fbpx
ಸಮಾಚಾರ

ಸಲ್ಲು ಕೊಂದಿದ್ದ ಕೃಷ್ಣಮೃಗ ಕೇವಲ ಪ್ರಾಣಿ ಮಾತ್ರವಲ್ಲ ಒಂದು ಸಮುದಾಯದ ದೇವರನ್ನ! ಇದನ್ನ ಓದಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಾ

ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್‌ ಜೈಲುಪಾಲಾಗಿದ್ದು ಜೋಧಪುರ ಕೋರ್ಟ್ ಆತನಿಗೆ ಐದುವರ್ಷಗಳ ಸಜೆ ನೀಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ 5 ವರ್ಷಗಳ ಕಾಲ ಜೈಲು ಶಿಕ್ಷೆ ಜೊತೆಗೆ 1oಸಾವಿರ ರೂ.ದಂಡ ವಿಧಿಸಲಾಗಿದೆ. ಸಲ್ಲುಗೆ ಜೈಲು ಶಿಕ್ಷೆ ಆಗಿರುವುದರ ಹಿಂದೆ ಕೃಷ್ಣಮೃಗಗಳಲ್ಲಿ ದೇವರನ್ನು ಕಾಣುವ ರಾಜಸ್ಥಾನದ ಕಂಕಣಿ ಗ್ರಾಮದ ಬಿಷ್ಣೋಯಿ ಸಮುದಾಯದ ಶ್ರಮ ಬಹುಪಾಲಿದೆ.

 

 

ಕೃಷ್ಣಮೃಗಗಳಲ್ಲಿ ಪೂಜ್ಯ ಭಾವ ಕಾಣುವ, ಅವುಗಳನ್ನು ಸ್ವಂತ ಮಕ್ಕಳಂತೆ ಅಕ್ಕರೆಯಿಂದ ಪೋಷಿಸುವ ಬಿಶ್ನೋವಿ ಸಮುದಾಯವನ್ನು ಕೆರಳಿಸುವಂತೆ ಮಾಡಿತು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕೆಂದು ಆಗ್ರಹಿಸಿ ನಡೆಸಿದ 20 ವರ್ಷದ ಕಾನೂನು ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ.. ಈ ಹೋರಾಟವನ್ನ ಮಾಡುತ್ತಿರುವ ಬಿಷ್ನೋಯಿ ಸಮುದಾಯದ ಹಿನ್ನಲೆಯನ್ನು ಕೇಳಿದರೆ ನೀವು ನಿಜಕ್ಕೂ ಅಚ್ಚರಿಯ ಜೊತೆಗೆ ಹೆಮ್ಮೆಯೂ ಪಡಲಿದ್ದಿರಿ.

 

ಈ ಬಿಷ್ನೋಯಿ ಸಮುದಾಯವು ಹೆಚ್ಚಾಗಿ ರಾಜಸ್ತಾನದ ಥಾರ್ ಮರುಭೂಮಿಯ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಸಮುದಾಯದವರಿಗೆ ಕೃಷ್ಣಮೃಗ ಎಂದರೆ ದೇವರಿದ್ದಂತೆ. ಮೂಲತಃ ಪ್ರಕೃತಿಯ ಆರಾಧಕರಾಗಿರುವ ಬಿಷ್ನೋಯಿಗಳು ಪ್ರಾಣಿಗಳಲ್ಲಿ ದೇವರಂತೆ ಕಾಣುತ್ತಾರೆ. ಅದರಲ್ಲಿ ಕೃಷ್ಣಮೃಗಕ್ಕೆ ವಿಶೇಷ ಸ್ಥಾನಮಾನ. ಆ ಸಮುದಾಯದ ಜನರ ನಂಬಿಕೆಯ ಪ್ರಕಾರ ಕೃಷ್ಣಮೃಗ ಅವರ ಮನೆಯ ಸ್ವಂತ ಮಗನಂತೆ. ಈ ಸಮುದಾಯದ ಮಹಿಳೆಯರು ತಮ್ಮ ಮಗುವಿಗೆ ಕುಡಿಸುವ ಎದೆ ಹಾಲಿನಲ್ಲಿ ಕೃಷ್ಣಮೃಗಕ್ಕೂ ಮೀಸಲಿಟ್ಟು ಕೃಷ್ಣಮೃಗದ ಮರಿಗಳಿಗೂ ಸ್ತನಪಾನ ಮಾಡಿಸುತ್ತಾರೆ. ಅಚ್ಚರಿ ಎನಿಸಿದರೂ ಇದು ಸತ್ಯ.

