fbpx
ಮನೋರಂಜನೆ

ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ ರೇಡಿಯೋ ಜಾಕಿ

ಚಿತ್ರರಂಗಕ್ಕೆ ಬಾಲನಟನಾಗಿ ಎಂಟ್ರಿಕೊಟ್ಟು ತನ್ನ ಅಗಾಧ ಪ್ರತಿಭೆಯಿಂದ ಸಿನಿರಸಿಕರ ಮನಗೆದ್ದು ಮುಂದೆ ನಟನಾಗಿ, ನಿರ್ದೇಶಕನಾಗಿ, ಕಿರುತೆರೆ ಧಾರಾವಾಹಿಗಳ ಸಾರಥಿಯಾಗಿ ಮತ್ತು ಜನಪ್ರಿಯ ರಿಯಾಲಿಟಿ ಶೋಗಳ ನಿರೂಪಕನಾಗಿ ಜನರನ್ನು ರಂಜಿಸುತ್ತಾ ಬಂದಿರುವ ಮಾಸ್ಟರ್ ಆನಂದ್ ಈಗ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಯಾವುದೇ ಕೆಲಸವನ್ನೇ ಮಾಡಿದರು ಪರಿಪೂರ್ಣ ಯತ್ನದಿಂದ ಅಚ್ಚುಕಟ್ಟಾಗಿ ಮಾಡೋ ಹವ್ಯಾಸವನ್ನು ಹೊಂದಿರುವ ಆನಂದ್ ಈಗ ರೇಡಿಯೋ ಜಾಕಿಯಾಗಲು ಮುಂದಾಗಿದ್ದಾರೆ.

 

 

‘ನಮ್ ರೇಡಿಯೋ’ದಲ್ಲಿ ಮೂಡಿ ಬರಲಿರುವ ನೂತನ ಕಾರ್ಯಕ್ರಮವೊಂದಕ್ಕೆ ಮಾಸ್ಟರ್ ಆನಂದ್ ಅವರು ಸಾರಥ್ಯ ವಹಿಸಲಿದ್ದು ಈ ಬಗೆ ಈಗಾಗಲೇ ಆನಂದ್ ಜೊತೆ ಮಾತುಕತೆ ಕೂಡ ನಡೆಸಲಾಗಿದೆ. ರೇಡಿಯೋ ಕಾರ್ಯಕ್ರಮವನ್ನು ನಡೆಸಿಕೊಡಲು ಸಂತೋಷದಿಂದಲೇ ಆನಂದ್ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ. ಆನಂದ್ ನಡೆಸಿಕೊಡಲಿರುವ ಈ ಶೋ ಪ್ರತಿ ದಿನ ಪ್ರಸಾರ ಆಗಲಿದ್ದು ಹೊಸ ಹೊಸ ಸಮಾಜಮುಖಿ ಸಂದೇಶವುಳ್ಳ ಕಾನ್ಸೆಪ್ಟ್ ಗಳನ್ನು ತರುತ್ತಿದೆ.

ಈ ಹಿಂದೆ ಹೊಸ ವರ್ಷದ ವಿಶೇಷವಾಗಿ ‘ನಮ್ ರೇಡಿಯೋ’ದಲ್ಲಿ ಆನಂದ್ ಅವರು ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದರು ಆ ಕಾರ್ಯಕ್ರಮಕ್ಕೆ ಎಲ್ಲಾ ಕಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ಹರಿದುಬಂದಿದ್ದೆ ಈಗ ಆನಂದ್ ಅವರಿಗೆ ಆರ್ಜೆ ಆಗಲು ಪ್ರೇರಣೆ ನೀಡಿದೆ ಎನ್ನುವುದು ಆನಂದ್ ಆಪ್ತವಲಯದ ಮಾತು. .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top