fbpx
ಭವಿಷ್ಯ

ಏಪ್ರಿಲ್ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ಕನ್ಯಾ ರಾಶಿ ತಿಂಗಳ ಭವಿಷ್ಯ 

 

 

ಕೆಲಸ ಮತ್ತು ವ್ಯಾಪಾರ .

ಕೆಲಸ ಮತ್ತು ವ್ಯಾಪಾರಗಳಿಗೆ ಸಂಬಂಧಪಟ್ಟಂತೆ, ಈ ತಿಂಗಳು ನೀವು ಮನೆಯಿಂದ ದೂರ ವಾಸ ಇರಬೇಕಾಗಿ ಬರಬಹುದು.ನೀವು ಯಾವುದೇ ಹೊಸ ವ್ಯಾಪಾರಗಳನ್ನು ಪ್ರಾರಂಭಿಸಬೇಕು ಎಂದು ಇದ್ದರೆ ಈ ತಿಂಗಳ ಮಧ್ಯದಲ್ಲಿ ತುಂಬಾ ಶುಭ ಸಮಯವಾಗಿದೆ. ಆಗ ಪ್ರಾರಂಭಿಸಿ. ಆರ್ಥಿಕ ಸ್ಥಿತಿ ಈ ಸಮಯ ತುಂಬಾ ಚೆನ್ನಾಗಿದೆ .ನೀವು ಮಾಡುವ  ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ನಿಮ್ಮ ತಂದೆಯ ಸಲಹೆಯನ್ನು ಪಡೆದುಕೊಳ್ಳಿ. ಆವಾರ  ಸಹಯೋಗ ಮತ್ತು ಸಲಹೆ ನಿಮಗೆ ಉಪಯುಕ್ತವಾಗಲಿದೆ ಮತ್ತು ಸಹಾಯಕವಾಗಲಿದೆ.ಇದರಿಂದ ಉತ್ತಮವಾದ ಧನಲಾಭವೂ ಆಗುವ ಸಂಕೇತವಿದೆ .

ವಿದ್ಯಾರ್ಥಿಗಳಿಗೆ.

ಈ ಸಮಯ  ವಿದ್ಯಾರ್ಥಿಗಳಿಗೆ ಉನ್ನತಿಯ ಸಮಯವಾಗಿದೆ .ಶಿಕ್ಷಣ ಕ್ಷೇತ್ರಗಳಲ್ಲಿ ಆಶ್ಚರ್ಯಕರವಾಗಿ ಪ್ರಗತಿಯನ್ನು ಕಾಣಬಹುದಾಗಿದೆ.

 

 

ಮನೆ ಮತ್ತು ಸಂಸಾರಕ್ಕೆ ಸಂಬಂಧಪಟ್ಟಂತೆ.

ಸಮಯ ಸ್ವಲ್ಪ ಸಂಘರ್ಷಮಯವಾಗಿ ಇರಲಿದೆ. ನಿಮ್ಮ ತಾಯಿಯ ಆರೋಗ್ಯ ಕಡೆ ಹೆಚ್ಚು ಗಮನ ವಹಿಸಿ. ನಿಮ್ಮ  ಸಂಬಂಧಿಕರು ನಿಮಗೆ ತೊಂದರೆಯನ್ನು ಸಮಸ್ಯೆಗಳನ್ನು ತಂದೊಡ್ಡುತ್ತಾರೆ. ನಿಮ್ಮ ಮಾನಸಿಕ ಶಾಂತಿಯೂ ಕೂಡ ಈ ಸಮಯದಲ್ಲಿ ಹದಗೆಡುವ ಸಾಧ್ಯತೆ ಇದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ದಾಂಪತ್ಯ ಜೀವನದಲ್ಲಿ ಉತ್ತಮವಾದ ವಾತಾವರಣ ಇರುತ್ತದೆ. ವೈವಾಹಿಕ ಸಂಬಂಧಗಳಲ್ಲಿ ಪ್ರೇಮ ವಿಷಯಗಳಲ್ಲಿ ಈ ತಿಂಗಳು ತುಂಬಾ ಚೆನ್ನಾಗಿದ್ದು.ನೀವು ಯಾವುದೋ ಒಬ್ಬ ವಿಶೇಷ ವ್ಯಕ್ತಿಗೆ ಆಕರ್ಷಿತರಾಗುತ್ತೀರ.