 

 

ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ಹೇಗೆ ಲಾಲನೆ ಪಾಲನೆ ಮಾಡುತ್ತಾರೋ ಹಾಗೆಯೆ ಕೃಷ್ಣಮೃಗವನ್ನೂ ಕೂಡ ಪೋಷಣೆ ಮಾಡುತ್ತಾರೆ. ಅವಕ್ಕೆ ತಮ್ಮ ಎದೆ ಹಾಲುಣಿಸಿ ಜೋಳಿಗೆಯಲ್ಲಿ ಮಕ್ಕಳನ್ನು ತೂಗುವ ಹಾಗೆ ಕೃಷ್ಣಮೃಗದ ಮರಿಗಳನ್ನೂ ತೂಗಿ ಲಾಲಿ ಹಾಡಿ ತೂಗಿ ಮಲಗಿಸುತ್ತಾರೆ. ಕ್ರೂಸ್ನಮೃಗದಲ್ಲಿ ಸಾಕ್ಷಾತ್ ದೇವರನ್ನೇ ನೋಡುವ ಈ ಜನಾಂಗದವರು ಕೃಷ್ಣಮೃಗವನ್ನು ತಮ್ಮ ಸ್ವಂತ ಮಕ್ಕಳಂತೆ ಬೆಳೆಸುತ್ತಾರೆ. ಮಕ್ಕಳಿಗೆ ಸಲ್ಲುವ ಎಲ್ಲ ಸವಲತ್ತುಗಳೂ ಕೂಡ ಕೃಷ್ಣ ಮೃಗಕ್ಕೆ ಸಲ್ಲುತ್ತದೆ.

 

 

ಹೇಗೆ ಕೆಲವರು ದನವನ್ನು ದೇವರ ರೂಪದಲ್ಲಿ ನೋಡುತ್ತಾರೋ ಅದಕ್ಕಿಂತ ಹೆಚ್ಚಾಗಿ ಕೃಷ್ಣಮೃಗದೊಂದಿಗೆ ಧಾರ್ಮಿಕ ಭಾವನೆಯಾಗಿ ಈ ಸಮುದಾಯದವರು ಹೊಂದಿದ್ದಾರೆ. ಇಂತ ಪೂಜ್ಯನೀಯ ಪ್ರಾಣಿಯನ್ನು ಸಲ್ಮಾನ್​ ಖಾನ್​ ಕೊಂಡದ್ದು ಮಾತ್ರ ಆ ಸಮುದಾಯಕ್ಕೆ ಕೋಪವನ್ನು ತರಿಸಿತ್ತು. ಸಲ್ಮಾನ್ ಖಾನ್ ಸಾಯಿಸಿರೋದು ಕೇವಲ ಒಂದು ಪ್ರಾಣಿಯನ್ನೆಲ್ಲಾ ಆತ ಹತ್ಯೆ ಮಾಡಿರೋದು ನಮ್ಮ ದೇವರ, ಧಾರ್ಮಿಕ ನಂಬಿಕೆಗಳ ಹಾಗೂ ನಮ್ಮ ಮನೆಯ ಮಕ್ಕಳನ್ನು” ಎಂದು ಹೇಳಿಯುತ್ತಾರೆ ಬಿಷ್ಣೋಯಿ ಸಮುದಾಯದವರು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top