fbpx
ಭವಿಷ್ಯ

ಏಪ್ರಿಲ್ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ಕಟಕ ರಾಶಿ ತಿಂಗಳ ಭವಿಷ್ಯ 

 

 

ವ್ಯಾಪಾರ ಹಾಗೂ ಹಣಕಾಸು.

ವ್ಯಾಪಾರ ಹಾಗೂ ಹಣಕಾಸಿನ ವಿಷಯಗಳಲ್ಲಿ ಏಪ್ರಿಲ್ ಒಂಬತ್ತು ಮತ್ತು ಹತ್ತನೇ ತಾರೀಖಿನಂದು ಹಣದ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.ಯಾವುದೇ ರೀತಿಯ ನಿರ್ಧಾರವನ್ನು ಹಣದ ಬಗ್ಗೆ ತೆಗೆದುಕೊಳ್ಳಬೇಡಿ ಹಣವನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದು ಇಂತಹ ಕೆಲಸಗಳನ್ನು ಸಹ ಮಾಡಬೇಡಿ. ಏಪ್ರಿಲ್ ಹದಿನಾಲ್ಕರವರೆಗೆ ನಿಮ್ಮ ವ್ಯಾಪಾರಗಳು ಸಾಮಾನ್ಯವಾಗಿ ನಡೆಯಲಿವೆ. ನೀವು ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ಏಪ್ರಿಲ್ ಹದಿನಾಲ್ಕನೇ ತಾರೀಕಿನ ನಂತರ ಈ ತಿಂಗಳ ಕೊನೆಯವರೆಗೂ ಉತ್ತಮ ಲಾಭ ದೊರೆಯಲಿದೆ.

ಈ ಸಮಯದಲ್ಲಿ ಬೇರೆ ಬೇರೆ ಮೂಲಗಳಿಂದ ಹಣದ ಅವಶ್ಯಕತೆಗೆ ತಕ್ಕಂತೆ ಲಭಿಸುತ್ತದೆ. ಏಪ್ರಿಲ್ ಹತ್ತೊಂಬತ್ತನೇ ತಾರೀಕಿನ ನಂತರ ಶುಕ್ರನ ಸ್ಥಾನ ನಿಮಗೆ ಬಹಳಷ್ಟು ಯಶಸ್ಸನ್ನು ಮತ್ತು ಹಣವನ್ನು ಕೂಡ ತಂದುಕೊಡುತ್ತದೆ. ಆದ್ದರಿಂದ ಅವಸರ ಬೇಡ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಕೂಡ ನಿಮಗೆ ಗೊತ್ತಿದ್ದರೂ ಅಥವಾ ಗೊತ್ತಿಲ್ಲದೇ ಹೋದರೂ ಸ್ವಲ್ಪ ಹೆಚ್ಚಿನ ಕಾಲ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ .ತಾಳ್ಮೆ ಇರಲಿ ಕೋಪ ಬೇಡ ಅವಸರ ಬೇಡ ಸಣ್ಣ ಪುಟ್ಟ ವಿಷಯಗಳನ್ನು ಕೂಲಂಕುಷವಾಗಿ ಅರ್ಥ ಮಾಡಿಕೊಂಡು ಸ್ವಲ್ಪ ಸರಿದಾರಿಯಲ್ಲಿ ನಡೆದರೆ ಈ ತಿಂಗಳು ನಿಮಗೆ ಬಹಳ ಚೆನ್ನಾಗಿರುತ್ತದೆ .

ಸಂಸಾರ .

ಸಂಸಾರ ಮತ್ತು ಸಂಬಂಧಗಳ ವಿಷಯದಲ್ಲಿ ಗಂಡ ಹೆಂಡತಿ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುತ್ತವೆ. ಆದ್ದರಿಂದ ಪ್ರತಿ ಪತ್ನಿಯರ ಮಾತಿನಲ್ಲಿ ಹಿಡಿತವಿರಲಿ . ಅನವಶ್ಯಕ ಮತ್ತು ಬೇಡದ ಮಾತುಗಳಿಂದ ದೂರವಿರಿ. ಒಂಬತ್ತು ಮತ್ತು ಹತ್ತನೇ ತಾರೀಖು  ಪತಿಯ ಜೊತೆ ಮಾತನಾಡಲು ಹೋಗಲೇಬೇಡಿ. ಏಪ್ರಿಲ್ ಹತ್ತೊಂಬತ್ತನೇ ತಾರೀಖಿನ ನಂತರ  ನಿಮ್ಮ ಆಸೆಗಳು ಕೋರಿಕೆಗಳು ಈಡೇರುತ್ತವೆ. ಮಹಿಳೆಯರು ತಾಳ್ಮೆಯಿಂದ ಇರುವುದು ಉತ್ತಮ. ವಾದ ಮಾಡಲು ಹೋಗಬೇಡಿ. ಆಗ ಉತ್ತಮ ದಿನಗಳು ನಿಮ್ಮದಾಗಲಿವೆ .

ವಿದ್ಯಾರ್ಥಿಗಳಿಗೆ .

ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಶುಭ ಕಾಲ ಪ್ರೀತಿ, ಪ್ರೇಮದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಸ್ನೇಹಿತರ ವಿಚಾರವಾಗಿ ನೀವು ಸಮಾಧಾನ ಮಾಡಲು ಹೋಗಿ ಮತ್ತೆ ಜಗಳ ಮಾಡಿಕೊಂಡು ನೀವೇ ಕೆಟ್ಟವರಾಗುತ್ತೀರ. ಇದು ಪೋಷಕರ ಮನಸ್ಸಿಗೂ ಸಹ ಬೇಜಾರಾಗುತ್ತದೆ.ಆದ್ದರಿಂದ ಎಚ್ಚರದಿಂದ ಇರಬೇಕು. ಮಂಗಳವಾರ ಮತ್ತು ಶನಿವಾರ ಆರೋಗ್ಯದ ದೃಷ್ಟಿಯಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.

 

 

ಸರಸ್ವತಿ ಮಂತ್ರವನ್ನು ವಿದ್ಯಾರ್ಥಿಗಳು ಆಗ ಬುದ್ಧಿ ಮತ್ತು ಜ್ಞಾನ ಹೆಚ್ಚಾಗುತ್ತದೆ. ಕಾಲು ಮತ್ತು ಹೊಟ್ಟೆಗೆ ಸಂಬಂಧಪಟ್ಟಂತೆ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಎಚ್ಚರಿಕೆಯಿಂದ ಇರಬೇಕಾದ ದಿನಗಳು.

ಈ ದಿನಾಂಕಗಳಲ್ಲಿ  30,29,21,20,2, 12,13 ವಿಶೇಷವಾಗಿ ಜಾಗ್ರತೆ ವಹಿಸಿ ಎಚ್ಚರವಾಗಿರಿ. ಶಾಂತಿಯನ್ನು ಕಾಪಾಡಿ ಈ ದಿನ ಹೆಚ್ಚಾಗಿ ಕೋಪದ ಕೈಗೆ ಬುದ್ಧಿ ಕೊಡಬೇಡಿ ಸ್ವಲ್ಪ ಜಾಗ್ರತೆ ಇರಲಿ

 

ಏಪ್ರಿಲ್ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top