fbpx
ಸಮಾಚಾರ

ರಂಗನಾಥ್ ಭಾರದ್ವಾಜ್’ಗೆ ಹಿಡಿ ಶಾಪ ಹಾಕಿದ್ದ ವಿಷ್ಣುದಾಸ ನಾಗೇಂದ್ರಾಚಾರ್ಯ: ಹಳೆ ವಿಡಿಯೋ ಈಗ ವೈರಲ್!

ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ದೊಡ್ಡ ದೊಡ್ಡ ಬ್ರೇಕಿಂಗ್ ಸುದ್ದಿಗಳನ್ನು ಬಿತ್ತರಿಸಿ ಆ ಸುದ್ದಿಗಳಂತೆ ಅನೇಕ ವಿಚಾರ-ವಿವಾದಗಳಿಗೆ ತಾವು ಕೂಡ ಅಷ್ಟೇ ಸುದ್ದಿಯಾಗಿ ಹೆಸರು ಮಾಡಿದವರು ಖ್ಯಾತ ಸುದ್ದಿವಾಚಕ ರಂಗನಾಥ್ ಭಾರದ್ವಾಜ್. ಪತ್ರಿಕೋದ್ಯಮವನ್ನು ಅಸಾಮಾನ್ಯವಾಗಿ ಕರಗತ ಮಾಡಿಕೊಂಡಿರುವ ರಂಗನಾಥ್ ಸ್ಟಾಡಿಯೋದಲ್ಲಿ ತಮ್ಮ ಎದುರು ಕುಂತಿರುವ ವ್ಯಕ್ತಿ ಎಂತವರೇ ಆದರೆ ತಮ್ಮ ಪ್ರಶ್ನೆಗಳಿಂದಲೇ ಅವರನ್ನು ಗೋಜಿಗಿ ಸಿಕ್ಕಿಸುವಂತಹ ಟ್ಯಾಲೆಂಟ್ ಹೊಂದಿರುವ ಕೆಲವೇ ಕೆಲವು ಕನ್ನಡದ ಸುದ್ದಿವಾಚಕರಲ್ಲಿ ಒಬ್ಬರು.

 

 

ರಂಗನಾಥ್ ಅವರು ಎಷ್ಟು ಸುದ್ದಿಮಾಡುತ್ತಾರೋ ಅಷ್ಟೇ ಸುದ್ದಿಯಾಗುತ್ತಿರುತ್ತಾರೆ. ಇವರು ಕೆಲವು ಅನವಶ್ಯಕ ವಿಚಾರಗಳಿಗಾಗಿ ವಿನಾಕಾರಣ ವಿವಾದಕ್ಕೀಡಾಗುವುದನ್ನೂ ಕೂಡ ಮೈಗೂಡಿಸಿಕೊಂಡು ಬಂದಿದ್ದಾರೆ. ಈಗ ಅಂತಹುದೇ ಘಟನೆಯೊಂದು ಬೆಳಕಿಗೆ ಬಂದಿದ್ದು ಅದಕ್ಕೆ ಸಂಭಂದಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದೆ. ಆದರೆ ಈ ವಿಚಾರ ಸುಮಾರು ಮೂರು ವರ್ಷಗಳ ಹಿಂದಿನದ್ದಾಗಿದ್ದು ಅದ್ಯಾಕೆ ಈಗ ವೈರಲ್ ಆಗಿದೆಯೋ ನಮಗಂತೂ ಗೊತ್ತಿಲ್ಲ.

 

 

ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮ ಮತ್ತು ಅದರಲ್ಲಿ ಪಾಲ್ಗೊಂಡಿದ್ದ ಪ್ರಗತಿಪರ ಚಿಂತಕ ಭಗವಾನ್ ವಿಚಾರವಾಗಿ ರಂಗನಾಥ್ ಭಾರದ್ವಾಜ್ ಮತ್ತು ವಿಷ್ಣುದಾಸ ನಾಗೇಂದ್ರಾಚಾರ್ಯ ಎಂಬುವವರ ನಡುವೆ ಮಾತಿನ ಚಕಮಕಿಯಾಗಿದ್ದು ಮಾತಿನ ಮಧ್ಯೆ ಇಬ್ಬರೂ ಕೂಡ ಏಕವಚನದಲ್ಲಿಯೇವೀರಾವೇಶದಿಂದ ಮಾತನಾಡಿದ್ದಾರೆ.. ಕೊನೆಯಲ್ಲಿ ನಾಗೇಂದ್ರಚಾರ್ಯ ರಂಗನಾಥ್ ಅವರಿಗೆ ಮನ ಬಂದಂತೆ ಹಿಡಿ ಶಾಪವನ್ನೇ ಹಾಕಿದ್ದಾರೆ. ಈ ವಿಷಯದ ಬಗ್ಗೆ ಹೆಚ್ಚು ತಿಳ್ಕೊಬೇಕಂದ್ರೆ ಈ ವಿಡಿಯೋದಲ್ಲಿನ ಮಾತುಗಳನ್ನು ಕೇಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top