fbpx
ಸಿನಿಮಾ

ಅಮಾಯಕ ಕಾರ್ ಡ್ರೈವರ್ ಮೇಲೆ ಸುಖಾಸುಮ್ಮನೆ ಕಂಪ್ಲೇಂಟ್ ಕೊಟ್ಟ ಮ್ಯೂಸಿಕ್ ಡೈರೆಕ್ಟರ್ ಇಳಯರಾಜ ಮಗ ಯುವನ್

ಕಾಲಿವುಡ್ ಚಿತ್ರರಂಗದ ಸಂಗೀತ್ ನಿರ್ದೇಶಕರಾಗಿರುವ ಇಳಯ ರಾಜಾ ಇವರ ಮಗನಾದ ಶಂಕರ್‌‌ ರಾಜ್‌ ಅವರ ಆಡಿ ಕಾರು ಕಳ್ಳತನಗವಾಗಿತ್ತು. ಇದರ ಬಗ್ಗೆ ಯುವನ್‌ ಶಂಕರ್‌‌ ರಾಜಾ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎನ್ನಲಾಗಿದೆ. ತಾವು ನೀಡಿರುವ ದೂರಿನಲ್ಲಿ ಕಾರ್ ಚಾಲಕ ನವಾಜ್ ಖಾನ್‌ ಮೇಲೆ ಕೂಡ ಅನುಮಾನ ವ್ಯಕ್ತ ಪಡಿಸಿದ್ದರು ಯುವನ್.

 

 

ಯುವನ್‌ ಶಂಕರ್‌‌ ರಾಜಾ ನೀಡಿದ ದೂರಿನ ಮೇಲೆ ತನಿಖೆ ಆರಂಭ ಮಾಡಿದ ಪೊಲೀಸರು ಕೂಡಲೇ ಕಾರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಯುವನ್ ಶಂಕರ್ ವಾಸ ಮಾಡಿರುವ ಅಪಾರ್ಟ್ ಮೆಂಟ್ ನಲ್ಲೆ ಕಾರ್ ಪತ್ತೆಯಾಗಿದೆ ಎನ್ನಲಾಗಿದೆ. ಕಾರ್ ನಲ್ಲಿ ನಿದ್ದೆ ಮಾಡುತ್ತಿದ್ದ ಕಾರಿನ ಡ್ರೈವರ್ ನವಾಜ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

 

 

ನಿಜವಾಗಿ ನಡೆದ ಘಟನೆ ಏನು:
ಕಾರನ್ನೇ ದಿನಾಲೂ ಒಂದೇ ಜಾಗದಲ್ಲಿ ಪಾರ್ಕ್ ಮಾಡಲಾಗುತ್ತಿತ್ತು. ಆದರೆ ಅಂದು ಬೇರೆ ಜಾಗದಲ್ಲಿ ಕಾರ್ ಪಾರ್ಕ್ ಮಾಡಲಾಗಿತ್ತು. ಕಾರ್ ಕಾಣದಿದ್ದಾಗ ಗಾಬರಿಗೊಂಡ ಯುವನ್ ಡ್ರೈವರ್ ಗೆ ಕಾಲ್ ಮಾಡುವ ಬದಲು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ ಎನ್ನಲಾಗಿದೆ. ಈಗ ವಾಸ್ತವ ಅಂಶ ಅರಿತ ಬಳಿಕ ತಾವು ನೀಡಿರುವ ದೂರು ವಾಪಸ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top