fbpx
ಭವಿಷ್ಯ

ಏಪ್ರಿಲ್ 2018 ತುಲಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ತುಲಾ ರಾಶಿ ತಿಂಗಳ ಭವಿಷ್ಯ 

 

 

ವ್ಯಾಪಾರ ಹಾಗೂ ಹಣಕಾಸು.

ವ್ಯಾಪಾರ ಹಾಗೂ ಹಣಕಾಸಿನ ವಿಷಯಗಳಲ್ಲಿ ನೋಡಿದರೆ ವಿಶೇಷವಾಗಿ ಈ ತಿಂಗಳು ಜಾಗ್ರತೆಯಿಂದ ಇರಬೇಕು. ನಿಮ್ಮ ತಪ್ಪುಗಳಿಂದಲೇ  ನಿಮ್ಮ ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ನೀವು ಮಾಡುವ ತಪ್ಪುಗಳಿಂದ ನಷ್ಟವಾಗಲಿದೆ .ಆದ್ದರಿಂದ ವ್ಯಾಪಾರಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವುದಕ್ಕೂ ಮುಂಚೆ ಸ್ವಲ್ಪ ತಾಳ್ಮೆಯಿಂದ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ. ಬಹಳಷ್ಟು ಜಾಗ್ರತೆಯನ್ನು ವಹಿಸಿ. ಬೇರೆಯವರಿಗೋಸ್ಕರ ಕೆಲಸ ಮಾಡಬೇಡಿ. ನಿಮಗೋಸ್ಕರ ನೀವು ಕೆಲಸ ಮಾಡಿ . ಯಾರ ಒತ್ತಡಕ್ಕೂ ಒಳಗಾಗಬೇಡಿ. ಸಣ್ಣಪುಟ್ಟ ಜಗಳ ಬರುವುದು, ಮೋಸ ಹೋಗುವುದು ಈ ತಿಂಗಳು ಸಾಧ್ಯತೆಗಳಿವೆ .

ಸಣ್ಣ ವ್ಯಾಪಾರವಾಗಿ ರಲ್ಲಿ ದೊಡ್ಡ ವ್ಯಾಪಾರವಾಗಿರಲಿ ಅಗತ್ಯವಾಗಿ ಜಾಗ್ರತೆಯನ್ನು ವಹಿಸಿ. ಎಲ್ಲವೂ ನಿಮ್ಮ ಹಿಡಿತದಲ್ಲಿ ಇರುವ ಹಾಗೆ ನೋಡಿಕೊಳ್ಳಿ. ಬೇಜವಾಬ್ದಾರಿತನ ಬೇಡ .ನೀವಾಡುವ ಮಾತು ಇದರ ಮೇಲೆ ಪ್ರಭಾವ ಬೀಳುತ್ತದೆ ಆದ್ದರಿಂದ ಮಾತನಾಡುವ ಮುನ್ನ ಸ್ವಲ್ಪ ಯೋಚನೆ ಮಾಡಿ ಮಾತನಾಡಿ. ತಾಳ್ಮೆಯಿಂದ ವರ್ತಿಸಿ .ಏಪ್ರಿಲ್  ಹತ್ತೊಂಬತ್ತನೇ ತಾರೀಕಿನ ನಂತರ ನಿಮಗೆ ಒಳ್ಳೆಯ ದಿನಗಳು ಬರಲಿವೆ. ಆದರೂ ಕೂಡ ನಿಮ್ಮ ಎಚ್ಚರಿಕೆಯಲ್ಲಿ ನೀವು ಈ ತಿಂಗಳು ಇರುವುದು ತುಂಬಾ ಒಳ್ಳೆಯದು. ಹಣಕಾಸಿನ ವಿಷಯಕ್ಕೂ ಸಹ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹಣವನ್ನು ಯಾರಿಗೂ ಕೊಡಲು ಹೋಗಬೇಡಿ ತೆಗೆದುಕೊಳ್ಳಲು ಹೋಗಬೇಡಿ.

 

 

ಸಂಸಾರ ಹಾಗೂ ಸಂಬಂಧದಲ್ಲಿ .

ಈ ತಿಂಗಳ ಶುರುವಿನಿಂದಲೇ ನಿಮ್ಮ ಸಂಬಂಧಗಳಲ್ಲಿ ಸುಧಾರಣೆ ಮಾಡುವುದನ್ನು ಮಾಡಬೇಕು. ಸತಿಪತಿಯರಿಬ್ಬರೂ ಒಬ್ಬರಿಗೊಬ್ಬರು ಇಷ್ಟವಾಗುವಂತೆ ನಡೆದುಕೊಳ್ಳಬೇಕು . ಮಂಗಳ ಕಾರ್ಯಗಳು ನಡೆಯಬಹುದು ನಡೆಯುವ ಸಾಧ್ಯತೆಗಳಿವೆ. ನಿಮ್ಮ ಮಾತು ಹಿಡಿತದಲ್ಲಿ ಇರಲಿ.

ವಿದ್ಯಾರ್ಥಿಗಳಿಗೆ.

