fbpx
ಸಿನಿಮಾ

ಶ್ರೀದೇವಿ ತರ ಇದ್ದಾ ಶ್ರೀದೇವಿ ರೀತಿಲೇ ನಿಗೂಢವಾಗಿ ಸತ್ತ ಹೀರೋಯಿನ್ ದಿವ್ಯ ಭಾರತಿ 25 ನೇ ತಿಥಿ

ನಿನ್ನೆ ಬಾಲಿವುಡ್ ನಟಿ ದಿವ್ಯ ಭಾರತಿ ಅವರ ಪುಣ್ಯ ತಿಥಿ. ಇಂದಿಗೆ ಅವರು ನಮ್ಮನ್ನೆಲ್ಲ ಅಗಲಿ 25 ವರ್ಷ ಕಳೆದಿವೆ. ದಿವ್ಯ ಭಾರತಿ ಬಾಲಿವುಡ್‌‌‌ಗೆ ಕಾಲಿಟ್ಟಾಗಲೇ ಆಕೆ ಶ್ರೀದೇವಿಯ ಪ್ರತಿರೂಪ ಎಂದು ಎಲ್ಲರಿಗೂ ಆಕೆಗೆ ಕಾಂಪ್ಲಿಮೆಂಟ್ಸ್ ನೀಡುತ್ತಿದ್ದರು.

 

 

ಬಾಲಿವುಡ್ ನಟಿ ದಿವ್ಯ ಓಂ ಪ್ರಕಾಶ್ ಭಾರತಿ 25.02.1974 ರಲ್ಲಿ ಮುಂಬೈನಲ್ಲಿ ಜನಿಸಿದರು. ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ 22 ಚಿತ್ರಗಳಲ್ಲಿ ಅಭಿನಯ ಮಾಡಿದ್ದ ಈಕೆ ಸಾಜಿದ್ ನಾಡಿಯಾವಾಲ ಅವರನ್ನು ವಿವಾಹವಾಗಿದ್ದರು. ಬೊಬ್ಬಿಲಿ ರಾಜ, ರೌಡಿ ಅಲ್ಲಡು, ಶೋಲಾ ಔರ್ ಶಬ್ನಂ ಮುಂತಾದ ಯಶಸ್ವಿ ಸಿನಿಮಾದಲ್ಲಿ ನಟಿಸಿದ್ದ ದಿವ್ಯ ಭಾರತಿ 05.04.1993ರಲ್ಲಿ (19ನೇ ವಯಸ್ಸಿನಲ್ಲಿ) ಸಾವನ್ನಪ್ಪಿದರು. ಈಕೆಯ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವುದು ಈಗಿನವರೆಗೂ ಸ್ಪಷ್ಟನೆ ಸಿಕ್ಕಿಲ್ಲ.

 

ದಿವ್ಯ ಭಾರತಿ ಅವರು 1993 ಏಪ್ರಿಲ್ 5 ರಂದು ರಾತ್ರಿ 11 ಗಂಟೆ ಸಮಯಕ್ಕೆ ಮುಂಬೈ ನಗರದ ವರ್ಸೋವಾದ ‘ತುಳಸಿ ಬಿಲ್ಡಿಂಗ್ಸ್ ‘ ಅಪಾರ್ಟ್‌ಮೆಂಟ್‌‌‌‌ನ 5ನೇ ಮಹಡಿಯಿಂದ ಆಕಸ್ಮಿಕವಾದ ಬಿದ್ದ ದಿವ್ಯಳನ್ನು ಅಕ್ಕ ಪಕ್ಕದ ಮನೆಯವರು ಆಸ್ಪತ್ರೆಗೆ ಕೂಡಲೇ ದಾಖಲಿಸಿದರು ತಲೆ ಹಿಂಭಾಗಕ್ಕೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದರು. ಈ ಕಹಿ ಘಟನೆ ನಡೆದು ಈಗ 25 ವರ್ಷಗಳಾಗಿವೆ, ಅವರ ನಟನೆ ಮಾತ್ರ ಸಿನಿರಸಿಕರ ಮನಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top