fbpx
ಭವಿಷ್ಯ

ಏಪ್ರಿಲ್ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ಸಿಂಹ ರಾಶಿ ತಿಂಗಳ ಭವಿಷ್ಯ 

 

 

 

ವ್ಯಾಪಾರ ಹಾಗೂ ಹಣಕಾಸು.

ಭೂಮಿಗೆ ಸಂಬಂಧಪಟ್ಟ ಮತ್ತು ಮನೆ ಖರೀದಿ ವಿಷಯದಲ್ಲಿ ಲಾಭವಾಗಲಿದೆ. ನಿಮ್ಮ ಕೆಲಸಗಳು ಪೂರ್ಣವಾಗುವವರೆಗೂ ನೀವು ಯಾರಿಗೂ ನೀವು ಏನು ಕೆಲಸ ಮಾಡುತ್ತೇವೆ ಎಂದು ಯಾರಿಗೂ ಹೇಳಿಕೊಳ್ಳಬೇಡಿ. ಯಾರೂ ನಿಮ್ಮನ್ನು ನೋಡಿ ಹೊಟ್ಟೆ ಉರಿ ಪಡುತ್ತಾರೋ ನಿಮ್ಮ ಯಶಸ್ಸನ್ನು ನೋಡಿ ಅಸೂಯೆ ಪಡುತ್ತಾರೋ ಅಂಥವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಅಂತವರ ಬಗ್ಗೆ ಮಾತನಾಡಲು ಸಹ ಹೋಗಬೇಡಿ. ಯಾಕೆಂದರೆ ಅದರಿಂದ ನಿಮಗೆ ಕಿರಿಕಿರಿ ಉಂಟಾಗುತ್ತದೆ. ಈ ತಿಂಗಳು ಏನೇ ಖರೀದಿ ಮಾಡಬೇಕೆಂದರೂ ಸಹ ಟಿವಿ, ಎಲೆಕ್ಟ್ರಾನಿಕ್ಸ್ ಮತ್ತು ಒಂದಷ್ಟು ಒಳ್ಳೆಯ ವಸ್ತುಗಳನ್ನು ಮನೆಗೆ ಖರೀದಿ ಮಾಡಬೇಕೆಂದರೆ ಅಕ್ಷಯ ತೃತೀಯದ ದಿನವೇ ಖರೀದಿಸಿ.

ಬೇರೆ ದಿನಗಳಲ್ಲಿ ಖರೀದಿ ಮಾಡಬೇಡಿ. ನಿಮ್ಮ ಮೇಲೆ ನಿಮಗೆ ವಿಶ್ವಾಸ ಇರಬೇಕು. ಸ್ವಲ್ಪ ಈ ತಿಂಗಳು ಹೆಚ್ಚು ಮುಖ್ಯವಾಗಿ ಶ್ರಮಪಟ್ಟರೆ ಶುಕ್ರನ ಸಹಾಯದಿಂದ ಅಧಿಕ ಲಾಭವನ್ನು ನೀವು ನಿರೀಕ್ಷಿಸಬಹುದು. ವ್ಯಾಪಾರ ಹಣಕಾಸು ವಿಷಯವಾಗಿ ಸ್ವಲ್ಪ ವಿಳಂಬವಾಗಬಹುದು ತಾಳ್ಮೆ ಕಳೆದುಕೊಳ್ಳಬೇಡಿ. ಸ್ವಲ್ಪ ಜಾಗ್ರತೆ ವಹಿಸಿದಲ್ಲಿ ಮಹಿಳೆಯರು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು .

 

 

ಸಂಸಾರ ಹಾಗೂ ಸಂಬಂಧಗಳಲ್ಲಿ .

ಸಂಸಾರದಲ್ಲಿ ಸಿಂಹ ರಾಶಿಯ ಮಹಿಳೆಯರು ಸಣ್ಣಪುಟ್ಟ ಜಗಳವಾಗಬಹುದು. ಆದ್ದರಿಂದ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ನಿಮ್ಮ ಪತಿಯ ಮಾತಿಗೆ ಬೆಲೆ ಕೊಡಿ ,ಗೌರವ ಕೊಡಿ .ಏಪ್ರಿಲ್ ಹತ್ತೊಂಬತ್ತನೇ ತಾರೀಖಿನ ನಂತರ ನಿಮಗೆ ಉತ್ತಮ ಸಮಯ ಬರಲಿದೆ ಬಹಳ ಚೆನ್ನಾಗಿದೆ.

 

 

ವಿದ್ಯಾರ್ಥಿಗಳಿಗೆ .

ವಿದ್ಯಾರ್ಥಿಗಳು ಏಪ್ರಿಲ್ ಹದಿನಾಲ್ಕನೇ ತಾರೀಖಿನ ನಂತರ ಉತ್ತಮ ಸಮಯವಾಗಿದೆ. ಏಪ್ರಿಲ್ ಹತ್ತೊಂಬತ್ತರ ನಂತರ ಮತ್ತಷ್ಟು ಚೆನ್ನಾಗಿದ್ದು, ಆರೋಗ್ಯದ ಕಡೆಗೆ ಗಮನ ವಹಿಸಿ. ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗಳು ಇದ್ದರೆ ಎಚ್ಚರ ವಹಿಸಿ .

 

 

ಎಚ್ಚರಿಕೆಯಿಂದ ಇರಬೇಕಾದ ದಿನಗಳು.

14,15,22,23 ಈ ದಿನಗಳಲ್ಲಿ ಸ್ವಲ್ಪ ಹೆಚ್ಚಾಗಿ ಜಾಗ್ರತೆ ವಹಿಸಿ. ಸಮಾಧಾನದಿಂದ ತಾಳ್ಮೆಯಿಂದ ದಿನವನ್ನು ಕಳೆಯಿರಿ. ಕೆಲಸಕ್ಕೆ ಸಂಬಂಧಪಟ್ಟಂತೆ ಹತ್ತೊಂಬತ್ತನೇ ತಾರೀಖಿನ ನಂತರ ಒಳ್ಳೆಯ ಸಮಯವಾಗಿದೆ ಬೇರೆ ಬೇರೆ ಮೂಲಗಳಿಂದ ಒಳ್ಳೆಯ ಅವಕಾಶಗಳು ಬರುತ್ತವೆ. ಕೆಲಸ ಹುಡುಕುತ್ತಿರುವವರಿಗೆ ಈ ಸಮಯ ಉತ್ತಮವಾಗಿದೆ .

 

ಇತರ ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

ಏಪ್ರಿಲ್ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top