ಸಮಾಚಾರ

ನಾಲ್ಕು ವರ್ಷದ ಹೆಣ್ಣು ಮಗುವನ್ನು ಕೊಂದು ,ಕೈಗಳನ್ನೂ ಕತ್ತರಿಸಿ ಕೊಂಡು ಹೋದ ಪಾಪಿಗಳು :

ನಾಲ್ಕು ವರ್ಷದ ಹೆಣ್ಣು ಮಗುವನ್ನು ಕೊಂದು ,ಕೈಗಳನ್ನೂ ಕತ್ತರಿಸಿ ಕೊಂಡು ಹೋದ ಪಾಪಿಗಳು :

 

 

 

 

 

 

 

 

 

 

 

 

 

 

 

 

 

 

 

ಮಹಾರಾಷ್ಟ್ರದ ಥಾಣೆಯ ಗೌತಮ್ ನಗರದ ನಿವಾಸಿಯಾದ ನಾಲ್ಕು ವರ್ಷದ ಮಗು ಮಂಗಳವಾರ ತನ್ನ ಅಣ್ಣನ ಜೊತೆ ಆಟವಾಡಲು ತನ್ನ ಮನೆಯ ಹತ್ತಿರವಿದ್ದ ಆಟದ ಮೈದಾನಕ್ಕೆ ಹೋಗುತ್ತದೆ ,ಸ್ವಲ್ಪ ಸಮಯದ ನಂತರ ಆಕೆಯ ಅಣ್ಣ ಆಯಾಸ ವಾಗಿ ಈ ಹುಡುಗಿ ತನ್ನ ಫ್ರೆಂಡ್ಸ್ ಗಳ ಜೊತೆ ಆಟ ಆಡುವುದನ್ನು ಕಂಡು ಆಮೇಲೆ ಬರುತ್ತಾಳೆ ಎಂದುಕೊಂಡು ಒಬ್ಬನೇ ಮನೆಗೆ ಹಿಂದಿರುಗುತ್ತಾನೆ .

ಆದರೆ ಎಷ್ಟು ಸಮಯವಾದರೂ ಆ ಮಗು ವಾಪಸು ಮನೆಗೆ ಬಾರದಿರುವುದನ್ನು ಕಂಡು ಎಲ್ಲ ಕಡೆ ಹುಡುಕುತ್ತಾರೆ ಆಕೆಯ ಪೋಷಕರು ,ಆದರೆ ಆ ಮಗು ಎಲ್ಲೂ ಕಾಣದಿರುವುದನ್ನು ನೋಡಿ ಭಯದಿಂದ ಅಲ್ಲಿನ ಪೊಲೀಸ್ ಕಾಣೆಗೆ ಕಂಪ್ಲೇಂಟ್ ನೀಡುತ್ತಾರೆ .
ಆ ಮಗುವಿನ ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಆ ಮಗುವಿಗಾಗಿ ಹುಡುಕಾಟ ಶುರು ಮಾಡುತ್ತಾರೆ ಕೊನೆಗೆ ಬುಧವಾರ ಸಂಜೆಯ ಸಮಯದಲ್ಲಿ ಕೈಗಳು ಇಲ್ಲದ ಒಂದು 4 ವರ್ಷದ ಚಿಕ್ಕ ಹೆಣ್ಣು ಮಗುವಿನ ಶವ ಪತ್ತೆಯಾಗುತ್ತದೆ .

ನಂತರ ತಿಳಿದುಬಂದ ವಿಚಾರ ಆ ಶವ ಬೇರೆ ಯಾರದು ಅಲ್ಲ ಪೊಲೀಸರು ಹುಡುಕುತ್ತಿದ್ದ ಮಗುವಿನ ಶವವೆಂದು ,ಆ ಮಗುವಿನ ಶವ ಸಿಕ್ಕಿದು ಬೇರೆ ಎಲ್ಲೂ ಅಲ್ಲ ಆ ಮಗುವಿನ ಮನೆಯ 300 ಮೀಟರ್ ದೂರದ ಒಂದು ಪೊದೆಯಲ್ಲಿ .
ಪೊಲೀಸರು ಹೇಳುವಂತೆ ಆ ಮಗುವಿನ ಕತ್ತಿನ ಹಿಂದೆ ತುಂಬಾ ಗಾಯದ ಗುರುತುಗಳು ಇದೆಯಂತೆ ,ಈಗ ಆ ಮಗುವಿನ ಶವವನ್ನು ಪೋಸ್ಟ್ ಮಾರ್ಟಮ್ ಗೆ ಕಳುಯಿಸಲಾಗಿದೆ ,

ಈ ಮಗುವಿನ ಕೊಲೆಯ ಉದ್ದೇಶವಾಗಲಿ ಕೊಲೆಗಾರರ ಸುಳಿವಾಗಲಿ ಇನ್ನು ತಿಳಿದು ಬಂದಿಲ್ಲ ,ಪೊಲೀಸರು ಕೊಲೆಗಾರರ ತೀವ್ರ ಹುಡುಕಾಟದಲ್ಲಿ ಇದ್ದಾರೆ ,ಆದರೆ ಆ ಪೋಷಕರ ಕಣ್ಣೀರು ,ಆಕ್ರಂದನ ನೋಡಿದ್ದರೆ ಕರುಳು ಕಿತ್ತುಬರುವುದು .
ಕೊಲೆಗಾರರು ಬೇಗ ಸಿಕ್ಕಿ ಹಾಕಿ ಕೊಳ್ಳಲ್ಲಿ,ಅವರು ಮಾಡಿರುವ ಇಂತ ಕೆಟ್ಟ ,ಕ್ಷಮಿಸಲಾಗದ ತಪ್ಪಿಗೆ ಅತಿ ಕಠಿಣ ಶಿಕ್ಷೆಯಾಗಿ ಆ ಮಗುವಿನ ಆತ್ಮಕ್ಕೆ ಶಾಂತಿ ದೊರೆಯಲ್ಲಿ ಎಂದು ನಾವು ಆ ದೇವರಲ್ಲಿ ಕೇಳಿ ಕೊಳ್ಳೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top