fbpx
ಸಮಾಚಾರ

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಖ್ಯಾತ ಸುದ್ದಿವಾಚಕ ರಂಗನಾಥ್ ಭಾರದ್ವಾಜ್ : ಸ್ಥಿತಿ ಗಂಭೀರ, ICU ನಲ್ಲಿ ಚಿಕಿತ್ಸೆ!

ಕನ್ನಡದ ಕೆಲವೇ ಕೆಲವು ಸ್ಪುರದ್ರೂಪಿ ವಾರ್ತಾ ವಾಚಕರಲ್ಲಿ ರಂಗನಾಥ್ ಭಾರದ್ವಾಜ್ ಕೂಡ ಒಬ್ಬರು , ಸದಾ ಒಂದಲ್ಲ ಒಂದು ನ್ಯೂಸ್ ಹೆಡ್ ಲೈನ್ನೊಂದಿಗೆ ಪ್ರೇಕ್ಷಕರ ಸುದ್ದಿ ಮಟ್ಟವನ್ನು ಹೆಚ್ಚಿಸುತ್ತಿದ್ದ ರಂಗನಾಥ್ ಭಾರದ್ವಾಜ್ ಇವತ್ತು ಈ ಸುದ್ದಿಯ ಹೆಡ್ ಲೈನ್ ಆಗಿದ್ದಾರೆ.

 

 

ರಂಗನಾಥ್ ಭಾರದ್ವಾಜ್ ಅವರ ಆರೋಗ್ಯದಲ್ಲಿ ಗಂಭೀರವಾದ ಏರುಪೇರು ಉಂಟಾಗಿದ್ದು ಅವರು ಅವರಿಗೆ ಮೆದುಳು ಸಂಬಂಧಿ ಕಾಯಿಲೆ ಒಂದು ಕಾಡುತ್ತಿದೆ ಇದರ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ .

ಇತ್ತೀಚೆಗೆ ಸುದ್ದಿ ಮಾಧ್ಯಮದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ರಂಗನಾಥ್ ಭಾರದ್ವಾಜ್ ಏಕೆಂದರೆ ಅವರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಆರೋಗ್ಯದ ಗಂಭೀರ ಸಮಸ್ಯೆ ಎದುರಾಗಿದೆ ಆದ್ದರಿಂದ ತಕ್ಷಣವೇ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ.

 

ಬ್ರೈನ್ ಅನ್ಯೂರಿಸಂ – Brain aneurysm

ಬ್ರೈನ್ ಅನ್ಯೂರಿಸಂ ಎಂಬ ಮೆದುಳಿನ ನರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ರಂಗನಾಥ್ ಅವರಿಗೆ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ ರವಿ ಮೋಹನ್ ಶಸ್ತ್ರಚಿಕಿತ್ಸೆ ನಡೆಸಿದ್ದು ಈಗ ರಂಗನಾಥ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ .

 

 

ಬ್ರೈನ್ ಅನ್ಯೂರಿಸಂ ಇದೊಂದು ನರ ಸಂಬಂಧಿ ಕಾಯಿಲೆಯಾಗಿದ್ದು ಮೆದುಳಿನ ನರಗಳ ಹಿಗ್ಗುವಿಕೆ ಹಾಗೂ ಕುಗ್ಗುವಿಕೆಯಿಂದ ನರಗಳಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ ರಕ್ತದ ಒತ್ತಡ ಹೆಚ್ಚಾಗುವ ಸಂದರ್ಭದಲ್ಲಿ ಈ ಸಮಸ್ಯೆ ಎದುರಾಗುತ್ತದೆ ರಕ್ತಸ್ರಾವ ನಿರಂತರವಾಗಿದ್ದರೆ ರಕ್ತ ತಲೆಯಲ್ಲಿ ಹೆಪ್ಪುಗಟ್ಟಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ , ಈ ಸಮಸ್ಯೆ ಮತ್ತಷ್ಟು ಹೆಚ್ಚಾದರೆ ಸ್ಟ್ರೋಕ್ ,ಮೆದುಳು ನಿಷ್ಕ್ರಿಯ ಗೊಳ್ಳುವುದು , ದೇಹದ ಕೆಲವು ಕ್ರಿಯೆಗಳು ನಿಂತು ಹೋಗುವುದು ,ಮಾತಾಡಲು ಸಾಧ್ಯವಾಗದಿರುವುದು, ಕಿವಿ ಕೇಳಿಸದೇ ಇರುವುದು ಇನ್ನೂ ಅನೇಕ ಅಪಾಯಗಳನ್ನು ಎದುರಿಸಬೇಕಾಗುತ್ತದೆ .

ಕೈಬೀಸಿ ಕರೆದಿತ್ತು ಟಿವಿ ನ್ಯೂಸ್ ಮಾಧ್ಯಮ :

 

 

ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top