ಆರೋಗ್ಯ.

ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು. ಆರೋಗ್ಯಕ್ಕೆ ಸಂಬಂಧಪಟ್ಟಂತೆ ತಕ್ಷಣ ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳನ್ನು ನಿಧಾನವಾಗಿ ನೀವೇ ಪರಿಹರಿಸಿಕೊಳ್ಳಿ. ಬಾಳ ಸಂಗಾತಿಯ ಬಳಿಯಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳಿ. ನಿಮಗೆ ಹಿರಿಯ ಮಹಿಳೆಯೊಬ್ಬರು ನಿಮ್ಮ ಹಿರಿಯರ ಆಸ್ತಿಗೆ ಸಂಬಂಧಪಟ್ಟ ವಿಚಾರದಲ್ಲಿ ನಿಮಗೆ ಅನಿರೀಕ್ಷಿತವಾಗಿ ಸಹಾಯಕ್ಕೆ ಮುಂದಾಗುತ್ತಾರೆ. ನೈತಿಕ ಸ್ಥೈರ್ಯ ಸಂಪಾದಿಸಿಕೊಳ್ಳಲು ಇದರಿಂದ ಸುಲಭ ದಾರಿ ಲಭ್ಯವಾಗುತ್ತದೆ .

 

 

ಸಂಕಲ್ಪಿತ ಕಾರ್ಯ ಸಿದ್ಧಿಗೆ ಯಶಸ್ಸು ಒದಗಿ ಬರಲು ಪಾರ್ವತಿ ಅಷ್ಟೋತ್ತರ ಪಠಿಸಿ .ಶುಭ ಸಂಖ್ಯೆ ಐದು, ಮೂರು, ಏಳು ,ಒಂಬತ್ತು, ಮತ್ತು ಒಂದು. ಶುಭ ದಿನ ಶನಿವಾರ. ಶುಭ ಹರಳು ವಜ್ರ. ಶುಭ ಬಣ್ಣ ನೀಲಿ. ವಿಶೇಷ ಸಲಹೆ ನೀವು ಯಾವುದೇ ತಿಂಗಳಿನ ಎಂಟನೇ ತಾರೀಖಿನಂದು ಜನಿಸಿದವರಾಗಿದ್ದಾರೆ, ನಿಮ್ಮ ಅಧಿಪತಿ ಶನಿ ಆದ್ದರಿಂದ ಶನಿದೇವರ ಮಂತ್ರವನ್ನು ಕನಿಷ್ಠ ಹತ್ತ ಬಾರಿ ಪಠಿಸಿ. ಶನಿ ಜಪ ಮಂತ್ರ

“ ಓಂ ನೀಲಾಂಜನ ಸಮಾಭಾಸಂ,

ರವಿಪುತ್ರಂ ಯಮಾಗ್ರಜಂ

ಛಾಯಾ ಮಾರ್ತಾಂಡ  ಸಂಭೂತಂ,

ತಂ  ನಮಾಮಿ ಶನೈಶ್ಚರಂ”

ಇನ್ನು ಕನ್ಯಾ ರಾಶಿಯವರು ನಿಮ್ಮ ಮನೆಯಲ್ಲಿ ನವಿಲುಗರಿಯನ್ನು ಇಟ್ಟು ಕೊಂಡರೆ ಒಳ್ಳೆಯದಾಗುತ್ತದೆ ಅದು ಶುಭದಾಯಕವಾಗಿದೆ.

 

ಇತರ ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

ಏಪ್ರಿಲ್ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top