fbpx
ದೇವರು

ಮದುವೆಯಾದ ನಂತ್ರ ವಧು ವರರಿಗೆ ಅರುಂಧತಿ ನಕ್ಷತ್ರವನ್ನು ತೋರಿಸುವ ಮುಂಚೆ ನೆಲಬಾಗಿದ ಗಿಡ ಹಾಸಿ ಅದರ ಮೇಲೆ ದಂಪತಿಗಳನ್ನು ನಿಲ್ಲಿಸುತ್ತಿದ್ದರ ಸಂಪ್ರದಾಯದ ಅರ್ಥ ಗೊತ್ತಾ

ತಾಳಿ ಕಟ್ಟಿದ ನಂತರ ಮಹಾತ್ಮರಿಂದ ಅಕ್ಷರಗಳನ್ನು ಹಾಸಿಕೊಂಡು ನಂತರ ತಲಂಬರಗರಗಳನ್ನು ಶಿರಸ್ಸುಗಳ  ಮೇಲೆ ಸುರಿದುಕೊಂಡು ನಂತರ, ಕೊನೆಯದಾಗಿ ಅರುಂಧತಿ ನಕ್ಷತ್ರವನ್ನು ತೋರಿಸುವುದು ಇದೆ . ಈ ಆಚರಣೆ ಸಹ ಮದುವೆಗಳಲ್ಲಿ ಮುಖ್ಯವಾದ ಕೊನೆಯ ಸಂಪ್ರದಾಯವಾಗಿ ಇದೆ. ಅದನ್ನು ಕುರಿತು ಸ್ವಲ್ಪ ವಿವರಿಸಿಕೊಂಡು ನೋಡುವುದಾದರೆ.

 

 

ಚಂದ್ರನು ಜ್ಞಾನ ಚಿಹ್ನೆಯಾದರೆ ,ನಕ್ಷತ್ರ  ಮೋಕ್ಷದ ಚಿಹ್ನೆಯಾಗಿದೆ. ಸೂರ್ಯನು ಚಂದ್ರನು ಉಳಿದ ಕೆಲವು ನಕ್ಷತ್ರಗಳು ಮಾತ್ರ  ನಮಗೆ ಪೂರ್ವ ಪಶ್ಚಿಮಗಳಾಗಿ ಇದ್ದಾರೆ. ಆದ್ದರಿಂದ ಹಗಲು ರಾತ್ರಿಗಳಲ್ಲಿ ಕೆಲವು ಕಾಣಿಸುತ್ತವೆ , ಕೆಲವು ಕಾಣಿಸದೆ ಹೋಗುವುದು ನಡೆಯುತ್ತದೆ.ಉತ್ತರ ದಕ್ಷಿಣದ ಕಡೆ ಇರುವ ನಕ್ಷತ್ರಗಳು ಮಾತ್ರ ನಮಗೆ ಯಾವಾಗಲೂ ಕಾಣಿಸುತ್ತಲೇ ಇರುತ್ತವೆ. ಹಾಗೆಯೇ ಉತ್ತರ ಕಡೆ ಯಾವಾಗಲೂ ಕಾಣಿಸುವ ನಕ್ಷತ್ರಗಳಲ್ಲಿ ಅತಿ ದೊಡ್ಡ ನಕ್ಷತ್ರ ಅರುಂಧತಿ ನಕ್ಷತ್ರ.

ಅರುಂಧತಿ ನಕ್ಷತ್ರ  ರಾತ್ರಿ ಮತ್ತು ಹಗಲು ಒಂದೇ ಕೋನದಲ್ಲಿ ಇದ್ದು, ಕಾಣಿಸುತ್ತಲೇ ಇದೆ. ಹಗಲಿನಲ್ಲಿ ಸೂರ್ಯನ ಬೆಳಕಿನ ಮುಂದೆ ಅದು ನಮ್ಮ ದೃಷ್ಟಿಗೆ ಕಾಣಿಸದಂತೆ ಹೋದರೂ, ಅರುಂಧತಿ ನಕ್ಷತ್ರ ನಿರಂತರ ಹಗಲು, ರಾತ್ರಿ ಉತ್ತರ ಕೋನದಲ್ಲಿ ಇದೆ. ಪೂರ್ವ ಕಾಲದಲ್ಲಿ ರಾತ್ರಿಯ ವೇಳೆ ಮದುವೆ ನಡೆದರೆ ನವ ದಂಪತಿಗಳಿಗೆ ಆ ನಕ್ಷತ್ರವನ್ನು ತೋರಿಸುತ್ತಿದ್ದರು .

