fbpx
ಸಮಾಚಾರ

ಮೊಬೈಲ್ ನಲ್ಲೆ ಐಪಿಎಲ್ ನೋಡೋರ್ಗೆ ಹಬ್ಬ: ಜಿಯೋ 2 ರೂಪಾಯಿಗೆ 1 ಜಿಬಿ ಡೇಟಾ

ಇಂಡಿಯನ್ ಪ್ರಿಮಿರ್ ಲೀಗ್ ಪ್ರಾರಂಭಕ್ಕೆ ಕ್ಶಣಗಣನೆ ಆರಂಭವಾಗಿದೆ. ಎಲ್ಲ ತಂಡದ ಅಭಿಮಾನಿಗಳು ಐಪಿಎಲ್ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಮೊಬೈಲ್ ನಲ್ಲಿ ಕ್ರಿಕೆಟ್ ಪಂದ್ಯ ಲೈವ್ ನೋಡುವ ವೀಕ್ಷಕರಿಗಾಗಿಯೇ ಜಿಯೋ ಇದೀಗ ಅತ್ಯುತ್ತಮ ಆಫರ್ ನೀಡುತ್ತಿದೆ. ಮೊಬೈಲ್ ಆಪ್ ನಲ್ಲೆ ಐಪಿಎಲ್ ವೀಕ್ಷಣೆಗೆ ಯೋಜನೆಯೊಂದನ್ನು ರೂಪಿಸಿದೆ.

 

ಜಿಯೋ ಆಪ್ ಮೂಲಕ ಲೈವ್ ಟಿವಿ ಹಾಗು ಲೈವ್ ಕ್ರಿಕೆಟ್ ನೋಡುಗರ ದಿನೇ ದಿನೇ ಹೆಚ್ಚುತ್ತಿದ್ದು ಇವರನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾದ ಪ್ಯಾಕ್ ತರಲಿದೆ ಜಿಯೋ. ಜಿಯೋ ಕ್ರಿಕೆಟ್ ಸೀಸನ್ ಪ್ಯಾಕ್ ಈಗ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.

 

 

ಜಿಯೋ ಬಳಕೆ ಮಾಡುವ ಕ್ರಿಕೆಟ್ ಅಭಿಮಾನಿಗಳಿಗಾಗಿಯೇ ಜಿಯೋ ಕ್ರಿಕೆಟ್ ಸೀಸನ್ ಪ್ಯಾಕ್ ಬರಲಿದ್ದು ಈ ಪ್ಲಾನ್ ಬೆಲೆ ರೂ.251 ಆಗಿರಲಿದೆ. ಈ ಪ್ಯಾಕ್ ಅಡಿಯಲ್ಲಿ ಜಿಯೋ ತನ್ನ ಬಳಕೆದಾರರಿಗೆ 102 GB ಡೇಟಾವನ್ನು ನೀಡಲಿದೆ ಎಂದು ಜಿಯೋ ತಿಳಿಸಿದೆ.

 

ಈ ಪ್ಯಾಕ್ ವ್ಯಾಲಿಡಿಟಿ 51 ದಿನ ಇರಲಿದೆ. ಐಪಿಎಲ್ ಪಂದ್ಯ ಮುಗಿದ ಬಳಿಕ ಈ ಪ್ಯಾಕ್ ವ್ಯಾಲಿಡಿಟಿ ಕೂಡ ಮುಗಿಯಲಿದೆ. ಜಿಯೋ ಸದ್ಯಕ್ಕೆ ಈ ಪ್ಯಾಕ್ ಬಗ್ಗೆ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಿಲ್ಲ. ಜಿಯೋ ನಾಳೆ ಈ ಪ್ಯಾಕ್ ಬಗ್ಗೆ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top