fbpx
ಭವಿಷ್ಯ

ಏಪ್ರಿಲ್ 2018 ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ವೃಶ್ಚಿಕ ರಾಶಿ ತಿಂಗಳ ಭವಿಷ್ಯ 

 

 

ವ್ಯಾಪಾರ ಹಾಗೂ ಹಣಕಾಸು.

ವ್ಯಾಪಾರ ಹಾಗೂ ಹಣಕಾಸಿನ ವಿಷಯಗಳಲ್ಲಿ ನೋಡುವುದಾದರೆ ಏಪ್ರಿಲ್  ಹದಿನೆಂಟನೇ ತಾರೀಕಿನವರೆಗೂ ವ್ಯಾಪಾರ ವಿಷಯಗಳಲ್ಲಿ ಅಡೆತಡೆ ಉಂಟಾಗಬಹುದು. ನಿಮ್ಮ ವ್ಯಾಪಾರಕ್ಕೆ ಸಂಬಂಧ ಕೆಲಸಗಳಲ್ಲಿ ನಿಧಾನ ಅಥವಾ ಮೋಸ ಹೋಗಬಹುದು ಅಥವಾ ನಷ್ಟವನ್ನು ಅನುಭವಿಸಬಹುದು. ಆದ್ದರಿಂದ ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಸ್ವಲ್ಪ ಎಚ್ಚರ ವಹಿಸಿ ಮುನ್ನಡೆಯುವುದು ಒಳ್ಳೆಯದು. ಅತಿಯಾದ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ವಿನಾಕಾರಣ ಬೇಜವಾಬ್ದಾರಿತನವನ್ನು ತೋರಿಸಬೇಡಿ. ನಿರ್ಲಕ್ಷ್ಯ ವಹಿಸಬೇಡಿ.ಏಪ್ರಿಲ್ ಹತ್ತೊಂಬತ್ತನೇ ತಾರೀಖಿನಿಂದ ಈ ತಿಂಗಳ ಕೊನೆಯವರೆಗೂ ವ್ಯಾಪಾರ ಹಾಗೂ ಹಣಕಾಸಿನ ವಿಷಯಗಳಲ್ಲಿ ಸಮಯ ತುಂಬಾ ಚೆನ್ನಾಗಿದೆ.

ನೀವು ಯಾವುದೇ ಕೆಲಸವನ್ನು ಕೂಡ ಈ ಸಮಯದಲ್ಲಿ ಮಾಡಬಹುದು.ನಿಮಗೆ ಬರಬೇಕಾಗಿರುವ ಹಣ ಕೊನೆ ಗಳಿಗೆಯಲ್ಲಿ ತಡವಾಗಬಹುದು ಅಥವಾ ಬರದೆಯೇ ಇರಬಹುದು. ಹಣ ಕೈ ಸೇರುವವರೆಗೂ ಸಹ ನಿಮ್ಮ ಪ್ರಯತ್ನವನ್ನು ಮುಂದುವರೆಸಿ .ಹಣ ಬಂದ ಮೇಲೆ ನಿಮ್ಮ ಕೆಲಸವನ್ನು ಮುಂದುವರಿಸಿ , ಹಣವಿಲ್ಲದೆ ನಿಮ್ಮ ಕೆಲಸವನ್ನು ಮುಂದುವರಿಸಲು ಹೋಗಬೇಡಿ. ನೀವು ಆಗ ತೊಂದರೆಗೆ ಸಿಲುಕಿಕೊಳ್ಳುತ್ತೀರಿ. ನಿಮ್ಮ ಕೆಲಸಗಳಲ್ಲಿ ವಿಳಂಬ ಕಿರಿಕಿರಿ ಇದ್ದದ್ದೇ, ಇದು ಶನಿಯ ಪ್ರಭಾವದ ಕಾರಣದಿಂದ ಇದೆ. ಆದ್ದರಿಂದ ಆದಷ್ಟು ತಾಳ್ಮೆಯಿಂದ ವರ್ತಿಸಿ .

 

 

ಸಂಸಾರ ಹಾಗೂ ಸಂಬಂಧ.

ಸಂಸಾರ ಹಾಗೂ ಸಂಬಂಧಕ್ಕೆ ಪಟ್ಟ ವಿಷಯಗಳಲ್ಲಿ ಹೇಳುವುದಾದರೆ ಏಪ್ರಿಲ್ ಹದಿನೆಂಟನೇ ತಾರೀಖಿನವರೆಗೆ ಮನಃಶಾಂತಿ ಇರುವುದಿಲ್ಲ . ಮಾನಸಿಕ ಒತ್ತಡ ಹೆಚ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಕಿರಿಕಿರಿ , ವೈಮನಸ್ಯ, ಕೋಪ, ಜಗಳಗಳು ಉಂಟಾಗಬಹುದು . ಆದರೆ ಏಪ್ರಿಲ್ ಹತ್ತೊಂಬತ್ತನೇ ತಾರೀಖಿನ ನಂತರ ನಿಮ್ಮ ದಾಂಪತ್ಯ ಜೀವನದಲ್ಲಿ ಸುಧಾರಣೆ ಕಂಡುಬರಲಿದೆ. ಸಂತೋಷದ ಸಮಯ ಬರಲಿದೆ .ಮಕ್ಕಳ ವಿಷಯಗಳಲ್ಲಿ ನೋಡಿದರೆ ಶುಭ ವಿಚಾರ ಶುಭ ವಾರ್ತೆಗಳನ್ನು ಕೇಳಲಿದ್ದೀರಿ.

