fbpx
ಸಿನಿಮಾ

‘ನಾನು ಯಾರನ್ನು ಮಂಚಕ್ಕೆ ಕರೆದಿಲ್ಲ , ಸುಮ್ನೆ ಏನ್ ಏನೋ ಹೇಳಿದ್ರೆ ಕೇಸ್ ಹಾಕ್ತಿನಿ ಹುಷಾರ್’ – ನಟಿಗೆ ವಾರ್ನಿಂಗ್ ಕೊಟ್ಟ ನಿರ್ದೇಶಕ

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ನಡೆಯುವ ಲೈಂಗಿಕ ದೌರ್ಜ್ಯನ್ಯದ ಬಗ್ಗೆ ಅನೇಕ ನಟಿಯರು ಮುಕ್ತವಾಗಿ ಈ ಬಗ್ಗೆ ಮಾತನಾಡಿದ್ದಾರೆ. ಟಾಲಿವುಡ್ ಚಿತ್ರರಂಗದಲ್ಲಿ ನಡೆಯುವ ಕಾಸ್ಟಿಂಗ್‌ ಕೌಂಚ್ ಬಗ್ಗೆ ಇತ್ತೀಚಿಗೆ ನಟಿ ಶ್ರೀ ರೆಡ್ಡಿ ಮಾತನಾಡಿದ್ದರು. ತೆಲುಗು ನಾಯಕಿಯರಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಕಿಡಿ ಕಾರಿದ್ದರು.

 

 

ಕಾಸ್ಟಿಂಗ್‌ ಕೌಂಚ್ ಬಗ್ಗೆ ನಟಿ ಶ್ರೀ ರೆಡ್ಡಿ ರವರು ಮಾತನಾಡಿದ್ದು ಹೆಸರು ಹೇಳದೆ ಕೆಲವರ ಬಗ್ಗೆ ಪರೋಕ್ಷವಾಗಿ ಬಹಿರಂಗಪಡಿಸಿದ್ದಾರೆ. ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು ನಿರ್ದೇಶಕರ ವಿರುದ್ಧ ಕಮೆಂಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಹೆಸರನ್ನು ನಮೂದಿಸದಿದ್ದರು ನಿರ್ದೇಶಕ ಶೇಖರ್ ಕಮ್ಮುಲ ರವರ ಬಗ್ಗೆ ಶ್ರೀ ರೆಡ್ಡಿ ಮಾತನಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

 

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ತನಗೆ ಮಹಿಳೆಯರ ಬಗ್ಗೆ ಪರ ಗೌರವ ಇರುವುದಾಗಿ, ಮಹಿಳೆಯರ ಸಮಾನತೆ ಹಾಗೂ ಸಬಲೀಕರಣಕ್ಕೆ ಮಹತ್ವ ನೀಡುವುದಾಗಿ ಹೇಳಿದ್ದಾರೆ. ನನ್ನ ಕೆಲಸದ ಬಗ್ಗೆ ಜನಕ್ಕೆ ಗೊತ್ತು. ನನ್ನ ಕಡೆ ಬೆರಳನ್ನು ಮಾಡಿ ತೋರಿಸುವ ಜನರನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಖಡಕ್ ಸಂದೇಶ್ ರವಾನೆ ಮಾಡಿದ್ದಾರೆ.ನಿನ್ನೆ ಮಾಡಿರುವ ಕಾಮೆಂಟ್ ಡಿಲೀಟ್ ಮಾಡಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಗೆ ನೀಡಿದ್ದಾರೆ.

 

 

ಈಗ ಈ ಘಟನೆ ಕುತೂಹಲಕ್ಕೆ ನಾಂದಿ ಹಾಡಿದ್ದು. ಮುಂದೆ ಇವರಬ್ಬರು ಹೇಗೆ ನಡೆ ಇಡಲಿದ್ದಾರೆ ಎಂಬುದನ್ನು ಕಾಡು ನೋಡಬೇಕಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top