ತಿಂಡಿ ತೀರ್ಥ

ರುಚಿಯಾದ ಹಲಸಿನ ಹಣ್ಣಿನ ಪಾಯಸ ಮಾಡುವ ವಿಧಾನ

ರುಚಿಯಾದ ಹಲಸಿನ ಹಣ್ಣಿನ ಪಾಯಸ ಮಾಡುವ ವಿಧಾನ..

ಬೇಕಾಗಿರುವ ಸಾಮಗ್ರಿಗಳು :

ಹಣ್ಣಾದ ಹಲಸಿನ ತೊಳೆ-2 ಕಪ್‌,
ತೆಂಗಿನ ಕಾಯಿ-1,
ಬೆಲ್ಲ-1 ಅಥವಾ ಅರ್ಧ ಕಪ್‌,
ಗೋಡಂಬಿ-10,
ದ್ರಾಕ್ಷಿ-10,
ಏಲಕ್ಕಿ-5,
ತುಪ್ಪ-2 ಟೇಬಲ್‌ ಚಮಚ .

ಹಲಸಿನ ಹಣ್ಣಿನ ಪಾಯಸ ಮಾಡುವ ವಿಧಾನ:

ಒಂದು ಪಾತ್ರೆಗೆ 2 ಕಪ್‌ ನೀರು ಹಾಕಿ ಬಿಸಿ ಮಾಡಿ.ಹಲಸಿನ ತೊಳೆ ಹಾಕಿ ಬೇಯಿಸಿ.

ತುರಿದ ತೆಂಗಿನಕಾಯಿಯ ಹಾಲು ತೆಗೆದು 2 ಕಪ್‌ ಹಾಲು ಮತ್ತು 2 ಕಪ್‌ ತೆಳ್ಳನೆಯ ಹಾಲು ಮಾಡಿಟ್ಟುಕೊಳ್ಳಿ.

ಹಲಸಿನ ತೊಳೆ ಚೆನ್ನಾಗಿ ಬೆಂದ ಬಳಿಕ ಬೆಲ್ಲ ಹಾಕಿ ಕುದಿಸಿ. ಬಳಿಕ ತೆಳ್ಳಗಿನ ತೆಂಗಿನ ಹಾಲು ಬೆರೆಸಿ 20 ನಿಮಿಷ ಕುದಿಯಲು ಬೇಡಿ.

ಹಲಸು, ಬೆಲ್ಲ ಮತ್ತು ಹಾಲಿನ ಮಿಶ್ರಣ ಕುದಿದು ಪರಿಮಳ ಬರುವಾಗ ತೆಂಗಿನಕಾಯಿಯ ಗಟ್ಟಿ ಹಾಲು ಮತ್ತು ಏಲಕ್ಕಿ ಪುಡಿ ಬೆರೆಸಿ ಒಂದು ಸುತ್ತು ತಿರುವಿ ಪಾತ್ರೆಯನ್ನು ಕೆಳಗಿಡಿ.

ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ. ಹಲಸಿನ ಹಣ್ಣಿನ ಪಾಯಸ ರೆಡಿ. ಬಿಸಿಯಾಗಿರುವಾಗಲೇ ತಿಂದರೆ ಇನ್ನೂ ಟೇಸ್ಟಿಯಾಗಿರುತ್ತದೆ. ತೆಂಗಿನ ಹಾಲು ಜಾಸ್ತಿ ಹಾಕಿದಷ್ಟು ಪಾಯಸಕ್ಕೆ ರುಚಿ ಹೆಚ್ಚು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top