ಒಂದು ವೇಳೆ ಹಗಲಿನಲ್ಲಿ ಮದುವೆ ನಡೆದರೆ ಆ ನಕ್ಷತ್ರ ಕಾಣಿಸುವುದಿಲ್ಲ. ಆದ್ದರಿಂದ ಆ ಕಾಲದಲ್ಲಿ ನೆಲ ಬಾಗಿದ (ನೆಲವೆಂಪಲ್ಲಿ) ಗಿಡವನ್ನು ತರಿಸಿ, ಭೂಮಿ ಮೇಲೆ ಹಾಸಿ, ಅದರ ಮೇಲೆ ದಂಪತಿಗಳನ್ನು ನಿಲ್ಲಿಸಿ ನಕ್ಷತ್ರವನ್ನು ತೋರಿಸುತ್ತಿದ್ದರು. ನೆಲ ಬಾಗಿದ ಗಿಡವನ್ನು ತುಳಿದು ನಿಂತುಕೊಂಡರೆ ಸೂರ್ಯ ರಶ್ಮಿ ಕಾಣಿಸದಂತಾಗಿ ರಾತ್ರಿಯಂತೆಯೇ ಇದ್ದು ಹಗಲಿನಲ್ಲಿಯೇ ನಕ್ಷತ್ರಗಳು ಕಾಣಿಸುತ್ತವೆ.

ಮದುವೆಯ ಅರ್ಥ ಏನು ? ಮದುವೆಯ ನಂತರ ವಧು ವರರು ಅರುಂಧತಿ ನಕ್ಷತ್ರವನ್ನು ತೋರಿಸುವುದರ ಹಿಂದಿರುವ ಕಾರಣವೇನು ?

 

ಆದ್ದರಿಂದ ಪೂರ್ವಕಾಲದಲ್ಲಿ ನೆಲ ಬಾಗಿದ ಗಿಡವನ್ನು ಮದುವೆಗಳಲ್ಲಿ ತರಿಸುತ್ತಿದ್ದರೂ, ಹಾಗೆ ತೋರಿಸುವುದರಿಂದ ಪ್ರಯೋಜನವೇನೆಂದು  ಕೆಲವರಿಗೆ ಸಂಶಯ ಬರಬಹುದು ಅದಕ್ಕೆ ಸಮಾಧಾನವನ್ನು ಕೆಳಗೆ ನೋಡೋಣ.

ಮದುವೆ ಆಚರಣೆಯಲ್ಲಿ ಭೂಮಿಯ ಮೇಲೆ ಹುಟ್ಟಿದ ಹೆಣ್ಣು, ಗಂಡು ಎಲ್ಲರೂ ದೈವ ಸಂತತಿ ಎಂದು ಮಗಳು ಮಗನೆಂದು ಕರೆಯುವುದರ ಮೂಲಕ ತಿಳಿದುಕೊಂಡವರು, ಆ ದಿನದಿಂದ ಜ್ಞಾನ ನೇತ್ರದ  ದೃಷ್ಟಿ ಹೊಂದಿರುತ್ತೇವೆಂದು. ಬಾಸಿಂಗ ಕಟ್ಟಿದವರು, ಜ್ಞಾನ ದೃಷ್ಟಿ ಉಂಟಾಗಿ ಮಾಯೆವೊಂದರ ಬಂಧಗಳನ್ನು ಕಿತ್ತು ಹಾಕುತ್ತೇನೆಂದು,ಮಾಯೆಯೊಂದಿಗೆ ಹೋರಾಡುವ ಸೈನಿಕನಂತೆ ಇರುತ್ತೇನೆಂದು . ಖಡ್ಗವನ್ನು ಹಿಡಿದವರು , ಮೊದಲ ಬಾರಿ ಮಹಾತ್ಮರಿಂದ ಅಕ್ಷತೆಗಳನ್ನು ಹಾಕಿಸಿಕೊಂಡು ಜ್ಞಾನಾಗ್ನಿಯನ್ನು ಬೆಳೆಸಿಕೊಂಡವರು. ಆ ಜ್ಞಾನಾಗ್ನಿ ನಂದಿ ಹೋಗದಂತೆ ಸತಿ ಪತಿಯಿಂದ ,ಪತಿ ಸತಿಯಿಂದ ಹೆಚ್ಚಿಸಿಕೊಳ್ಳುವೆವೆಂದು ತಲಂಬರಗಳನ್ನು ತಲೆ ಮೇಲೆ ಸುರಿದುಕೊಂಡು ತೋರಿಸಿ ಅವರು ಕೊನೆಗೆ ನಾವು ಸೇರುವ ಮೋಕ್ಷ ಪದವಿ ಇದೆ ಎಂದು ನಮಗೆ ತಿಳಿಸುವಂತೆ ಕೊನೆಯದಾಗಿ ನಕ್ಷತ್ರವನ್ನು ನೋಡುತ್ತಿದ್ದಾರೆ.

 

 

ಈ ವಿಧವಾಗಿ ಜೀವಿಯು ದೈವದಿಂದ ಬೇರೆಯಾಗಿದ್ದನೆಂದು ಆತನು ಪುನಃ ದೈವವನ್ನು ಸೇರಿ ಜನ್ಮ ರಾಹಿತ್ಯ ಮಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳನ್ನು ಆಚರಣೆಯಲ್ಲಿ ಭಾವಯುಕ್ತವಾಗಿ ತೋರಿಸುವುದೇ ಮದುವೆ ಆಚರಣೆಯ ಒಂದು ಅರ್ಥ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top