ವಿದ್ಯಾರ್ಥಿಗಳಿಗೆ.

ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಕಾನೂನು ,ವ್ಯಾಪಾರ, ಹಣಕಾಸು, ಕನ್ಸಲ್ಟೆನ್ಸಿ ಈ ರೀತಿಯ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ನೀವು ನಿರೀಕ್ಷಿಸುತ್ತಿರುವ ಯಶಸ್ಸು ಈ ಸಮಯದಲ್ಲಿ ಈ ತಿಂಗಳಿನಲ್ಲಿ ಸಿಗುವುದಿಲ್ಲ. ನಿಮ್ಮ ಮನಸ್ಸನ್ನು ವಿದ್ಯಾಭ್ಯಾಸದ ಕಡೆಗೆ ಸೀಮಿತವಾಗಿ ಇಡುವುದು ತುಂಬಾ ಮುಖ್ಯವಾಗಿದೆ. ಸ್ನೇಹಿತರ ಜತೆ ಜಗಳ ಕೆಟ್ಟ ಸಹವಾಸಗಳು ದಾಸರಾಗುವ ಸಂಭವ ಇದೆ. ಆದ್ದರಿಂದ ಜಾಗ್ರತೆ ವಹಿಸುವುದು ಉತ್ತಮ. ವಿದ್ಯಾಭ್ಯಾಸದ ಕಡೆ ಗಮನ ಕೊಡಿ. ಪೋಷಕರು ವಿಶೇಷವಾಗಿ ಈ ತಿಂಗಳು ಮಕ್ಕಳ ಕಡೆ ಗಮನಹರಿಸಬೇಕು.

ಆರೋಗ್ಯ .

ಯಾರು ಗ್ಯಾಸ್, ಅಸಿಡಿಟಿ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಿ ಅಂಥವರು ಸರಿಯಾದ ಸಮಯದಲ್ಲಿ ಔಷಧಿಯನ್ನು ತೆಗೆದುಕೊಳ್ಳಬೇಕು . ಬಹಳ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ತೊಂದರೆ ಕಂಡು ಬಂದರೂ ಸಹ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಸೂಕ್ತ ಸಲಹೆಯನ್ನು ಪಡೆದುಕೊಳ್ಳಿ . ಇನ್ನೂ ಯಾರಾದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಇದ್ದರೆ ಈ ತಿಂಗಳು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೆ ತುಂಬಾ ಒಳ್ಳೆಯ ಸಮಯವಾಗಿದೆ. ವೃಶ್ಚಿಕ ರಾಶಿಯವರಿಗೆ ಹಲ್ಲು ನೋವು ಹಾಗೂ ಮೂಳೆ ನೋವುಗಳು ಈ ತಿಂಗಳು ಕಾಣಿಸಿಕೊಳ್ಳಬಹುದು. ನಿಮ್ಮ ಶತ್ರುಗಳು ನಿಮ್ಮನ್ನು ತುಳಿಯುವ ಪ್ರಯತ್ನವನ್ನು ಮಾಡುತ್ತಾರೆ. ಅದರಿಂದ ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ ನೀವೇ ಗೆಲ್ಲುತ್ತೀರಿ .

ಕೆಲಸಕ್ಕೆ ಸಂಬಂಧಪಟ್ಟಂತೆ 

ಕೆಲಸ ಬದಲಿಸಲು ಅಥವಾ ಕೆಲಸ ಹುಡುಕಲು ಇದು ಒಳ್ಳೆಯ ಸಮಯ ಅಲ್ಲ. ನೀವು ಕೆಲಸದ ವಿಷಯವಾಗಿ ನಿಮ್ಮ ಮೇಲ್ವರ್ಗದ ಅಧಿಕಾರಿಗಳ ಜತೆ ಮಾತನಾಡಬೇಕು ಎಂದರೆ ಏಪ್ರಿಲ್ ಹದಿನಾಲ್ಕನೇ ತಾರೀಕಿನ ನಂತರ ನಿಮಗೆ ತುಂಬಾ ಒಳ್ಳೆಯ ಸಮಯವಾಗಿದೆ .

 

ಇತರ ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

ಏಪ್ರಿಲ್ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ತುಲಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top