುಗಳನ್ನು ಸಂಗ್ರಹಿಸುವುದು.
ಕಾಗೆಯ ಒಂದು ಗುಣ ಎಂದರೆ ಅವುಗಳಿಗೆ ವಸ್ತುಗಳನ್ನು ಸಂಗ್ರಹಿಸುವ ಪ್ರವೃತ್ತಿ ಇದೆ. ಮನುಷ್ಯರು ಕೂಡ ಮುಖ್ಯವಾದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಯಾವಾಗಲೂ ಹಳೆಯ ವಸ್ತುಗಳನ್ನು ಕಸ ಎಂದು ಹೊರಗೆ ಎಸೆಯುವುದಕ್ಕೂ ಮುನ್ನ ಎರಡು ಮೂರು ಬಾರಿ ಯೋಚಿಸಬೇಕು.

 

 

4.ಜಾಗೃತರಾಗಿರಿ.
ಅತ್ಯಂತ ಅದ್ಭುತವಾದ ಕಾಗೆಯ ಗುಣ ಎಂದರೆ ಯಾವಾಗಲೂ ಜಾಗೃತವಾಗಿರುವುದು. ಸದಾ ಸಮಯಕ್ಕೆ ಸರಿಯಾಗಿ ಎಲ್ಲ ಸಮಯದಲ್ಲೂ ಜಾಗೃತವಾಗಿರುವುದು ಕಾಗೆ. ಎಲ್ಲ ದಿಕ್ಕಿನಿಂದಲೂ ಶತ್ರುಗಳು ಬರುವರೇನೋ ಎಂದು ಸದಾ ಎಚ್ಚರದಿಂದ ನೋಡುತ್ತಿರುತ್ತದೆ. ನಂತರ ಅದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಮನುಷ್ಯರು ಕೂಡ ಹಾಗೆ ಸದಾ ಅವರ ಸುತ್ತಮುತ್ತ ಇರುವ ಶತ್ರುಗಳು ಹಾಗೂ ಸ್ನೇಹಿತರ ಬಗ್ಗೆಯೂ ಕೂಡ ಎಚ್ಚರಿಕೆಯಿಂದ ಇರಬೇಕು.

 

 

5.ಯಾರನ್ನೂ ನಂಬಬೇಡಿ.
ನೀವು ಎಂದಾದರೂ ಸಾಕು ಕಾಗೆಯನ್ನು ನೋಡಿದ್ದೀರ ? ಯಾರಾದರೂ ಕಾಗೆಯನ್ನು ಸಾಕುವುದನ್ನು ನೋಡಿದ್ದೀರಾ ? ಇಲ್ಲ ಯಾಕೆಂದರೆ ಯಾರನ್ನೂ ನಂಬದೇ ಇರುವ ಪಕ್ಷಿ ಎಂದರೆ ಈ ಕಾಗೆ. ಇದು ಇದರ ಬಲವಾದ ಗುಣ. ಮನುಷ್ಯನೂ ಸಹ ಈ ಗುಣವನ್ನು ಅಳವಡಿಸಿಕೊಂಡರೆ ಅವರು ಅವರನ್ನು ಸಂಪೂರ್ಣವಾಗಿ ರಕ್ಷಿಸಿಕೊಳ್ಳಬಹುದು ಮತ್ತು ಯಾರೂ ಸಹ ಅವರನ್ನು ಹಾನಿಗೊಳಿಸಲು ಸಾಧ್ಯವಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top