fbpx
ಭವಿಷ್ಯ

ಏಪ್ರಿಲ್ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ಮಿಥುನ ರಾಶಿ ತಿಂಗಳ ಭವಿಷ್ಯ 

 

 

ಹಣಕಾಸು ಮತ್ತು ವ್ಯಾಪಾರ.

ಹಣಕಾಸು ಮತ್ತು ವ್ಯಾಪಾರಗಳಲ್ಲಿ ಗುರುವಿನ ಸ್ಥಾನವು ನಿಮಗೆ ಶುಭವನ್ನೇ  ಸೂಚಿಸುತ್ತಿದೆ. ಆದರೆ ವ್ಯಾಪಾರದ ವಿಷಯವಾಗಿ ಹಣ ಮಧ್ಯದಲ್ಲೇ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು .ಈ ತಿಂಗಳು  ಕೆಲಸಗಳು ನಿಮ್ಮನ್ನೇ ಹುಡುಕಿಕೊಂಡು ಬರುತ್ತವೆ. ಹಾಗೂ ಎಚ್ಚರದಿಂದ ನಡೆದುಕೊಳ್ಳುವುದು ಕೂಡ ಅಷ್ಟೇ ಅಗತ್ಯವಿದೆ. ನಿಮ್ಮ ಕೆಲಸ ಪೂರ್ತಿಯಾಗಿ ಆಗುವವರೆಗೂ ಯಾರಿಗೂ ಹೇಳಬೇಡಿ.ನಿಮ್ಮವರೇ ನಿಮಗೆ ಶತ್ರುಗಳಾದ ಸಾಧ್ಯತೆಯಿದೆ ಆದ್ದರಿಂದ ಸರಿಯಾಗಿ ಯೋಚಿಸಿ ಮೊದಲೇ ಯೋಜನೆಯನ್ನು ರೂಪಿಸಿ ನಂತರ ಮುಂದುವರಿಯಿರಿ.ಆದ್ದರಿಂದ ಈ ತಿಂಗಳು ನೀವು ಬಹಳ ಬುದ್ಧಿವಂತಿಕೆಯಿಂದ ವ್ಯವಹರಿಸಬೇಕು .

ಸಂಸಾರ ಹಾಗೂ ಸಂಬಂಧದಲ್ಲಿ.

ಪತಿ ಪತ್ನಿಯರ ವಿಷಯದಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಗುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಮಾತು ಹಿಡಿತದಲ್ಲಿ ಇರಲಿ. ಬೇರೆಯವರ ಕಿವಿ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ.ವಿನಾಕಾರಣ ಚರ್ಚೆ ಮತ್ತು ವಾದಗಳು ಬೇಡ .ಮಾತು ಹಿಡಿತದಲ್ಲಿ ಇರಲಿ. ಏಪ್ರಿಲ್ ಹತ್ತೊಂಬತ್ತರವರೆಗೆ ಹೆಣ್ಣು ಮಕ್ಕಳಿಗೆ ಶುಭ ಕಾಲವಾಗಿದೆ.

27,28,19,18,10,9 ಈ ದಿನಗಳಲ್ಲಿ ನೀವು ಬಹಳ ವಿಶೇಷವಾಗಿ ಶಾಂತಿಯಿಂದ ಇರಬೇಕು .ನಿಮ್ಮ ಮನಸ್ಸಿಗೆ ಬೇಜಾರಾಗುವ ಸಾಧ್ಯತೆ ಹೆಚ್ಚು  ಇದೆ. ಆದ್ದರಿಂದ ಮೊದಲೇ ಎಚ್ಚರದಿಂದ ಇದ್ದು, ಜಾಗ್ರತೆಯನ್ನು ವಹಿಸಿ ಈ ದಿನಗಳು ಶಾಂತಿಯಿಂದ ಇರಲು ಪ್ರಯತ್ನಿಸಿ.

 

 

ಆರೋಗ್ಯ ವಿಷಯಕ್ಕೆ ಬಂದರೆ ಯಾರು ಅಧಿಕ ರಕ್ತದೊತ್ತಡ, ಅಲರ್ಜಿ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅವರು ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗೂ ಆರೋಗ್ಯದ ವಿಷಯದಲ್ಲಿ ಈ ತಿಂಗಳು ವಿಶೇಷವಾಗಿ ಜಾಗ್ರತೆಯನ್ನು ವಹಿಸಬೇಕು .