ಯಾರು ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಮಾಡುತ್ತಿದ್ದಾರೋ ಅವರಿಗೆ ಈ ತಿಂಗಳು ಶುಭ ಸಮಯವಾಗಿದೆ . ಯಾವುದೇ ಉನ್ನತ ವಿದ್ಯಾಭ್ಯಾಸಕ್ಕೂ ಕೂಡ ಇದು ಉತ್ತಮ ಸಮಯವಾಗಿದೆ. ಏಪ್ರಿಲ್ ಹತ್ತೊಂಬತ್ತನೇ ತಾರೀಖಿನ ನಂತರ ವಿದ್ಯಾರ್ಥಿಗಳಿಗೆ ಹೆಚ್ಚು ಆಸಕ್ತಿ ಮೂಡಲಿದೆ. ಏನಾದರೂ ಸಾಧಿಸಬೇಕು ಎನ್ನುವ ಛಲ ಕೂಡ ಇವರಲ್ಲಿ ಮೂಡಲಿದೆ. ನಿಮ್ಮಲ್ಲಿರುವ  ಈ ಒಂದು ಶಕ್ತಿ ನಿಮ್ಮನ್ನು ಒಳ್ಳೆಯ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುತ್ತದೆ. ಸಮಯವನ್ನು ವ್ಯರ್ಥವಾಗಿ ಕಳೆಯಬೇಡಿ. ಪ್ರೀತಿ, ಪ್ರೇಮದ ವಿಷಯಗಳ ಕಡೆ ಗಮನ ಕೊಡದೆ ವಿದ್ಯಾಭ್ಯಾಸದತ್ತ ಗಮನ ಕೊಡಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಿಮ್ಮ ಇದೇ ಆದ ತಯಾರಿಯನ್ನು ಮಾಡಿಕೊಳ್ಳಿ.

 

 

ಉದಾಹರಣೆಗೆ-  

ನೀವು ಏನು ಮಾಡಬೇಕು ? ಮುಂದೆ ಏನು ಓದಬೇಕು ? ಎನ್ನುವುದನ್ನು ಮೊದಲು ನೀವೇ ನಿರ್ಧಾರ ಮಾಡಿ ಮುಂದೆ ಹೋಗಿ .ಬೇರೆಯವರು ಹೇಳಿದ ಮಾತುಗಳನ್ನು ಕೇಳಿಕೊಂಡು ಮುನ್ನಡೆಯ ಬೇಡಿ.

ಆರೋಗ್ಯ.

ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕಾಲು, ಹೊಟ್ಟೆ ಹಾಗೂ ಬೆರಳಿಗೆ ಸಂಬಂಧಪಟ್ಟಂತೆ ಗಮನ ಕೊಡಬೇಕು. ಊಟ, ಧ್ಯಾನ, ವ್ಯಾಯಾಮ ಸರಿಯಾದ ಸಮಯದಲ್ಲಿ ಮಾಡಿ. ಚಿಂತೆಯನ್ನು ಬಿಡಿ. ಇದೇ ನಿಮ್ಮ ಆರೋಗ್ಯಕ್ಕೆ ಯಶಸ್ಸಿನ ಸೂತ್ರವಾಗಿದೆ. ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ .

ಕೆಲಸ.

ಕೆಲಸ ಬದಲಿಸಲು ಈ ತಿಂಗಳು ಒಳ್ಳೆಯ ಸಮಯ ಅಲ್ಲ .ಯಾವ ಕೆಲಸ ಮಾಡುತ್ತಿದ್ದರೂ ಅದರಲ್ಲೇ ಮುಂದುವರಿಯುವುದು ಮತ್ತು ಬಹಳಷ್ಟು ಯಶಸ್ಸನ್ನು ಕಾಣಲು ಪ್ರಯತ್ನಿಸಿ .ನಿಮ್ಮ ಕೆಲಸಗಳು ಬೇರೆಯವರಿಗೆ ತಿಳಿಯುವಂತೆ ನೀವೇ ಮಾಡಿಕೊಳ್ಳಬೇಕು. ನಿಮ್ಮನ್ನು ನೀವೇ ಪರಿಚಯಿಸಿ ಕೊಳ್ಳಬೇಕು . ಖರ್ಚು ಹೆಚ್ಚಾಗಬಹುದು. ನೀವು ಕೆಲಸದ ವಿಷಯಗಳಲ್ಲಿ ಬೇರೆ ಸ್ಥಳಕ್ಕೆ ಹೋದರೆ ನಿಮಗೆ ಹೆಚ್ಚು ಲಾಭವಾಗುವ ಸಾಧ್ಯತೆಗಳಿವೆ. ಏಪ್ರಿಲ್ ಹದಿನಾಲ್ಕನೇ ತಾರೀಖಿನ ನಂತರ ನಿಮಗೆ ಉತ್ತಮ ಸಮಯ ಬರಲಿದೆ.

ಈ ದಿನಾಂಕಗಳಲ್ಲಿ ನೀವು ಶಾಂತವಾಗಿ ಇರಬೇಕು. ಎಚ್ಚರಿಕೆಯಿಂದ ಎಲ್ಲ ವಿಷಯಗಳಲ್ಲಿಯೂ 27,28,19,18,9,10 ಈ ದಿನಾಂಕಗಳಲ್ಲಿ ನೀವು ತುಂಬಾ ವಿಶೇಷವಾಗಿ ಎಲ್ಲ ರೀತಿಯಲ್ಲೂ ಎಚ್ಚರವಾಗಿ ಇರಬೇಕು . ವಿಶೇಷವಾದ ಗಮನವನ್ನು ಕೊಡಬೇಕು. ಆದರೆ ಈ ದಿನಗಳು ಹೆಚ್ಚಾಗಿ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ. ಮನಸ್ಸಿಗೆ ಬೇಜಾರ ಆಗುವಂತಹ ಸಂದರ್ಭಗಳು ಎದುರಾಗಬಹುದು .ತಾಳ್ಮೆ ಇರಲಿ ಬೇಜವಾಬ್ದಾರಿತನ ಕೋಪ ಬೇಡ .

 

ಇತರ ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

ಏಪ್ರಿಲ್ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top