fbpx
ಐಪಿಎಲ್

ಅಂತೂ ಇಂತೂ ವಿರಾಟ್ ಕೊಹ್ಲಿ ಬಾಯಲ್ಲೂ ಬಂತು “ಈ ಸಲ ಕಪ್ ನಮ್ದೇ”

“ಈ ಸಲ ಕಪ್ ನಮ್ದೆ” ಈ ಸ್ಲೋಗನ್ ಸೋಷಿಯಲ್ ಮೀಡಿಯಾ ಬಳಸೋ ಪ್ರತಿಯೊಬ್ಬರಿಗೂ ಈಗ ಚಿರಪರಿಚಿತವಾಗಿರುತ್ತದೆ.. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹಾವಳಿ ಇಡುತ್ತಿರುವ ನಾಲ್ಕು ಪದಗಳವು.. ಈ ವರ್ಷದ IPLಗೆ ಈಗಾಗಲೇ ದಿನಗಣನೆ ಶುರುವಾಗಿದ್ದು ಪ್ರತಿ ತಂಡಗಳು ಟೂರ್ನಿಗಾಗಿ ಸಕಲ ಸಿದ್ಧತೆ ನಡೆಸುತ್ತಿವೆ., ತಂಡಗಳಿಗಿಂತ ಅವುಗಳ ಅಭಿಮಾನಿಗಳಲ್ಲೇ ಹೆಚ್ಚಿನ ಉತ್ಸಾಹ ವ್ಯಕ್ತವಾಗುತ್ತಿದೆ.. ಅದರಲ್ಲೂ ಬೆಂಗಳೂರಿನ ನಮ್ಮ ಆರ್‌ಸಿಬಿ ತಂಡದ ಅಭಿಮಾನಿಗಳಂತೂ ಈ ಭಾರಿ ನಾವು ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ಅಚಲ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ.

 

 

ಐಪಿಎಲ್ ಪ್ರಾರಂಭಗೊಂಡು ಹತ್ತು ವರ್ಷಗಳೇ ಕಳೆದಿದ್ದರೂ ಇನ್ನು ಒಂದು ಭಾರಿಯೂ ಕೂಡ ಬೆಂಗಳೂರು ತಂಡ ಕಿರೀಟವನ್ನು ಮುಡಿಗೇರಿಸಿಕೊಂಡಿಲ್ಲ ಹಾಗಾಗಿ ಈ ಭಾರಿ ಕಪ್ ಗೆಲ್ಲಬೇಕು ಎಂದು ಪಣತೊಟ್ಟಿದೆ. ಇದಕ್ಕೆ ಬೆಂಬಲವಂತೆ ಅಭಿಮಾನಿಗಳಂತೂ ಡಬಲ್ ಉತ್ಸಾಹದಲ್ಲಿ ತಮ್ಮ ನೆಚ್ಚಿನ ತಂಡಕ್ಕೆ ಈಗಿನಿಂದಲೇ ಬೆಂಬಲ ಸೂಚಿಸುತ್ತಿದ್ದಾರೆ ಇದರಂತೆ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ಯಾವುದೇ ಪೋಸ್ಟ್ ಗೂ ‘ಈ ಸಲ ಕಪ್ ನಮ್ದೆ’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಕಾಮೆಂಟ್ ಮಾಡುತ್ತಿದ್ದಾರೆ.

 

 

ಚಿತ್ರರಂಗದವರಿಂದ ಹಿಡಿದು ಕೆಲ ಆರ್ಸಿಬಿ ತಂಡದವರ ಬಾಯಲ್ಲೂ ಬಂದಿದ್ದ ಈ ಸಲ ಕಪ್ ನಮ್ದೇ ಅನ್ನೋ ಸಾಲು ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಅವರ ಬಾಯಲ್ಲೂ ಬರಬೇಕು ಎಂದು ತಂಡದ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಅಭಿಮಾನಿಗಳ ಆ ಆಸೆಯನ್ನು ವಿರಾಟ್ ಕೊಹ್ಲಿ ಕೊನೆಗೂ ಈಡೇರಿಸಿದ್ದಾರೆ. ನೆನ್ನೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ ತಂಡದ ಪ್ರಿಪರೇಷನ್ ಬಗ್ಗೆ ಮಾತನಾಡಿದರು. ಈ ವೇಳೆ ಕೊನೆಯಲ್ಲಿ ಅಲ್ಲಿದ್ದ ಆರ್ಸಿಬಿ ಅಭಿಮಾನಿಯೊಬ್ಬ “ಈ ಸಲ ಕಪ್ ನಮ್ದೇ” ಎಂದು ಹೇಳಿದಾಗ ವಿರಾಟ್ ಕೊಹ್ಲಿ ಕೂಡ ನಗುತ್ತ “ಈ ಸಲ ಕಪ್ ನಮ್ದೇ “ಅಂತ ಹೇಳಿದ್ದಾರೆ

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದ್ದು ನೀವು ಒಮ್ಮೆ ನೋಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top