ವಿದ್ಯಾರ್ಥಿಗಳಿಗೆ.

ಯಾರು ಅಕೌಂಟಿಂಗ್, ಕನ್ಸಲ್ಟೆನ್ಸಿ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅಥವಾ ಉನ್ನತ ಶಿಕ್ಷಣ ವಿಷಯಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ . ಅಂಥವರಿಗೆ ಏಪ್ರಿಲ್ ಹತ್ತೊಂಬತ್ತರವರೆಗೆ ಒಳ್ಳೆಯ ಸಮಯ ಇದೆ . ನಂತರ ದಿನಗಳಲ್ಲಿ ಸ್ವಲ್ಪ ಚಡಪಡಿಕೆಗಳು,ಓದುವುದಕ್ಕೆ  ಗಮನ ನೀಡದೇ ಇರುವುದು ಇಂತಹ ತೊಂದರೆಗಳನ್ನು ಎದುರಿಸಬೇಕಾಗುವುದು. ಪ್ರೀತಿ, ಪ್ರೇಮದ ವಿಷಯಗಳಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು. ಎಚ್ಚರವಾಗಿರಿ. ಬೇಡದ ಕೆಲಸಗಳಿಗೆ ಅನಗತ್ಯವಾಗಿ ತಲೆ ಕೆಡಿಸಿಕೊಳ್ಳಬೇಡಿ. ವಿದ್ಯಾಭ್ಯಾಸದ ಕಡೆಗೆ ಮಾತ್ರ ಗಮನ ವಹಿಸಿ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಪುಸ್ತಕ, ಪೆನ್ನು ಈ ರೀತಿಯ ವಸ್ತುಗಳನ್ನು ಅಗತ್ಯ ಇರುವವರಿಗೆ ದಾನ ಮಾಡಿ. ಇದರಿಂದ ವಿದ್ಯಾರ್ಥಿಗಳಿಗೆ ಯಶಸ್ಸು ಲಭಿಸುತ್ತದೆ.

 

 

ಏಪ್ರಿಲ್ ತಿಂಗಳಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಮತ್ತು ಕೆಲಸ ಮಾಡುವವರಿಗೆ ಕೆಲಸ ಬದಲಿಸಲು ನೀವು ಯೋಚನೆ ಮಾಡುತ್ತಿದ್ದರೆ ಇದು ಉತ್ತಮ ಸಮಯವಾಗಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಈ ತಿಂಗಳು ನಿಮಗೆ ಲಭಿಸಲಿದೆ. ಆದ್ದರಿಂದ ತಾಳ್ಮೆಯನ್ನು ಕಳೆದುಕೊಳ್ಳಬೇಡಿ .ಬೇಜಾರು ಮಾಡಿಕೊಳ್ಳಬೇಡಿ. ನಿಮ್ಮ ಪ್ರಯತ್ನಗಳನ್ನು ಮುಂದುವರಿಸಿರಿ .ಯಾರಿಗೆ ಸಹಾಯದ ಅವಶ್ಯಕತೆ ಇದೆ ಕಚೇರಿಗಳಲ್ಲಿ ಅಂತಹವರಿಗೆ ಮಾತ್ರ ಸಹಾಯ ಮಾಡಿ ವಿನಾಕಾರಣ ಬೇರೆಯವರಿಗೆ ನಿಮ್ಮ ಐಡಿಯಾಗಳನ್ನು ಹೇಳಿಕೊಳ್ಳಬೇಡಿ . ಅದರಿಂದ ಅವರು ಲಾಭವನ್ನು ಮಾಡಿಕೊಳ್ಳುತ್ತಾರೆ. ಅಂಥವರಿಂದ ನೀವು ದೂರವಿರಬೇಕು .ನಿಮ್ಮ ಕೆಲಸಗಳ ಬಗ್ಗೆ ಬೇರೆಯವರಿಗೆ ತಿಳಿಸಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top